ಶಿವಣ್ಣನಿಗೆ ಅನಾರೋಗ್ಯ : ಮರುಗುತ್ತಿದೆ ಫ್ಯಾನ್ಸ್ ಮನಸ್ಸು, ಗೀತಕ್ಕನ ತ್ಯಾಗಕ್ಕೆ ಕಣ್ಣೀರಾದ ಶಿವಣ್ಣ!

By ಎಸ್ ಸುಮಂತ್

ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ಶಿವಣ್ಣನ ಬಗ್ಗೆಯೇ ಸುದ್ದಿ. ಮನುಷ್ಯ ಎಂದ ಮೇಲೆ ಅನಾರೋಗ್ಯಕ್ಕೆ ಈಡಾಗುವುದು ಸಹಜ. ನಾನು ಕೂಡ ಮನುಷ್ಯನೇ. ನನಗೂ ಆರೋಗ್ಯ ಕೈಕೊಟ್ಟಿದೆ‌ ಎಂದು ಇತ್ತೀಚೆಗಷ್ಟೇ ಶಿವಣ್ಣ ಹೇಳಿದ್ದರು.

ಸಾಮಾನ್ಯವಾಗಿ ಅನಾರೋಗ್ಯಕ್ಕೀಡಾಗಿದ್ದರೆ ಅಭಿಮಾನಿಗಳು, ಸಿನಿಪ್ರೇಮಿಗಳು ಇಷ್ಟೊಂದು ಟೆನ್ಶನ್ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಅಮೆರಿಕಾಗೆ ಹೋಗಿ ಸರ್ಜರಿ ಮಾಡಿಸಿಕೊಳ್ಳುವಷ್ಟು ಗಂಭೀರ ಸಮಸ್ಯೆಯನ್ನ ಶಿವಣ್ಣ ಎದುರಿಸುತ್ತಿದ್ದಾರೆ. ಇದು ಅಭಿಮಾನಿಗಳ ಮನಸ್ಸನ್ನು ಕದಲಿಸಿದೆ.

DKD Shivarajkumar recalls wife Geetha s sacrifices for his health

ಶಿವಣ್ಣ ನಮ್ಮ ಕನ್ನಡ ಇಂಡಸ್ಟ್ರಿಯ ಮುತ್ತು ಇದ್ದಂತೆ. ಸಿನಿಮಾ ಇಂಡಸ್ಟ್ರಿಯ ಎಷ್ಟೋ ಜನರ ಬದುಕನ್ನು ಈಗಲೂ ಉಳಿಸಿದ್ದಾರೆ. ಚಂದನವನದ ಟಾಪ್ ಒನ್ ನಟರಾಗಿದ್ದ ಅಪ್ಪು ಅಗಲಿದ್ದಾರೆ. ಇದೆಲ್ಲ ನೋಡಿ ದೊಡ್ಮನೆ ಅಭಿಮಾನಿಗಳು ಯಾರ ಕೆಟ್ಟ ಕಣ್ಣು ದೊಡ್ಮನೆ ಮೇಲೆ ಬಿದ್ದಿದೆಯೋ ಎಂದು ನೊಂದುಕೊಂಡಿದ್ದಾರೆ. ಅಷ್ಟೇ ಅಲ್ಲ ಶಿವಣ್ಣ ಬೇಗ ಹುಷಾರಾಗಲಿ ಎಂದಿದ್ದಾರೆ.

ವೇದಿಕೆ ಮೇಲೆ ಶಿವಣ್ಣ ಭಾವುಕ

ಡಿಕೆಡಿ ಕಾರ್ಯಕ್ರಮ ಮುಗಿದಿದೆ. ಇದರಲ್ಲಿ ಶಿವಣ್ಣ ಜಡ್ಜ್ ಆಗಿ ಬಂದಿದ್ದರು. ಅದರಷ್ಟು ಎನರ್ಜಿ ಎಂದರೆ ಸಿನಿಮಾದ ಜೊತೆ ಜೊತೆಗೆ ರಿಯಾಲಿಟಿ ಶೋನಲ್ಲೂ ಭಾಗಿಯಾಗ್ತಾ ಇದ್ರು. ಶಿವಣ್ಣನನ್ನ ನೋಡಿ ಕಲಿಯಬೇಕು. ಇರುವ 24 ಗಂಟೆಯನ್ನ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು. ಮೊದಲೇ ಅನಾರೋಗ್ಯ ಕಾಡುತ್ತಿದ್ದ ಶಿವಣ್ಣನಿಗೆ ಡಿಕೆಡಿ ವೇದಿಕೆ ರಿಫ್ರೆಶ್ಮೆಂಟ್ ನೀಡಿದೆ. ಇದನ್ನು ಗೀತಕ್ಕ ವೇದಿಕೆ ಮೇಲೆ ಹೇಳುತ್ತಿದ್ದಾಗಲೇ ಶಿವಣ್ಣನ ಕಣ್ಣಲ್ಲಿ ನೀರು ಬಂದಿದೆ.

ಪತ್ನಿ ಮುಡಿ ಕೊಟ್ಟಿದ್ದರ ಬಗ್ಗೆ ಮಾತು

ಶಿವಣ್ಣ ಎಂದರೆ ಕರುನಾಡಿಗೆ ಪ್ರೀತಿ. ಡಿಕೆಡಿ ವೇದಿಕೆಗೊಂದು ಕಳೆ. ಶಿವಣ್ಣ ಅನಾರೋಗ್ಯದ ಕಾರಣದಿಂದ ಕಣ್ಣೀರು ಹಾಕಿದ್ದು ವೇದಿಕೆಯಲ್ಲಿದ್ದ ಎಲ್ಲರಿಗೂ ನೋವು ಕೊಟ್ಟಿತ್ತು. ಶಿವಣ್ಣ ಯಾವುದಕ್ಕೂ ಕುಗ್ಗಬಾರದು ಎಂಬುದೇ ಇಡೀ ಕರುನಾಡ ಜನತೆಯ ಆಶಯ. ಹೀಗಾಗಿ ಶಿವಣ್ಣನ ಕಣ್ಣಲ್ಲಿ ನೀರು ನೋಡಿ ಎಲ್ಲರು ಬಂದು ಸಮಾಧಾನ ಮಾಡಿದರು. ಇದೇ ವೇಳೆ ಗೀತಕ್ಕ ಈ ಮುಂಚೆಯೂ ತನ್ನ ಆರೋಗ್ಯಕ್ಕಾಗಿ ಮುಡಿಕೊಟ್ಟಿದ್ದನ್ನು ನೆನಪಿಸಿಕೊಂಡು, ಪತ್ನಿಯ ಬೆಲೆ ಅಂದು ತಿಳಿಯಿತು ಎಂದೇ ಶಿವಣ್ಣ ಭಾವುಕರಾಗಿದ್ದಾರೆ.

ತಿರುಪತಿಯಲ್ಲಿ ಮುಡಿಕೊಟ್ಟ ಶಿವಣ್ಣ

ಇದೇ ತಿಂಗಳ ಅಂದ್ರೆ ಡಿಸೆಂಬರ್ 18 ರಂದು ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಅದಕ್ಕಾಗಿ ಅಮೆರಿಕಾಗೆ ಹೋಗಲಿದ್ದಾರೆ. ಅದಕ್ಕೂ ಮುನ್ನ ತಿರುಪತಿಗೆ ಹೋಗಿ ಮುಡಿ ಕೊಟ್ಟು ಬಂದಿದ್ದಾರೆ. ಈ ಬಾರಿ ಗೀತಕ್ಕ ಮಾತ್ರ ಅಲ್ಲ ಶಿವಣ್ಣ ಜೊತೆಗೆ ಆತ್ಮೀಯರೆಲ್ಲ ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟು, ಬೇಡಿಕೊಂಡಿದ್ದಾರೆ. ಶಿವಣ್ಣನ ಆರೋಗ್ಯಕ್ಕಾಗಿ ದೇವರ ಬಳಿ ಪ್ರಾರ್ಥಿಸಿದ್ದಾರೆ.

ಶಿವಣ್ಣನಿಗಾಗಿ ಫ್ಯಾನ್ಸ್ ಪ್ರಾರ್ಥನೆ

ನಟ ಶಿವಣ್ಣ ಅಷ್ಟು ಸುಲಭಕ್ಕೆ ಅಭಿಮಾನಿಗಳ ಮುಂದೆ ಕಣ್ಣೀರು ಹಾಕಲ್ಲ. ಆದರೆ ಅದ್ಯಾಕೋ ಏನೋ ಈ ಸಲ ಅನಾರೋಗ್ಯದ ಬಗ್ಗೆ, ಚಿಕಿತ್ಸೆಯ ಬಗ್ಗೆ ಮಾತಾಡಿದರೆ ಸಾಕು ಕಣ್ಣಲ್ಲಿ ನೀರು ಹಾಕುತ್ತಿದ್ದಾರೆ. ಇದನ್ನ ನೋಡುವುದಕ್ಕೆ ಆಗುತ್ತಿಲ್ಲ. ಶಿವಣ್ಣನಿಗ್ಯಾಕೆ ದೇವರೆ ಇಂಥ ಶಿಕ್ಷೆ ಅಂತ ಅಭಿಮಾನಿಗಳು ಮರುಗುತ್ತಿದ್ದಾರೆ. ಶಿವಣ್ಣ ಹುಷಾರಾಗಿ ಬರಲೆಂದು ಅಭಿಮಾನಿಗಳು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actor Shivarajkumar reveals his wife geetha sacrifice, and cried, video goes viral now
Read more about: sumanth shivarajkumar sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X