What the F***; ನಮ್ರತಾ ನಂಬರ್ ಅನ್ನು ಕಿಶನ್ ಹೀಗೆ ಸೇವ್ ಮಾಡಿಕೊಂಡಿರುವುದೇಕೆ?

By ಎಸ್ ಸುಮಂತ್

ಸೋಷಿಯಲ್ ಮೀಡಿಯಾದಲ್ಲಿ ನಮ್ರತಾ ಹಾಗೂ ಕಿಶನ್ ಬೆಳಗಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅದರಲ್ಲೂ ಇಬ್ಬರ ಡ್ಯಾನ್ಸ್ ವಿಡಿಯೋಗೇ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇಬ್ಬರು ಕೂಡ ಒಳ್ಳೆಯ ಡ್ಯಾನ್ಸರ್ಸ್. ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿ ಮೋಡಿ ಮಾಡಿದ ವಿಡಿಯೋಗಳು ಇದಾವೆ. ಇವರಿಬ್ಬರ ಡ್ಯಾನ್ಸ್‌ಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ.

ಎಷ್ಟೋ ಜನರಿಗೆ ಈ ಇಬ್ಬರು ಇಷ್ಟೊಂದು ಕ್ಲೋಸ್ ಆಗಿದ್ದೇಗೆ ಎಂಬ ಪ್ರಶ್ನೆ ಸಾಕಷ್ಟು ಕಾಡಿದೆ. ಅದಕ್ಕೆಲ್ಲ ಉತ್ತರವನ್ನು ಇಂದು ಕಿಶನ್ ಬೆಳಗಲಿ ಹಾಗೂ ನಮ್ರತಾ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ ರೇಡಿಯೋ ಮಿರ್ಚಿನಲ್ಲಿ ಮಾತಾಡುತ್ತಾ ಎಷ್ಟೋ ಜನರಿಗೆ ಗೊತ್ತೇ ಇರದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ಏನೆಲ್ಲಾ ಮಾತಾಡಿದರು ಎಂಬ ಮಾಹಿತಿಗೆ ಮುಂದೆ ಓದಿ.

Do You Know By which Name Kishan Saved Namratha gowda s Number in his Phone

ಫ್ರೆಂಡ್ಶಿಪ್ ಶುರು ಆಗಿದ್ದೇಗೆ?

ನಮ್ರತಾ ಹಾಗೂ ಕಿಶನ್ ಪರಿಚಯವಾಗಿದ್ದು 'ತಕಧಿಮಿತ' ಡ್ಯಾನ್ಸ್ ಶೋ ಮೂಲಕ. ಆ ಸಮಯದಲ್ಲಿ ನಮ್ರತಾ ಅವರ ಡ್ಯಾನ್ಸ್ ಪಾಟ್ನರ್ ಕಾಲಿನ ಸಮಸ್ಯೆ ಆಗಿ ಅರ್ಧಕ್ಕೆ ಬಿಟ್ಟಿದ್ದರು. ಆಗ ನಮ್ರತಾಗೆ ಪಾಟ್ನರ್ ಆಗಿದ್ದು ಇದೇ ಕಿಶನ್. ಡ್ಯಾನ್ಸ್ ಮುಗಿದ‌ ಮೇಲೆ ನಮ್ರತಾರ ತಾಯಿ ಕಿಶನ್ ಕ್ಲೋಸ್ ಆಗಿದ್ದು. ಹಬ್ಬ ಹರಿದಿನಗಳಿಗೆ ಕರೆಯುತ್ತಿದ್ದರು. ಬಳಿಕ ಮನೆಯವರೆಲ್ಲ ಕ್ಲೋಸ್ ಆಗಿದ್ದು ಅಂತ ಕಿಶನ್ ಹೇಳಿಕೊಂಡಿದ್ದಾರೆ.

ನಮ್ರತಾ ಡಿನ್ನರ್ ಸೀಕ್ರೇಟ್ ಹೇಳಿದ ಕಿಶನ್

ನಮ್ರತಾ ಹಾಗೆಲ್ಲಾ ಎಲ್ಲಾ ಕಡೆ ಎಲ್ಲರನ್ನು ಕರೆಯುವುದಿಲ್ಲ. ಕಿಶನ್ ಅಷ್ಟೊಂದು ಕ್ಲೋಸ್ ಆಗಿದ್ದರು, ಊಟಕ್ಕೆ ಜೊತೆಗೆ ಕರೆದುಕೊಂಡು ಹೋಗಲ್ಲವಂತೆ. ಈ ಬಗ್ಗೆ ಮಾತನಾಡಿರುವ ಕಿಶನ್, ಊಟಕ್ಕೆ ಅಂತ ಹೊರಗಡೆ ಹೊರಟರೆ ಇಬ್ಬರು ಫ್ರೆಂಡ್ಸ್ ಇದಾರೆ ಅವರನ್ನು ಮಾತ್ರ ಕರೆಯುವುದು. ನಾನು ಅಲ್ಲೇ ಪಕ್ಕದ ರೋಡಲ್ಲಿ ಇದ್ದೀನಿ ಅಂತ ಗೊತ್ತಾದ್ರೂ ಕರೆಯಲ್ಲ ಎಂದಿದ್ದಾರೆ.

Do You Know By which Name Kishan Saved Namratha gowda s Number in his Phone

ನಮ್ರತಾ ಅಂಡ್ ಕಿಶನ್ ಅಡ್ಡ ಯಾವ್ದು?

ಸೋಷಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಮಾಡಿದಾಗ, ಮನೆಗೆ ಹಬ್ಬಗಳಿಗೆ, ಸಮಾರಂಭಗಳಿಗೆ ಹೋದಾಗ ಕಿಶನ್ ಕಾಣಿಸಿಕೊಳ್ಳುತ್ತಾರೆ. ಆದರೆ ಫ್ರೆಂಡ್ಸ್ ಅಂತ ಬಂದರೆ ಭೇಟಿಯಾಗುವ ಒಂದು ಅಡ್ಡ ಇರಲೇಬೇಕು ಅಲ್ವಾ. ಅದೇ ಥರ ಕಿಶನ್ ಹಾಗೂ ನಮ್ರತಾಗು ಒಂದು ಅಡ್ಡ ಇದೆ. ಆ ಅಡ್ಡ ಎಲ್ಲಿ ಎಂಬುದನ್ನು ಹೇಳಿಕೊಂಡಿದ್ದಾರೆ. ಆದರೆ ‌ನೋಡುಗರಿಗೆ ಗೊತ್ತಾಗಿಲ್ಲ. ಬೀಪ್ ಸೌಂಡ್ ಹಾಕಿಸಿದ್ದಾರೆ.

ನಮ್ರತಾನ ಏನಂತ ಕರೀತಾರೆ ಕಿಶನ್?

ಇನ್ನು ಫ್ರೆಂಡ್ಸ್ ಅಂತ ಬಂದಾಗ ನೆಕ್ ನೇಮ್ ಇರುವುದು ಕಾಮನ್. ಕಿಶನ್ ಅವರು ನಮ್ರತಾರನ್ನ ಏನಂತ ಕರೆಯುತ್ತಾರೆ ಹಾಗೇ ನಮ್ರತಾ, ಕಿಶನ್ ಅವರನ್ನ ಏನಂತ ಕರೆಯುತ್ತಾರೆ ಎಂಬ ಕುತೂಹಲದ ಪ್ರಶ್ನೆಗೂ ಉತ್ತರಿಸಿದ್ದಾರೆ. 'ನಮ್ರತಾಳನ್ನ ಗುಂಡಕ್ಕ ಅಂತ ಕರೆಯುತ್ತೀನಿ. ಆದ್ರೆ ನಂಬರ್ ಸೇವ್ ಮಾಡಿಕೊಂಡಿರುವುದು ಮಾತ್ರ WTF ಅಂತ. ಅದಕ್ಕೆ ಕಾರಣವೂ ಇದೆ. ಯಾವಾಗ ಕೋಪ ಬಂದ್ರು ನಮ್ರತಾ What The F*** ಅಂತಾರೆ. ಅದ್ಕೆ ಆ ರೀತಿ ಸೇವ್ ಮಾಡಿಕೊಂಡಿದ್ದೀನಿ ಎಂದಿದ್ದಾರೆ. ಹಾಗೇ ನಮ್ರತಾ ಕೂಡ ಕಿಶನ್ ಹೆಸರನ್ನ ಸ್ಟ್ರೆಸ್ ಅಂತ ಸೇವ್ ಮಾಡಿಕೊಂಡಿದ್ದಾರಂತೆ. ಯಾವಾಗಲೂ ಸ್ಟ್ರೆಸ್ ತೆಗೆದುಕೊಳ್ಳುವುದು ಕಿಶನ್ ಜಾಸ್ತಿ ಅಂತೆ. ಅದಕ್ಕೆ ಆ ರೀತಿ ಸೇವ್ ಮಾಡಿಕೊಂಡಿದ್ದೀನಿ ಎಂದಿದ್ದಾರೆ.

More from Filmibeat

English summary
Biggboss kannada fame Namratha gowda talks about her friendship with Kishan belagali;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X