'ಅಣ್ಣಯ್ಯ' ಧಾರಾವಾಹಿಯ ನಟ ವಿಕಾಶ್ ಉತ್ತಯ್ಯ ವಕೀಲರು ಅನ್ನೋದು ನಿಮಗೆ ಗೊತ್ತೆ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅಣ್ಣಯ್ಯ' ಕೂಡಾ ಒಂದು. 'ಅಣ್ಣಯ್ಯ' ಧಾರಾವಾಹಿಯಲ್ಲಿ ನಾಯಕ ಶಿವಣ್ಣ ಆಗಿ ನಟಿಸಿ ವೀಕ್ಷಕರ ಮನ ಸೆಳೆದಿರುವ ಈತನ ಹೆಸರು ವಿಕಾಶ್ ಉತ್ತಯ್ಯ. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿರುವ ಕೊಡಗಿನ ಕುವರ ತಮ್ಮ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ ಎಂಬುದಕ್ಕೆ ಜೀ ಕುಟುಂಬ ಅವಾಡ್‌ನಲ್ಲಿ ಪಡೆದ 'ಬೆಸ್ಟ್ ಸಹೋದರ' ಪ್ರಶಸ್ತಿ ಕಾರಣ.

ಇದರ ಜೊತೆಗೆ ವಿಕಾಶ್ ಉತ್ತಯ್ಯ ನಾಯಕನಾಗಿ ಅಭಿನಯಿಸಿರುವ 'ಅಪಾಯವಿದೆ ಎಚ್ಚರಿಕೆ' ಸಿನಿಮಾವೂ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಜನ ಮೆಚ್ಚುಗೆ ಪಡೆಯುತ್ತಿದೆ. ಆ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ವಿಕಾಶ್ ಉತ್ತಯ್ಯ ಕಮಾಲ್ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ನಟನಾಗಬೇಕು ಎಂಬ ಕನಸು ಕಂಡಿದ್ದ ವಿಕಾಶ್ ಉತ್ತಯ್ಯ ವೃತ್ತಿಯಲ್ಲಿ ವಕೀಲರು ಹೌದು. ಎಲ್.ಎಲ್. ಬಿ, ಎಲ್. ಎಲ್.ಎಮ್ ಜೊತೆಗೆ ಭಾರತೀಯ ಸಂವಿಧಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿಕಾಶ್ ಪ್ರವೃತ್ತಿಯಲ್ಲಿ ನಟ.

Do you know Annayya serial fame Vikash Uttaiah is also an advocate

ಶಿವಣ್ಣನಾಗಿ ತಮ್ಮ ನಟನೆಯ ಮೂಲಕವೇ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ವಿಕಾಶ್ ಅವರ ನಟನಾ ಪಯಣಕ್ಕೆ ಮುನ್ನುಡಿ ಬರೆದಿದ್ದು ಕಿರುಚಿತ್ರ. 'ಕನಸಿನ ಮಳೆಯಾದಳು' ಕಿರುಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ವಿಕಾಶ್ ಉತ್ತಯ್ಯ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದು 'ಆನ' ಸಿನಿಮಾ ಮೂಲಕ.

ಹಾರರ್ ಸಿನಿಮಾ 'ಆನ'ದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದ ವಿಕಾಶ್ ಉತ್ತಯ್ಯ ಮುಂದೆ ಕಾಣಿಸಿಕೊಂಡಿದ್ದು 'ಮೇರಿ' ಸಿನಿಮಾದಲ್ಲಿ. 'ಮೇರಿ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದ ವಿಕಾಶ್ ಉತ್ತಯ್ಯ ನಂತರ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದಾರೆ.

ಇದರ ಬೆನ್ನಲ್ಲೇ 'ಅಣ್ಣಯ್ಯ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ವಿಕಾಶ್ ಅವರಿಗೆ ಮೊದಲಿನಿಂದಲೂ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಬಯಕೆಯಿತ್ತು. ಆದರೆ ಅದಕ್ಕೆ ಸರಿಯಾದ ಪಾತ್ರಗಳು ವಿಕಾಶ್ ಅವರಿಗೆ ದೊರಕಿರಲಿಲ್ಲ. ಇದರ ಜೊತೆಗೆ ವಿಕಾಶ್ ಉತ್ತಯ್ಯ ಅವರು ಸಿನಿಮಾದಲ್ಲಿ ನಟಿಸುತ್ತಿದ್ದ ಕಾರಣದಿಂದ ಕಿರುತೆರೆಯಲ್ಲಿ ನಟಿಸಲು ಸಮಯ ಸಾಕಾಗುತ್ತಿರಲಿಲ್ಲ.

'ಅಣ್ಣಯ್ಯ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿರುವ ವಿಕಾಶ್ ಕಿರುತೆರೆಗೆ ಕಾಲಿಡಲು ಮುಖ್ಯ ಕಾರಣ ಅಣ್ಣಯ್ಯ ಧಾರಾವಾಹಿ ಎಂದರೆ ತಪ್ಪಾಗಲಾರದು. 'ಅಣ್ಣಯ್ಯ' ಧಾರಾವಾಹಿಯು ಪುರುಷ ಪ್ರಧಾನವಾಗಿರುವ ಧಾರಾವಾಹಿ ಹೌದು. ಇತ್ತೀಚಿನ ದಿನಗಳಲ್ಲಿ ಸ್ತ್ರೀ ಪ್ರಧಾನವಾಗಿರುವ ಧಾರಾವಾಹಿಗಳೇ ಪ್ರಸಾರವಾಗುತ್ತಿರುವುದು ಹೆಚ್ಚು‌. ಅಂತಹದರಲ್ಲಿ 'ಅಣ್ಣಯ್ಯ' ಧಾರಾವಾಹಿಯು ಪುರುಷ ಪ್ರಧಾನವಾಗಿದ್ದು ಅದರಲ್ಲಿ ನಟಿಸುವ ಅವಕಾಶ ಸಿಕ್ಕಾಗ ಬೇಡ ಎನ್ನದೇ ಒಪ್ಪಿಕೊಂಡರು.

ಇನ್ನು ಮೊದಲ ಧಾರಾವಾಹಿಯಲ್ಲಿಯೇ ಬೆಸ್ಟ್ ಸಹೋದರ ಪ್ರಶಸ್ತಿ ಪಡೆದಿರುವ ಇವರು ಇದು ತನ್ನ ಆ್ಯಕ್ಟಿಂಗ್ ಕೆರಿಯರ್‌ನ ಮೊದಲ ಅವಾರ್ಡ್ ಎಂದು ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಓದಿನಲ್ಲಿ ಮುಂದಿದ್ದು, ಮಾಸ್ಟರ್ಸ್‌ ಪಡೆದು ವೃತ್ತಿಯಲ್ಲಿ ವಕೀಲರಾಗಿರುವ ವಿಕಾಶ್ ಉತ್ತಯ್ಯ ನಟನೆಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡಿರುವುದು ನಿಜಕ್ಕೂ ಸಂತಸದ ಸಂಗತಿ.

More from Filmibeat

English summary
Do you know Annayya serial fame Vikash Uthaiah is also an advocate;
Read more about: actor serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X