'ಅಣ್ಣಯ್ಯ' ಧಾರಾವಾಹಿಯಲ್ಲಿ ನಟಿ ನಿಶಾ ರವಿಕೃಷ್ಣನ್ ಮೊದಲ ಧಾರಾವಾಹಿ ಯಾವುದು ಗೊತ್ತಾ?

By ಅನಿತಾ ಬನಾರಿ

ನಟಿ ನಿಶಾ ರವಿಕೃಷ್ಣನ್ ಕನ್ನಡ ಕಿರುತೆರೆ ಪ್ರೇಕ್ಷಕರಿಗಂತೂ ಚೆನ್ನಾಗಿ ಪರಿಚಯ. ಅದರಲ್ಲೂ 'ಗಟ್ಟಿಮೇಳ' ಧಾರಾವಾಹಿಯ ಅಮೂಲ್ಯ ಪಾತ್ರಧಾರಿಯಾಗಿ ಈಕೆ ಎಲ್ಲರ ಮನಸೂರೆಗೊಂಡಿರುವುದಂತೂ ಸತ್ಯ. ತಮ್ಮ ನಟನೆಯಿಂದಲೇ ಕಿರುತೆರೆ ವೀಕ್ಷಕರ ಮನ ಸೆಳೆದ ನಿಶಾ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣಯ್ಯ' ಧಾರಾವಾಹಿಯಲ್ಲಿ ಪಾರ್ವತಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಆ ಮೂಲಕ ಮತ್ತೊಮ್ಮೆ ತಮ್ಮ ಅದ್ಭುತ ನಟನೆಯ ಮೂಲಕ ಮತ್ತೊಮ್ಮೆ ಕನ್ನಡ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

ಅಂದ ಹಾಗೆ ನಿಶಾ ರವಿಕೃಷ್ಣನ್ ಅವರ ನಟನಾ ಜರ್ನಿ ನಿನ್ನೆ ಮೊನ್ನೆಯದಲ್ಲ. ಬದಲಿಗೆ ಈಕೆಯ ಕಿರುತೆರೆ ನಂಟು ಶುರುವಾಗಿದ್ದು ಸಣ್ಣ ವಯಸ್ಸಿನಲ್ಲಿ. ಆಶ್ಚರ್ಯ ಎಂದರೂ ಸತ್ಯ. ಬಾಲ್ಯದಲ್ಲಿಯೇ ಇವರು ಚಿಂಟು ಟಿವಿ ವಾಹಿನಿಯಲ್ಲಿ ನಿರೂಪಕಿಯಾಗಿ ಮಿಂಚಿದ್ದರು. ಇದರ ಜೊತೆಗೆ ಹಿರಿಯ ಕಲಾವಿದ ಮಂಡ್ಯ ರಮೇಶ್ ಅವರ ತಂಡದಲ್ಲಿ ಹಲವಾರು ನಾಟಕಗಳನ್ನು ಮಾಡಿರುವ ಈಕೆ ತನ್ನ ತಂದೆಯಿಂದ ಸ್ಪೂರ್ತಿ ಪಡೆದು ನಟನೆಯನ್ನು ಮುಂದುವರಿಸಬೇಕೆಂಬ ನಿರ್ಧಾರಕ್ಕೆ ಬಂದರು.

Do you know Gattimela and Annayya fame actress Nisha Ravikrishnan first serial

ನಟನೆ ಅಷ್ಟೇ ಅಲ್ಲದೆ ಭರತನಾಟ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದಯೂ ಆಗಿದ್ದಾರೆ ನಟಿ ನಿಶಾ ರವಿಕೃಷ್ಣನ್. ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ 'ಇಷ್ಟಕಾಮ್ಯ' ಸಿನಿಮಾದ ಹಾಡೊಂದರಲ್ಲಿ ಬ್ಯಾಕ್ ಡಾನ್ಸರ್ ಆಗಿ ಸಿನಿಮಾಗೆ ಕಾಲಿಟ್ಟ ಈ ನಟಿ ನಂತರ ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ನಾಯಕಿಯ ತಂಗಿಯ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಮೊದಲ ಧಾರಾವಾಹಿಯಲ್ಲಿಯೇ ಸೀರಿಯಲ್ ಪ್ರಿಯರ ಮನ ಸೆಳೆದರು. ಮುಂದೆ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ಆಗಿ ನಟಿಸಿದ ಈಕೆ ಬರೋಬ್ಬರಿ ಆರು ವರ್ಷಗಳ ಕಾಲ ತಮ್ಮ ಮುದ್ದಾದ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.

ತದ ನಂತರ ತೆಲುಗು ಕಿರುತೆರೆಗೆ ಹಾರಿದ ಈಕೆ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮುತ್ಯಾಮಂತ ಮುದ್ದು' ಧಾರಾವಾಹಿಯಲ್ಲಿ ನಾಯಕಿ ಗೀತಾಳಾಗಿ ಅಭಿನಯಿಸಿದರು. ಇದರ ಜೊತೆಗೆ ಸದ್ಯ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮ್ಮಾಯಿಗಾರು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಿಶಾ ರವಿಕೃಷ್ಣನ್ 'ಅಣ್ಣಯ್ಯ' ಧಾರಾವಾಹಿಯ ಪಾರ್ವತಿಯಾಗಿ ಕನ್ನಡ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ.

Do you know Gattimela and Annayya fame actress Nisha Ravikrishnan first serial

ಅಂದ ಹಾಗೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಟ್ಟಿಮೇಳ' ಧಾರಾವಾಹಿಯು ಈ ವರ್ಷ ಜನವರಿ 5 ರಂದು ಕೊನೆಗೊಂಡಿತ್ತು. ತದ ನಂತರ ಮೂರು ನಾಲ್ಕು ತಿಂಗಳ ಕಾಲ ಕನ್ನಡ ಕಿರುತೆರೆಯಿಂದ ದೂರವಿದ್ದ ನಿಶಾ ರವಿಕೃಷ್ಣನ್ ಇದೀಗ ಪಾರ್ವತಿಯಾಗಿ ಮತ್ತೆ ಜೀ ಕನ್ನಡದಲ್ಲಿ ಕಾಣಿಸಿಕೊಂಡಿದ್ದು ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ.

ಇನ್ನು 'ಅದೊಂದು ಇತ್ತು ಕಾಲ' ಸಿನಿಮಾ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದರು ನಟಿ ನಿಶಾ ರವಿಕೃಷ್ಣನ್. ಇದರ ಜೊತೆಗೆ ಸ್ತ್ರೀ ಪ್ರಧಾನ ಕಥಾಂದರವನ್ನು ಹೊಂದಿರುವ 'ಅಂಶು' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ನಿಶಾ ರವಿಕೃಷ್ಣನ್ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ.

More from Filmibeat

English summary
After Gattimela actress Nisha Ravikrishnan attracting viewers through Annaiya serial;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X