Gouthami Jadav: 'ಸತ್ಯ' ಧಾರಾವಾಹಿಯ ಗೌತಮಿ ಜಾದವ್ ನಟಿಯನ್ನಾಗಿಸಿದ್ದು ಜಿಮ್ನಾಸ್ಟಿಕ್.. ಅದು ಹೇಗೆ?
ಸ್ವಪ್ನ ಕೃಷ್ಣ ನಿರ್ಮಾಣದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿಯಲ್ಲಿ ನಾಯಕಿ ಸತ್ಯ ಆಗಿ ಅಭಿನಯಸುವ ಮೂಲಕ ಕಿರುತೆರೆ ಜಗತ್ತಿನಲ್ಲಿ ಸದ್ದು ಮಾಡುತ್ತಿರುವವರು ಗೌತಮಿ ಜಾಧವ್. ರಗಡ್ ಅವತಾರದ ಮೂಲಕ ಕೇವಲ ಹೆಣ್ಣು ಮಕ್ಕಳು ಮಾತ್ರವಲ್ಲದೇ ಗಂಡು ಹೈಕ್ಕಳ ಮನ ಕದ್ದ ಗೌತಮಿ ಜಾಧವ್ ಮನೋಜ್ಞ ನಟನೆಯ ಮೂಲಕ ಮನ ಸೆಳೆದ ಬೆಡಗಿ.
ಧಾರಾವಾಹಿ ಆರಂಭದ ದಿನಗಳಿಂದಲೂ ಮನೋಜ್ಞ ನಟನೆಯ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆದಿರುವ ಗೌತಮಿ ಜಾಧವ್ ಫ್ಯಾಷನ್ ಡಿಸೈನಿಂಗ್ ಪದವೀಧರೆ. 'ನಾಗಪಂಚಮಿ' ಧಾರಾವಾಹಿಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಗೌತಮಿ ಜಾಧವ್ ನಟಿಯಾಗಲು ಮೂಲ ಕಾರಣ ಜಿಮ್ನಾಸ್ಟಿಕ್ ಎಂದರೆ ತಪ್ಪಾಗಲಾರದು!

ನಟಿಯಾಗಿದ್ದು ಜಿಮ್ನಾಸ್ಟಿಕ್‌ನಿಂದಾಗಿ!
ಜಿಮ್ನಾಸ್ಟಿಕ್ ಕಲಿಯಲು ತೆರಳಿದ್ದ ಗೌತಮಿ ಅದು ತನ್ನ ಬದುಕಿನ ದಿಕ್ಕನ್ನೇ ಬದಲಿಸುತ್ತದೆ ಎಂಬ ಕನಸನ್ನು ಕೂಡಾ ಕಂಡಿರಲಿಲ್ಲ! ತನ್ನಂತೆಯೇ ಜಿಮ್ನಾಸ್ಟಿಕ್ ಕಲಿಯಲು ಬರುತ್ತಿದ್ದ ಕಲಾವಿದರುಗಳನ್ನು, ನಟ ನಟಿಯರನ್ನು ನೋಡುತ್ತಿದ್ದ ಗೌತಮಿ ಜಾಧವ್ ತಾನು ನಟಿಯಾಗಬಾರದೇಕೆ ಎಂದು ಆಲೋಚಿಸುತ್ತಿದ್ದರು. ಆದರೆ ಅದು ಕೂಡಾ ಇಷ್ಟು ಬೇಗನೇ ಈಡೇರುತ್ತದೆ ಎಂದು ಗೌತಮಿ ಅಂದುಕೊಂಡಿರಲಿಲ್ಲ.

ಸಿನಿಮಾಗಳಲ್ಲಿ ಮಿಂಚಿದ್ದೇ ಹೆಚ್ಚು
'ನಾಗಪಂಚಮಿ' ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಗೌತಮಿ ಜಾ್ಧವ್ ನಂತರದ ದಿನಗಳಲ್ಲಿ ಕಿರುತೆರೆಗಿಂತ ಹಿರಿತೆರೆಯಲ್ಲಿ ಮಿಂಚಿದ್ದೇ ಹೆಚ್ಚು. 'ಲೂಟಿ','ಆದ್ಯಾ', 'ಕಿನಾರೆ' ಹೀಗೆ ಬೆರಳೆಣಿಕೆಯಷ್ಟು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ ಗೌತಮಿ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ಪರಭಾಷೆಯ ಸಿನಿಮಾ ರಂಗದಲ್ಲಿ ಮೋಡಿ ಮಾಡಿದರು.

ಶಾರ್ಟ್ ಫಿಲ್ಮ್‌ನಲ್ಲೂ ಗೌತಮಿ ನಟನೆ
ಸದ್ಯ 'ಸತ್ಯ' ಧಾರಾವಾಹಿಯ ನಾಯಕಿಯಾಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಈ ಚೆಂದುಳ್ಳಿ ಚೆಲುವೆ ಕಿರುಚಿತ್ರದಲ್ಲಿಯೂ ನಟಿಸಿದ ಚೆಲುವೆ. ಅಲ್ಲದೆ ಖ್ಯಾತ ಛಾಯಾಗ್ರಾಹಕ ಸತ್ಯ ಹೆಗಡೆ ಅವರು ನಿರ್ಮಾಣದ ಕಿರುಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ ಗೌತಮಿ ಜಾಧವ್.

ಪತಿಯ ನಿರ್ದೇಶನದಲ್ಲಿ ನಟನೆ
ಸತ್ಯ ಹೆಗಡೆ ನಿರ್ಮಾಣದಲ್ಲಿ ಮೂಡಿ ಬಂದ 'ಪಪ್ಪೆಟ್ಸ್' ಎನ್ನುವ ಕಿರುಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಗೌತಮಿ ಜಾಧವ್ ಬಣ್ಣ ಹಚ್ಚಿದ್ದಾರೆ. ಸೇಲ್ಸ್ ಗರ್ಲ್ ಪ್ರಭಾವಕ್ಕೆ ಒಳಗಾದ ನಟಿಯ ಕುರಿತ ಕಿರುಚಿತ್ರ ಇದಾಗಿದ್ದು ಅದರಲ್ಲಿಯೂ ಆಕೆ ನಟಿಯಾಗಿ ನಟಿಸಿರುವುದು ವಿಶೇಷ. ಇದರ ಜೊತೆಗೆ ಮುಖ್ಯವಾದ ವಿಚಾರವೆಂದರೆ ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು ಬೇರಾರು ಅಲ್ಲ, ಅದು ಗೌತಮಿ ಜಾಧವ್ ಅವರ ಪತಿ ಅಭಿಷೇಕ್ ಕಾಸರಗೋಡು. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಗೌತಮಿ ಮತ್ತೆ ಹಿರಿತೆರೆಗೆ ಕಾಲಿಡುತ್ತಾರಾ ಎಂದು ಕಾದು ನೋಡಬೇಕಾಗಿದೆ.


Click it and Unblock the Notifications











