DKD: ಡಿಕೆಡಿ ವೇದಿಕೆಯಲ್ಲಿ 'ಓಂ' ಅಬ್ಬರ ; ಹಳೆಯ ನೆನಪುಗಳಿಗೆ ಜಾರಿದ ಶಿವಣ್ಣ-ಪ್ರೇಮಾ

By ಎಸ್ ಸುಮಂತ್

ಕನ್ನಡ ಚಿತ್ರರಂಗದಲ್ಲಿ 'ಓಂ' ಸಿನಿಮಾವನ್ನ ಯಾರಾದ್ರೂ ಮರೆಯುವುದಕ್ಕೆ ಸಾಧ್ಯವಾ? ಹಿಸ್ಟರಿ ಕ್ರಿಯೇಟ್ ಮಾಡಿದಂತ ಸಿನಿಮಾ. ಸದಾ ಕಾಡುವ ಸಿನಿಮಾ. ಸಿನಿಪ್ರಿಯರ ಮೋಸ್ಟ್ ಫೇವರಿಟ್ ಸಿನಿಮಾ.

ಶಿವರಾಜ್ಕುಮಾರ್ ಹಾಗೂ ಪ್ರೇಮಾ ಅವರ ನಟನೆ ಕಣ್ಣಲ್ಲಿ ಅಚ್ಚಳಿಯದಂತೆ ಉಳಿದಿದೆ. ಇದೀಗ ಅದಷ್ಟು ಸನ್ನಿವೇಶಗಳು ಡಿಕೆಡಿ ವೇದಿಕೆಯಲ್ಲಿ ಮರು ಸೃಷ್ಟಿಯಾಗಿವೆ. ಪ್ರೇಮಾ ಹಾಗೂ ಶಿವಣ್ಣ ಹಳೆಯ ನೆನಪುಗಳಿಗೆ ಜಾರಿದ್ದಾರೆ.

DKD show Dhanush recreated OM film scene in front of Shivarajkumar and Prema

ಡಿಕೆಡಿ ವೇದಿಕೆಯಲ್ಲಿ ನೆನಪುಗಳನ್ನು ಮರಳಿಸುವ ಕೆಲಸ ಆಗ್ತಾನೇ ಇರುತ್ತವೆ. ಹಿಸ್ಟರಿ ಕ್ರಿಯೇಟ್ ಮಾಡಿದಂತ ಪಾತ್ರಗಳು, ದೃಶ್ಯಗಳನ್ನು ಸ್ಪರ್ಧಿಗಳು ಅಭಿನಯಿಸುವ ಮೂಲಕ ಖುಷಿ ನೀಡುತ್ತಾರೆ, ಸಂಭ್ರಮಿಸುತ್ತಾರೆ. ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಡಿಕೆಡಿ ಕಾರ್ಯಕ್ರಮದ ವೇದಿಕೆಯಲ್ಲೂ ಅಂಥದ್ದೊಂದು ದೃಶ್ಯ ವೈಭವ ನಡೆದಿದೆ.

ಡಿಕೆಡಿಯಲ್ಲಿ 'ಓಂ' ವೈಭವ

ಈ ವೇದಿಕೆಯಲ್ಲಿ ವಿಭಿನ್ನವಾದ ಡ್ಯಾನ್ಸ್ ಶೋಗಳು ಕಾಣಸಿಗುತ್ತವೆ. ವಾರ ವಾರವೂ ವಾವ್ ಎನಿಸುವಂತೆ ಹೆಜ್ಜೆ ಹಾಕುತ್ತಾರೆ. ಯಾಕಂದ್ರೆ ದಿನಕಳೆದಂತೆ ಸ್ಪರ್ಧೆ ಟಫ್ ಆಗುತ್ತಾ ಹೋಗುತ್ತದೆ. ನಾವೂ ಗೆಲ್ಲಲೇಬೇಕು ಎಂದೇ ಸ್ಪರ್ಧಿಗಳು ಬಂದಿರುತ್ತಾರೆ. ಅದರಲ್ಲೂ ಈ ಬಾರಿ ಡ್ಯಾನ್ಸ್ ಮಾಡೋದಕ್ಕೆ ಇವರಿಂದ ಸಾಧ್ಯವಾ ಎಂಬ ಆರ್ಟಿಸ್ಟ್ ಗಳನ್ನು ಬೇರೆ ತಂದಿದ್ದಾರೆ. ಅದನ್ನು ಸುಳ್ಳಾಗಿಸುವಂತೆ ಡ್ಯಾನ್ಸ್ ಮಾಡ್ತಿದ್ದಾರೆ ಕಂಠಿ ಅಂಡ್ ಟೀಂ. ಹೌದು ನಟ ಧನುಷ್‌ ಈ ವಾರದ ಡ್ಯಾನ್ಸ್ ಕಾರ್ಯಕ್ರಮದಲ್ಲಿ 'ಓಂ' ಸಿನಿಮಾದ ದೃಶ್ಯವನ್ನು ಮರುಕಳುಹಿಸುವಂತೆ ಮಾಡಿದ್ದಾರೆ.

ಪ್ರೇಮಾ-ಶಿವಣ್ಣ ಮುಖದಲ್ಲಿ ನಗು

'ಓಂ' ಸಿನಿಮಾದ ಹಾಡಿಗೆ ಬರೀ ಡ್ಯಾನ್ಸ್ ಮಾಡಿರೋದಲ್ಲ. ಸ್ಟೇಜ್ ಮೇಲೆ ಅದ್ಭುತವನ್ನೇ ಕ್ರಿಯೇಟ್ ಮಾಡಿದ್ದಾರೆ. ಮನೀಷಾ ಜೊತೆಗೆ ಶುರುವಾದ ಪರ್ಫಾಮೆನ್ಸ್‌ಗೆ ಸೋನಿ ಮುಲೇವಾ ಜೊತೆಯಾಗಿದ್ದಾರೆ. ಪ್ರೇಮಾರನ್ನ ಕಾಡುವ ದೃಶ್ಯ ಒಂದು ಕಡೆ, ಶಿವಣ್ಣನ ಹಿಸ್ಟರಿ ತಿಳಿಸುವ ದೃಶ್ಯ ಮತ್ತೊಂದು ಕಡೆ.. ಆಮೇಲೆ 'ಹೇ ದಿನಕರ' ಹಾಡಿನ ವೈಭವ ಮತ್ತೊಂದು ಕಡೆ. ಒಂದೇ ವೇದಿಕೆಯಲ್ಲಿ ಅರ್ಧ ಸಿನಿಮಾವನ್ನೇ ತೋರಿಸಿದ್ದಾರೆ. ಇದನ್ನು ನೋಡಿದ ಶಿವಣ್ಣ ಹಾಗೂ ಪ್ರೇಮಾ ಮೊಗದಲ್ಲಿ ಹಳೆಯ ನೆನಪು ಕಾಡಿದ್ದು, ನಗು ಮೂಡಿದೆ.

DKD show Dhanush recreated OM film scene in front of Shivarajkumar and Prema

ಪ್ರೇಮಾ-ಶಿವಣ್ಣ ಹೇಳಿದ್ದೇನು?

ಕಂಠಿಯ ಆಕ್ಟಿಂಗ್, ಸೋನಿ ರಿಯಾಕ್ಷನ್ ಎಲ್ಲವೂ ಪ್ರೇಮಾಗೆ ಇಂಪ್ರೆಸ್ ಮಾಡಿದೆ. ಸೇಮ್ ಟು ಸೇಮ್ ಫೀಲಿಂಗ್. 'ಓಂ' ಅಂದ್ರೇನೆ ಮೈಝುಮ್ ಅನ್ನಿಸುತ್ತೆ ಎಂದಿದ್ದಾರೆ ಪ್ರೇಮಾ. ಶಿವಣ್ಣ ಕೂಡ ಕಂಠಿಯ ಡ್ಯಾನ್ಸ್‌ಗೆ ಹೊಗಳಿದ್ದಾರೆ. ಈ ವಾರ ಡಿಕೆಡಿ ಹಾಗೂ ಮಹಾನಟಿ ಸಂಗಮ ನಡೆಯುತ್ತಿದೆ. ಹೀಗಾಗಿ ಮಹಾನಟಿಯಲ್ಲಿದ್ದ ಸ್ಪರ್ಧಿಗಳು, ಡಿಕೆಡಿ ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದಾರೆ.

ಕಂಠಿ ಡ್ಯಾನ್ಸ್ ಬಹುಪರಾಕ್

ಇನ್ನು ಡಿಕೆಡಿಗೆ ಕಂಠಿ ಆಯ್ಕೆಯಾದಾಗ ಕಂಠಿ ಡ್ಯಾನ್ಸ್ ಮಾಡೋಕೆ ಸಾಧ್ಯನಾ..? ಮಾಸ್ ಹೀರೋನಾ ತಗೊಂಡು ರೊಮ್ಯಾಂಟಿಕ್ ಹೀರೋ ಆಗಿಸುತ್ತಿದ್ದಾರಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈಗ ಕಂಠಿಯ ಡ್ಯಾನ್ಸ್ ನೋಡಿದವರೇ ವಾವ್ ಎನ್ನುತ್ತಿದ್ದಾರೆ. ಕಂಠಿಯ ಪ್ರತಿ ವಾರದ ಡ್ಯಾನ್ಸ್ ಕೂಡ ಅದ್ಭುತವಾಗಿ ಮೂಡಿ ಬರುತ್ತಿದೆ. ಕಂಠಿಗೆ ಲವ್ ಸಿಂಬಲ್ ಹಾಕಿ ಹೊಗಳುತ್ತಿದ್ದಾರೆ. ಮೊದಲೇ ಕಂಠಿಗೆ ಮಹಿಳಾ ಅಭಿಮಾನಿಗಳು ಜಾಸ್ತಿ. ಈಗ ಅಷ್ಟೊಳ್ಳೆ ಡ್ಯಾನ್ಸ್ ಮಾಡುವಾಗ ಇನ್ನಷ್ಟು ಅಭಿಮಾನಿಗಳಾಗದೇ ಇರುತ್ತಾರೆಯೇ.

More from Filmibeat

English summary
Zee kannada DKD Written Update on August 29th promo. Here is the details about Dhanush recreate Om movie scene
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X