'ಅನುಪಲ್ಲವಿ' ಧಾರಾವಾಹಿಯ ನಟಿ ಅನುಪಲ್ಲವಿ ನಟನಾ ಜರ್ನಿ ಶುರುವಾಗಿದ್ದು ಹೇಗೆ ಗೊತ್ತೆ?

By ಅನಿತಾ ಬನಾರಿ

ವಿನೂತನ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಧಾರಾವಾಹಿಗಳ ಪೈಕಿ ಉದಯ ವಾಹಿನಿಯೂ ಒಂದು. ವಿಭಿನ್ನ ಕಥಾಹಂದರವನ್ನೊಳಗೊಂಡ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿರುವ ಉದಯ ವಾಹಿನಿಯಲ್ಲಿ ಇದೀಗ ಹೊಸ ಧಾರಾವಾಹಿಯೊಂದು ಶುರುವಾಗಲಿದೆ.

ಹೌದು, 'ಅನುಪಲ್ಲವಿ' ಹೆಸರಿನ ಧಾರಾವಾಹಿಯು ನಿಮ್ಮ ನೆಚ್ಚಿನ ಉದಯ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಇನ್ನು ಆ ಧಾರಾವಾಹಿಯಲ್ಲಿ ಗೀತಾ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆಯಲು ಬರುತ್ತಿದ್ದಾರೆ ಅನುಪಲ್ಲವಿ.

Anupallavi will be charming as Geetha in the serial Anupallavi

"ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಅನುಪಲ್ಲವಿ. ನಾನು ಈ ಹೊಸ ಧಾರಾವಾಹಿಯಲ್ಲಿ ಗೀತಾ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ನಮ್ಮ ಸೀರಿಯಲ್‌ನಲ್ಲಿ ಒಂದು ಹೊಸ ಕಾನ್ಸೆಪ್ಟ್ ಮೂಲಕ ನಾವು ನಿಮ್ಮನ್ನು ಮನರಂಜಿಸುತ್ತೇವೆ. ಅದು ಅಮ್ಮ ಮಗಳ ಕಾನ್ಸೆಪ್ಟ್. ಅದು ಖಂಡಿತವಾಗಿಯೂ ನೀವೆಲ್ಲರೂ ಇಷ್ಟಪಡ್ತೀರಾ. ಸೀರಿಯಲ್ ನೋಡಿ ಸಪೋರ್ಟ್ ಮಾಡಿ" ಎಂದು ಇನ್‌ಸ್ಟಾಗ್ರಾಂನಲ್ಲಿ ಅನುಪಲ್ಲವಿ ಹೇಳಿಕೊಂಡಿದ್ದಾರೆ.

ಇನ್ನು ಅನುಪಲ್ಲವಿ ಅವರು ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದರಲ್ಲಿಯೂ ನಟಿಸುತ್ತಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಶುರುವಾಗಿರುವ ಹೊಚ್ಚ ಹೊಸ ಧಾರಾವಾಹಿ 'ನೂರು ಜನ್ಮಕೂ' ನಲ್ಲಿ ಛಾಯಾ ಪಾತ್ರದಲ್ಲಿ ನಟಿಸುತ್ತಿರುವ ಈಕೆ ಖಳನಾಯಕಿಯಾಗಿ ಮೋಡಿ ಮಾಡುತ್ತಿದ್ದಾರೆ.

ಆಶ್ಚರ್ಯದ ಸಂಗತಿಯೆಂದರೆ 'ನೂರು ಜನ್ಮಕೂ' ಧಾರಾವಾಹಿಯ ಮೊದಲು ಅನುಪಲ್ಲವಿ ಗೌಡ ಅವರು ನಟಿಸಿದ್ದು 'ಬೃಂದಾವನ' ಧಾರಾವಾಹಿಯಲ್ಲಿ. ಅದು ಕೂಡಾ ಪ್ರಸಾರವಾಗುತ್ತಿದುದು ಕಲರ್ಸ್ ಕನ್ನಡ ವಾಹಿನಿಯಲ್ಲಿ. ಹೌದು, 'ಬೃಂದಾವನ' ಧಾರಾವಾಹಿಯಲ್ಲಿ ನಾಯಕಿ ಪುಷ್ಪಾ ಅತ್ತಿಗೆ ಆಗಿ ನಟಿಸಿದ್ದರು ಅನುಪಲ್ಲವಿ. ಗಿರಿಜಾ ಎನ್ನುವ ಪಾತ್ರಕ್ಕೆ ಜೀವ ತುಂಬಿ ಸೈ ಎನಿಸಿಕೊಂಡ ಈಕೆ ಗಯ್ಯಾಳಿ ಹೆಂಗಸಾಗಿ ತೆರೆಯ ಮೇಲೆ ಮಿಂಚಿದ್ದರು. ಎಲ್ಲದಕ್ಕಿಂತಲೂ ಹೆಚ್ಚಾಗಿ ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನೆ, ಮನ ಸೆಳೆದಾಕೆ.

ಮುಂದೆ ಟಿ ಆರ್ ಪಿ ಕಡಿಮೆ ಇದ್ದ ಕಾರಣದಿಂದಲೋ ಏನೋ, ಆ ಧಾರಾವಾಹಿ ಅರ್ಧದಲ್ಲಿಯೇ ಮುಕ್ತಾಯ ಕಂಡಿತು. ತದ ನಂತರ ಈಗ ಏಕಕಾಲಕ್ಕೆ ಎರಡೆರಡು ಧಾರಾವಾಹಿಗಳಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಅನುಪಲ್ಲವಿ ಗೌಡ 'ಹೂಮಳೆ' ಧಾರಾವಾಹಿಯಲ್ಲಿ ನಾಯಕನ ಅಕ್ಕನಾಗಿ ನಟಿಸಿ ವೀಕ್ಷಕರ ಮನ ಸೆಳೆದಿದ್ದರು.

'ಪರ್ವ', 'ನಮ್ಮನೆ ಯುವರಾಣಿ' ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅನುಪಲ್ಲವಿ ಗೌಡ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಬೆಡಗಿ. ಕಿರುತೆರೆ, ಹಿರಿತೆರೆಯ ಹೊರತಾಗಿ ಈಕೆ ರಂಗಭೂಮಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಪ್ರತಿಭೆ ಎಂದರೆ ತಪ್ಪಾಗಲಾರದು. ಒಂದಷ್ಟು ನಾಟಕಗಳಲ್ಲಿಯೂ ಅಭಿನಯಿಸಿರುವ ಅನುಪಲ್ಲವಿ ಗೌಡ ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲೂ ಕೊಂಚ ಮಟ್ಟಿಗೆ ಆ್ಯಕ್ಟೀವ್ ಆಗಿದ್ದಾರೆ.

ಸಮಯ ಸಿಕ್ಕಾಗಲೆಲ್ಲಾ ರೀಲ್ಸ್ ಮಾಡುವ ಈಕೆ ಅದನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಾ ಫಾಲೋವರ್ಸ್ ಗಳಿಗೆ ಮನರಂಜನೆ ನೀಡುತ್ತಾರೆ. ಇವರು ಶೇರ್ ಮಾಡಿರುವ ಕೆಲವೊಂದು ವಿಡಿಯೋಗಳು ಮಿಲಿಯಗಟ್ಟಲೇ ವೀವ್ಸ್ ಪಡೆದಿದ್ದು ಇವರು ಮೂವತ್ತು ಸಾವಿರ ಫಾಲೋವರ್ಸ್ ಗಳನ್ನಷ್ಟೇ ಹೊಂದಿದ್ದಾರೆ.

More from Filmibeat

English summary
Anupallavi will be charming as Geetha in the serial Anupallavi,
Read more about: actress serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X