BBK11: ಒಂದೇ ಕಾಲೇಜಿನಲ್ಲಿ ಓದಿದ್ದ ತ್ರಿವಿಕ್ರಂ-ಅನುಷಾ; ನಿಮ್ಮ ಕ್ಲಾಸ್‌ಮೇಟ್ ಆಗಿರಬಹುದು ನೋಡಿ

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದಿದೆ. ಮನರಂಜನೆಯನ್ನು ನೀಡಿದ ಸ್ಪರ್ಧಿಗಳು ಅಭಿಮಾನಿಗಳನ್ನು ಸಂಪಾದಿಸಿಕೊಂಡು ಹೊರಗೆ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಾನೂ ಜೊತೆಗೆ ಇದ್ದಂತ ಸ್ಪರ್ಧಿಗಳು ಕೂಡ ಹೊರಗೆ ಬಂದ ಮೇಲೂ ತಮ್ಮ ಫ್ರೆಂಡ್ಶಿಪ್ ಕಾಪಾಡಿಕೊಂಡಿದ್ದಾರೆ. ಕೆಲವರು ಸಹವಾಸ ಮುಗೀತು ಅಂತ ತಮ್ಮ ಪಾಡಿಗೆ ತಾವೂ ಇರುವುದನ್ನು ನೋಡಿದ್ದೇವೆ. ಆದರೆ ಎಲ್ಲರೂ ಒಟ್ಟಾಗಿ ಟ್ರಿಪ್ ಗಳಿಗೂ ಹೋಗುತ್ತಿದ್ದಾರೆ.

ಅನುಷಾ ರೈ ಬಹಳ ಬೇಗನೇ ಮನೆಯಿಂದ ಹೊರಗೆ ಬಂದರು. ತ್ರಿವಿಕ್ರಂ ಹಾಗೂ ಭವ್ಯಾ ಫಿನಾಲೆ ತನಕ ಬಂದಿದ್ದರು. ಮನೆಯೊಳಗೆ ಇದ್ದಾಗ ಪ್ರೀತಿ ಪ್ರೇಮ ಎಂಬ ವಿಚಾರ ಚರ್ಚೆಯಾಗಿತ್ತು. ಹಾಗೇ ಕಿತ್ತಾಟವೂ ನಡೆಯುತ್ತಿತ್ತು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಇಬ್ಬರು ದೂರಾಗುತ್ತಾರೆ ಎಂಬಂತೆ ಕಿತ್ತಾಡಿದ್ದರು. ಆದರೆ ಹೊರಗೆ ಬಂದ ಮೇಲೂ ಆ ಫ್ರೆಂಡ್ಶಿಪ್ ಕಾಪಡಿಕೊಂಡು ಬಂದಿದ್ದಾರೆ.

Do you Know Bigg Boss Fame Trivikram and Anusha rai studied in same college

ತ್ರಿವಿಕ್ರಂ- ಭವ್ಯಾ-ಅನುಷಾ ಟ್ರಿಪ್

ಬಿಗ್ ಬಾಸ್ ಮುಗಿದ ಮೇಲೆ ಅದರಲ್ಲಿ ಭಾಗಿಯಾದ ಸ್ಪರ್ಧಿಗಳು ಭೇಟಿ ಮಾಡುತ್ತಿದ್ದಾರೆ. ಕಾರಿನಲ್ಲಿ ಅಲ್ಲಲ್ಲಿ ಟ್ರಿಪ್ ಮಾಡುತ್ತಿದ್ದಾರೆ. ಅನುಷಾ ರೈ, ಭವ್ಯಾ, ತ್ರಿವಿಕ್ರಂ ಜೊತೆಗೆ ಇನ್ನಿಬ್ಬರು ತುಮಕೂರಿಗೆ ಟ್ರಿಪ್ ಹೊರಟಿದ್ದಾರೆ. ಕಾರಿನಲ್ಲಿ ಟ್ರಾವೆಲ್ ಎಂಜಾಯ್ ಮಾಡಿಕೊಂಡು ಹೋಗಿದ್ದಾರೆ. ಈ ವಿಡಿಯೋವನ್ನು ಅನುಷಾ ರೈ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ.

ಕಾರಿನಲ್ಲಿ ಕಾಲೆಳೆದುಕೊಂಡು ಜರ್ನಿ

ಬಿಗ್ ಬಾಸ್‌ನಲ್ಲಿ ಮನೆಯಲ್ಲಿ ಕ್ಯಾಮೆರಾ ಮುಂದೆ ಇದ್ದಾಗ ಹೇಗಿರಬೇಕೋ ಆಗಿದ್ದರು. ಸ್ಪರ್ಧೆಯ ಮನಸ್ಥಿತಿಯಲ್ಲಿಯೇ ಎದುರಿಗಿರುವ ವ್ಯಕ್ತಿಯನ್ನು ನೋಡುತ್ತಿದ್ದರು. ಈಗ ಅದೇ ಮನೆಯೊಳಗಿದ್ದ ವ್ಯಕ್ತಿಯ ಜೊತೆಗೆ ಇರುವುದೇ ಬೇರೆ ರೀತಿ. ಎಲ್ಲರೂ ಆತ್ಮೀಯರಾಗಿದ್ದಾರೆ. ಕಾರಿನಲ್ಲಿ ಹೋಗುವಾಗ ಕಾಲೆಳೆದುಕಿಂಡು ಎಂಜಾಯ್ ಮಾಡಿದ್ದಾರೆ. ತ್ರಿವಿಕ್ರಂ, ಭವ್ಯಾ ಅವರನ್ನ ರೇಗಿಸಿಕೊಂಡು ಹೋಗಿದ್ದಾರೆ. ತಮಾಷೆ ಮಾಡುತ್ತಾ, ಬೆಂಗಳೂರಿನಿಂದ ತುಮಕೂರಿನ ಗುಬ್ಬಿ ತನಕ ಎಂಜಾಯ್ ಮಾಡಿದ್ದಾರೆ.

ಗುಬ್ಬಿಯಲ್ಲಿ ಫ್ಯಾನ್ಸ್ ಮುತ್ತಿಗೆ

ಬಿಗ್ ಬಾಸ್ ಮುಗಿದ ಮೇಲೆ ಸ್ಪರ್ಧಿಗಳ ಬಗ್ಗೆ ಜನ ವಿಶೇಷವಾದ ಕ್ರೇಜ್ ಹೊಂದಿರುತ್ತಾರೆ. ಅವರು ಹೊರಗೆ ಬಂದ ಮೇಲೆ ಅವರ ಇಂಟರ್‌ವ್ಯೂಗಳನ್ನು ಅಷ್ಟೇ ಗಮನವಿಟ್ಟು ನೋಡುತ್ತಾರೆ. ಸಾರ್ವಜನಿಕವಾಗಿ ಸಿಕ್ಕರೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಾರೆ. ಅದೇ ರೀತಿ ಅನುಷಾ ಅವರ ಕಾರು ಗುಬ್ಬಿ ತಲುಪುತ್ತಿದ್ದಂತೆ ಯಾರೋ ಒಬ್ಬ ಅಭಿಮಾನಿ ನೋಡಿದ್ದಾರೆ. ಆಮೇಲೆ ಮುತ್ತಿಕೊಂಡಿದ್ದಾರೆ. ಅಕ್ಷರಶಃ ಜನ ಸೇರಿದ್ದನ್ನು ಕಂಡು ಅನುಷಾ ಲೈಟ್ ಆಗಿ ಗಾಬರಿಯಾಗಿದ್ದರು. ಆದರೆ ಆ ಕ್ಷಣಕ್ಕೆ ಹೂವನ್ನೆಲ್ಲ ಎರಚಿದ್ದು ನೋಡಿದ್ರು, ಅವರು ರೀಚ್ ಆಗಿದ್ದಹ ಗೊತ್ತಿದ್ದೆ ಸೆಲೆಬ್ರೇಷನ್ ಮಾಡಿದ್ರು ಅನ್ನೋದು ಅರ್ಥವಾಗುತ್ತದೆ.

ಹೊಸ ವಿಚಾರ ಹೇಳಿದ ಅನುಷಾ

ಇನ್ನು ಜರ್ನಿ ಸಮಯದಲ್ಲಿ ಅನುಷಾ ರೈ ಹೊಸ ವಿಚಾರವೊಂದನ್ನ ತಿಳಿಸಿದ್ದಾರೆ. ಅನುಷಾ ರೈ ತುಮಕೂರಿನ ಗುಬ್ಬಿಯವರು ಎಂಬುದು ಎಲ್ಲರಿಗೂ ಗೊತ್ತಿತ್ತು. ಬಿಗ್ ಬಾಸ್‌ನಿಂದ ಔಟ್ ಆದಾಗಲೂ ವೇದಿಕೆ ಮೇಲೆ ಹೇಳಿದ್ದರು. ಇದೀಗ ತ್ರಿವಿಕ್ರಂ ಕೂಡ ತುಮಕೂರಿನ ಗುಬ್ಬಿಯವರೇ ಎಂಬುದನ್ನು ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲ ಸ್ಕೂಲು, ಕಾಲೇಜನ್ನು ಗುಬ್ಬಿಯಲ್ಲಿಯೇ ಮಾಡಿದ್ದರಂತೆ. ಅಷ್ಟೇ ಅಲ್ಲ ತ್ರಿವಿಕ್ರಂ ಸೀನಿಯರ್, ಅನುಷಾ ಜೂನಿಯರ್ ಅಂತೆ. ಯಾವ ಕಾಲೇಜು ಎಂಬುದನ್ನು ಮಾತ್ರ ಹೇಳಿಲ್ಲ. ನೀವ್ಯಾರಾದ್ರೂ ಅವರ ಕ್ಲಾಸ್‌ಮೇಟ್ಸ್ ಆಗಿದ್ರೆ ಕಾಲೇಜಿನ ಹೆಸರನ್ನ ಕಮೆಂಟ್ ಮಾಡಿ.

More from Filmibeat

English summary
Here is the details about Trivikram and Anusha studied at Gubbi College in Tumkur.
Read more about: tv serial bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X