'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ನಟಿಸುತ್ತಿರುವ ಈ ನಟಿ ಯಾರೆಂದು ಗೊತ್ತೇ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ನಿವಾಸ' ಧಾರಾವಾಹಿ ಸೂಪರ್ ಹಿಟ್ ಆಗಿ ಮೂಡಿ ಬರುತ್ತಿದೆ. ಎಲ್ಲಾ ಕಲಾವಿದರು ತಮ್ಮ ತಮ್ಮ ನಟನಾ ಸಾಮರ್ಥ್ಯದಿಂದ ಈ ಧಾರಾವಾಹಿ ಯಶಸ್ವಿಯಾಗಿ ಮುಂದುವರಿಯಲು ಕಾರಣರಾಗಿದ್ದಾರೆ. ಅಂದ ಹಾಗೆ ಈ ಸೀರಿಯಲ್‌ನಲ್ಲಿ ಹೂ ಮಾರುವ ಹುಡುಗಿಯ ಪಾತ್ರವೊಂದಿದೆ. ಹೌದು, ಚೆಲ್ವಿ ಎಂಬ ಹೆಸರಿನ ಆ ಪಾತ್ರವನ್ನು ನಿರ್ವಹಿಸುತ್ತಿರುವ ನಟಿಯ ನಿಜವಾದ ಹೆಸರು ಅಶ್ವಿನಿ ಆರ್ ಮೂರ್ತಿ.

ಅಶ್ವಿನಿ ಆ‌ರ್ ಮೂರ್ತಿ ಕನ್ನಡ ಕಿರುತೆರೆಗೆ ಹೊಸಬರೇನಲ್ಲ. ಈ ಹಿಂದೆಯೂ ಅವರು ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. 'ಲಕ್ಷಣ' ಧಾರಾವಾಹಿಯಲ್ಲಿ ನಾಯಕಿ ನಕ್ಷತ್ರಾ ಅಕ್ಕಳಾಗಿ ಈಕೆ ಬಣ್ಣ ಹಚ್ಚಿದ್ದರು. ಇದರ ಜೊತೆಗೆ 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ನಾಯಕ ವಿಕ್ರಾಂತ್‌ನ ಚಿಕ್ಕಮ್ಮನ ಮಗಳು ಸಾಹಿತ್ಯಾಳಾಗಿ ಈಕೆ ಕಾಣಿಸಿಕೊಂಡಿದ್ದರು.

Do you know about actress Ashwini R Murthy acting in Lakshmi Nivas serial

'ಮರಳಿ ಮನಸ್ಸಾಗಿದೆ' ಧಾರಾವಾಹಿಯ ಸಾಹಿತ್ಯಾ ಪಾತ್ರ ಚಾಲೆಂಜಿಂಗ್ ಆಗಿದ್ದು, ಅದರಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಈಕೆ ಇದಕ್ಕಿಂತಲೂ ಮೊದಲು 'ಬಯಸದೆ ಬಳಿ ಬಂದೆ' ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ಮೂಲತಃ ಹಾಸನದವರಾದ ನಟಿ ಬಿಎಸ್‌ವಿಪಿ ವುಮೆನ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು. ವೃತ್ತಿಯಲ್ಲಿ ಸೌಂದರ್ಯಶಾಸ್ತ್ರಜ್ಞೆ (ಆಸ್ತಟೇಶಿಯನ್) ಹಾಗೂ ಕಾಸ್ಮೆಟಾಲಜಿಸ್ಟ್ ಆಗಿರುವ ಅಶ್ವಿನಿ ಸದ್ಯ ಬೆಂಗಳೂರಿನಲ್ಲಿಯೇ ಉದ್ಯಮವನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ.

Do you know about actress Ashwini R Murthy acting in Lakshmi Nivas serial

ಅಲ್ಲದೆ ಇವರಿಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಎಆ‌ರ್ ಗ್ಲಾಮ್ ಹೌಸ್ ಎಂಬ ಸ್ವಂತ ಸಲೂನ್ ಕೂಡ ಇದೆ. ಯಶಸ್ವಿ ಉದ್ಯಮವನ್ನು ನಡೆಸುತ್ತಿರುವ ಅಶ್ವಿನಿ ಅವರಿಗೆ ನಟಿಯಾಗಬೇಕೆಂಬುದು ಬಾಲ್ಯದಿಂದಲೇ ಇದ್ದ ಕನಸಾಗಿತ್ತು. ಜೊತೆಗೆ ತಮ್ಮ ನೆಚ್ಚಿನ ಬಿಸಿನೆಸ್ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಇಚ್ಛೆಯೂ ಇತ್ತು.

ಇದಕ್ಕೊಂದು ಒಳ್ಳೆಯ ಪರಿಹಾರವೆಂಬಂತೆ ನಟನೆ, ವೃತ್ತಿ ಹಾಗೂ ಉದ್ಯಮವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ ಅಶ್ವಿನಿ ಆ‌ರ್ ಮೂರ್ತಿ. ಇದರೊಂದಿಗೆ ಇವರಿಗೆ ಮುಂದೆ ನಟಿಯಾಗಿ ಬೆಳೆಯಬೇಕೆಂಬ ಕನಸಿದೆ. ಸದ್ಯ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಇವರ ಪಾತ್ರವು ಗಮನ ಸೆಳೆಯುತ್ತಿದೆ. ಚೆಲ್ವಿ ಮತ್ತು ವೆಂಕಿಯ ಲವ್ ಸ್ಟೋರಿ ವೀಕ್ಷಕರಿಗೆ ಇಷ್ಟವಾಗಿದೆ. ಕಥೆ ಮುಂದಿನ ಭಾಗಕ್ಕಾಗಿ ಕಾತರದಿಂದ ಕಾಯುತ್ತಿರುವ ಪ್ರೇಕ್ಷಕರಿಗೆ ಇವರ ಪಾತ್ರವು ಯಾವ ರೀತಿಯ ತಿರುವನ್ನು ನೀಡುತ್ತದೆ ಎಂದು ನೋಡಬೇಕಿದೆ.

More from Filmibeat

English summary
Do you know about actress Ashwini R Murthy acting in Lakshmi Nivas serial?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X