Vijay Raghavendra: ಡಿಕೆಡಿಗೆ ರಾಘು ರೀ ಎಂಟ್ರಿ: "ನಿನ್ನೊಟ್ಟಿಗೆ ನಾವೆಲ್ಲರೂ ಇದ್ದೇವೆ" ಎಂದ ಶಿವಣ್ಣ
ಇತ್ತೀಚೆಗೆ ನಟ ವಿಜಯ್ ರಾಘವೇಂದ್ರ ಅವರ ಬದುಕಿನಲ್ಲಿ ಒಂದು ದುರ್ಘಟನೆ ನಡೆದು ಹೋಯಿತು. ರಾಘು ಪತ್ನಿ ಸ್ಪಂದನಾ ಕೊನೆಯುಸಿರೆಳೆದರು. ಚಂದನವನದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದ ರಾಘವೇಂದ್ರ ಅವರು ತಮ್ಮ ಪತ್ನಿ ಸ್ಪಂದನಾ ಅವರನ್ನ ಕಳೆದುಕೊಂಡು ಅಕ್ಷರ ಸಹ ಕಂಗಾಲಾಗಿದ್ದರು. ಪತ್ನಿ ಅಗಲಿಕೆ ನೋವಿನಿಂದ ನಿಧಾನವಾಗಿ ಅವರು ಹೊರ ಬರುತ್ತಿದ್ದಾರೆ.
ಡಿಕೆಡಿ ವೇದಿಕೆಗೆ ಮತ್ತೆ ತೀರ್ಪುಗಾರರಾಗಿ ರಾಘವೇಂದ್ರ ರೀ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಪ್ರೀತಿಯ ಮಡದಿ ಸ್ಪಂದನಾ ಅವರನ್ನು ಕಳೆದುಕೊಂಡು ಚಿನ್ನಾರಿ ಮುತ್ತ ಒಂಟಿಯಾಗಿದ್ದರು. ಅವರ ಫ್ಯಾನ್ ಚಿನ್ನಾರಿ ಮುತ್ತನನ್ನು ಮತ್ತೆ ಡಿಕೆಡಿ ವೇದಿಕೆಯಲ್ಲಿ ನೋಡಬೇಕು ಎಂದು ಕಾಯುತ್ತಿದ್ದರು. ಈಗ ತಮ್ಮ ಅಭಿಮಾನಿಗಳಿಗೆ ನಿರಾಸೆಯನ್ನು ಮಾಡಬಾರದು ಎಂದುಕೊಂಡು ಮತ್ತೆ ಡಿಕೆಡಿ ವೇದಿಕೆಗೆ ಭರ್ಜರಿಯಾಗಿ ವಾಪಸ್ ಆಗಿದ್ದಾರೆ. ಅವರನ್ನ ಡಿಕೆಡಿ ವೇದಿಕೆ ಸ್ವಾಗತಿಸಿದೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ರಾಘು ಕಾಂಬ್ಯಾಕ್ ಮಾಡಿದ್ದು ಅಭಿಮಾನಿಗಳಲ್ಲಿ ಹರ್ಷ ತಂದಿದೆ. ನಮ್ಮಲ್ಲಿ ಎಷ್ಟೇ ನೋವು ಇದ್ದರೂ ಅದನ್ನ ಮರೆತು ಅಭಿಮಾನಿಗಳೊಟ್ಟಿಗೆ ನೀವು ನಡೆಯಿರಿ. ಎಲ್ಲ ನೋವುಗಳು ಸಹ ಮರೆಯಾಗುತ್ತದೆ ನೀವು ಸಹ ಲವಲವಿಕೆಯಿಂದ ಇರುತ್ತೀರಾ ಎಂದು ಅಭಿಮಾನಿಗಳು ತಮ್ಮ ಮನದಾಳದ ಮಾತುಗಳನ್ನ ವ್ಯಕ್ತಪಡಿಸುತ್ತಿದ್ದಾರೆ.
ನಿನ್ನ ಜೊತೆ ನಾವಿದ್ದೇವೆ ಎಂದ ಶಿವಣ್ಣ
ವಿಜಯ್ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇಬ್ಬರು ಸಹ ತುಂಬಾ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಏಕಾಏಕಿ ಅವರ ಬಾಳಿನಲ್ಲಿ ಬರಸಿಡಿಲು ಬಂದು ಅಪ್ಪಳಿಸಿತ್ತು. ಕನಸು ಮನಸ್ಸಿನಲ್ಲೂ ಊಹಿಸಿರದ ಘಟನೆ ಬಾಳಲ್ಲಿ ನಡೆದೇ ಹೋಯಿತು. ಮುದ್ದಾದ ಪತ್ನಿ ಸ್ಪಂದನಾ ಅವರನ್ನ ಕಳೆದುಕೊಂಡು ವಿಜಯ್ ರಾಘವೇಂದ್ರ ಅಕ್ಷರ ಸಹ ಕಂಗಾಲಾಗಿ ಹೋಗಿದ್ದರು. ಈಗ ಮತ್ತೆ ಜೀವನದಲ್ಲಿ ಲವಲವಿಕೆಯಿಂದ ಇರಲು ನಿರ್ಧಾರ ಮಾಡಿದ್ದು ಡಿಕೆಡಿ ವೇದಿಕೆಗೆ ಬಂದಿದ್ದಾರೆ.

ಅದ್ಧೂರಿ ಸ್ವಾಗತ
ಡಿಕೆಡಿ ವೇದಿಕೆಗೆ ಬಂದ ವಿಜಯ ರಾಘವೇಂದ್ರ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಇದೇ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಅವರು ಸಹ ವಿಜಯ ರಾಘವೇಂದ್ರ ಅವರಿಗೆ ಸಾಂತ್ವನದ ಮಾತುಗಳನ್ನು ಆಡಿದ್ದಾರೆ. ನಿನ್ನ ಜೊತೆಯಲ್ಲಿ ನಾವೆಲ್ಲರೂ ಇದ್ದೇವೆ ನೀನು ಮತ್ತೆ ಕಮ್‌ಬ್ಯಾಕ್ ಮಾಡಿದ್ದು ನಮಗೆಲ್ಲರಿಗೂ ಖುಷಿಯಾಗಿದೆ ಎಂದಿದ್ದಾರೆ. ಎಲ್ಲರೂ ಸಹ ವಿಜಯ್ ರಾಘವೇಂದ್ರ ಅವರಿಗೆ ಅಪ್ಪುಗೆ ನೀಡಿ ಡಿಕೆಡಿ ವೇದಿಕೆಗೆ ಕರೆಸಿಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಮತ್ತೆ ತೀರ್ಪುಗಾರರ ಸ್ಥಾನ ಅಲಂಕರಿಸಿದ್ದಾರೆ.
ಮುತ್ತನಿಗೆ ಅಭಿಮಾನಿಗಳ ಪ್ರೀತಿ
ಚಿನ್ನಾರಿ ಮುತ್ತನನ್ನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಮತ್ತೆ ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ರಾಘು ಸರ್, ನೀವು ಬಂದಿದ್ದು ತುಂಬಾನೇ ಖುಷಿಯಾಯಿತು, ನೋವುಗಳ ಜೊತೆ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದ್ದು, ನಿಮ್ಮ ನಡವಳಿಕೆ ನಮಗೆಲ್ಲಾ ಮಾದರಿ ಸರ್ ಎಂದು ಅಭಿಮಾನಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೇ ರೀತಿ ಹಲವಾರು ಅಭಿಮಾನಿಗಳು ರಾಘವೇಂದ್ರ ಅವರು ಡಿಕೆಡಿ ವೇದಿಕೆಗೆ ಬಂದಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
'ಕದ್ದ ಚಿತ್ರ' ಪ್ರಚಾರ
ರಾಘು ತಮ್ಮ 'ಕದ್ದ ಚಿತ್ರ' ಸಿನಿಮಾ ಪ್ರಮೋಷನ್‌ನಲ್ಲೂ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಹಲವಾರು ಸಂದರ್ಶನಗಳನ್ನು ಸಹ ನೀಡುತ್ತಾ ಇದ್ದಾರೆ. ಮರಳಿ ತಮ್ಮ ದಿನಚರಿಯನ್ನ ಆರಂಭಿಸಿದ್ದಾರೆ, ಇದಕ್ಕೆ ಅವರ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











