ಹಿರಿಯ ನಟ ಲೋಕೇಶ್ ಪುತ್ರಿಯ ಕಿರುತೆರೆ ಜರ್ನಿ ಶುರುವಾಗಿದ್ದೇ ತಮಿಳು ಧಾರಾವಾಹಿಯಿಂದ; ಯಾವುದದು?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಸೀತಾರಾಮ' ಕೂಡ ಒಂದು. ಮನೋಜ್ಞ ನಟನೆಯ ಜೊತೆಗೆ ಪಾತ್ರ ವರ್ಗದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ 'ಸೀತಾರಾಮ' ಧಾರಾವಾಹಿಯಲ್ಲಿ ಮನ ಸೆಳೆಯುವ ಪಾತ್ರವೆಂದರೆ ಅದು ಭಾರ್ಗವಿಯದ್ದು. ನಾಯಕ ರಾಮನ ಚಿಕ್ಕಮ್ಮ ಭಾರ್ಗವಿಯಾಗಿ ನಟಿಸಿ ವೀಕ್ಷಕರ ಮನ ಸೆಳೆಯುತ್ತಿರುವ ನಟಿ ಬೇರಾರೂ ಅಲ್ಲ, ಪೂಜಾ ಲೋಕೇಶ್.

ಖಡಕ್ ವಿಲನ್ ಆಗಿ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಈಕೆ ವಿಲನ್ ಎಂಬುದು ಮನೆಯವರಿಗೆ ತಿಳಿದಿಲ್ಲ. ಮನೆಯವರ ಮುಂದೆ ಒಳ್ಳೆಯವಳಂತೆ ನಟಿಸುವ ಭಾರ್ಗವಿಗೆ ಮನೆ ಹಾಳುಮಾಡುವ ಉದ್ದೇಶ. ಒಟ್ಟಿನಲ್ಲಿ ಖಳನಾಯಕಿಯಾಗಿ ಅಬ್ಬರಿಸುತ್ತಿರುವ ಪೂಜಾ ಲೋಕೇಶ್ ನಟನಾ ಪಯಣ ಶುರುವಾಗಿದ್ದು ಹಿರಿತೆರೆ ಮೂಲಕ.

Do you know actress Pooja Lokesh started her television journey with a Tamil serial

'ಪೂಜಾ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಈ ಬೆಡಗಿ ನಟಿಸಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರ ಎನ್ನುವುದು ವಿಶೇಷ. ಹೌದು, ಸ್ಯಾಂಡಲ್‌ವುಡ್‌ನ ಹಿರಿಯ ನಟ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ದಂಪತಿಗಳ ಪುತ್ರಿಯಾದ ಈಕೆ ಮೊದಲ ಸಿನಿಮಾದಲ್ಲಿಯೇ ಸಿನಿ ಪ್ರಿಯರ ಮನ ಸೆಳೆದರು.

ತದ ನಂತರ 'ಹುಲಿಯ', 'ಉಲ್ಟಾ ಪಲ್ಟಾ', 'ಯುದ್ಧ', 'ಛತ್ರಪತಿ', 'ಮ್ಯಾಜಿಕ್ ಅಜ್ಜಿ' ಹಾಗೂ 'ಟೈಗರ್ ಗಲ್ಲಿ' ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ಸದ್ಯ ಭಾರ್ಗವಿಯಾಗಿ ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಪೂಜಾ ಲೋಕೇಶ್ ಅವರ ಕಿರುತೆರೆ ಪಯಣ ಶುರುವಾಗಿದ್ದು ತಮಿಳು ಧಾರಾವಾಹಿಯಿಂದ. ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಂಗುಮಂ' ಧಾರಾವಾಹಿಯಲ್ಲಿ ನಟಿಸಿದ ಈಕೆ ಮುಂದೆ 'ಕಲ್ಕಿ' ಮತ್ತು 'ಸೆಲ್ವಿ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು.

Do you know actress Pooja Lokesh started her television journey with a Tamil serial

ನಂತರ 'ಅಂಜಲಿ' ಧಾರಾವಾಹಿಯಲ್ಲಿ ಎಸಿಪಿ ಈಶ್ವರಿಯಾಗಿ ಕಾಣಿಸಿಕೊಂಡ ಪೂಜಾ ಲೋಕೇಶ್ 'ಅತಿಪೂಕಲ್' ಧಾದಾವಾಹಿಯಲ್ಲಿ ಈಶ್ವರಿ ಮತ್ತು ದುರ್ಗಾಮಾಯಿ ಎನ್ನುವ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು. ನಂತರ 'ಗೀತಾಂಜಲಿ', 'ರೋಜಾ ಕೊಟ್ಟಂ', 'ಮುಂದಾನಾಯೈ ಮುಡಿಚ್ಚು', 'ಮುತಾರಾಂ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ತಮಿಳಿನ ಪೌರಾಣಿಕ ಧಾರಾವಾಹಿ 'ಮಹಾಭಾರತಂ'ನಲ್ಲಿ ಅಂಬಾ ಪಾತ್ರದಲ್ಲಿ ಕಾಣಿಸಿಕೊಂಡ ಪೂಜಾ ಲೋಕೇಶ್ ಬರೋಬ್ಬರಿ ಮೂರು ವರ್ಷಗಳ ಕಾಲ ಆ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ನಂತರ ತಮಿಳಿನ 'ಉಯಿರ್ಮೈ' ಹಾಗೂ 'ಮೀರಾ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ ರಾಮನ ಚಿಕ್ಕಮ್ಮ ಭಾರ್ಗವಿಯಾಗಿ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

ಕಿರುತೆರೆ, ಹಿರಿತೆರೆ ಹೊರತಾಗಿ ರಿಯಾಲಿಟಿ ಶೋಗಳಲ್ಲಿಯೂ ಪೂಜಾ ಲೋಕೇಶ್ ಮಿಂಚಿದ್ದಾರೆ. ಸ್ಟಾರ್ ವಿಜಯ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ 'ಜೋಡಿ ನಂ1' ಸೀಸನ್ 1 ರಲ್ಲಿ ಭಾಗವಹಿಸಿರುವ ಈಕೆ ವಿನ್ನರ್ ಆಗಿ ಹೊರಹೊಮ್ಮಿದ್ದರು. ಇದರ ಜೊತೆಗೆ ಅದೇ ವಾಹಿನಿಯ ಮಗದೊಂದು ರಿಯಾಲಿಟಿ ಶೋ 'ಕಿಚನ್ ಸೂಪರ್ ಸ್ಟಾರ್'ನಲ್ಲಿ ಭಾಗವಹಿಸಿರುವ ಈಕೆ ಅಲ್ಲೂ ಕೂಡಾ ವಿನ್ನರ್ ಪಟ್ಟವನ್ನು ಪಡೆದುಕೊಂಡರು. ಮುಂದೆ ಕಲರ್ಸ್ ತಮಿಳು ವಾಹಿನಿಯ 'ಪೊಟ್ಟಿಕ್ಕು ಪೊಟ್ಟಿ' ಶೋವಿನಲ್ಲೂ ಈಕೆ ಸ್ಪರ್ಧಿಯಾಗಿ ಕಾಣಿಸಿಕೊಂಡರು.

More from Filmibeat

English summary
Do you know actress Pooja Lokesh started her television journey with a Tamil serial;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X