"ಕಿರುತೆರೆಯಲ್ಲಿ ನಟಿಸುತ್ತೇನೆಂದು ನನ್ನನ್ನು ತುಚ್ಛವಾಗಿ ಕಂಡರು"; ನಟಿ ರೂಪಾಲಿ ಗಂಗೂಲಿ

By ಅನಿತಾ ಬನಾರಿ

ಸಿನಿಮಾ ಸೆಲೆಬ್ರಿಟಿಗಳಾಗಲಿ ಅಥವಾ ಸಾಮಾನ್ಯರೇ ಆಗಲಿ ಪ್ರತಿಯೊಬ್ಬರಿಗೂ ಅವರದೇ ಆದ ಕಷ್ಟಗಳು ಇರುತ್ತವೆ. ಆ ಸಂಕಷ್ಟಗಳಿಂದ ಹೊರಬರಲು ಪ್ರತಿಯೊಬ್ಬರು ಅವರದೇ ರೀತಿಯಲ್ಲಿ ಹೋರಾಡುತ್ತಾರೆ. ಅಂತೆಯೇ ಹಿಂದಿ ಧಾರಾವಾಹಿ ನಟಿ ರೂಪಾಲಿ ಗಂಗೂಲಿಯವರು ಕೂಡ ಕಿರುತೆರೆಗೆ ಕಾಲಿಡುವ ಮೂಲಕ ತಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಶ್ರಮಪಟ್ಟಿದ್ದಾರೆ.

1990ರ ಸಮಯದಲ್ಲಿ ನಟಿ ರೂಪಾಲಿ ಗಂಗೂಲಿಯವರು ಧಾರಾವಾಹಿ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ್ದರು. ಹಲವಾರು ವಿಭಿನ್ನವಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಇವರು ತಮ್ಮ ನಟನೆಯ ಮೂಲಕ ಮನೆ ಮಾತಾಗಿದ್ದರು.

Do you know how Anupama serial fame Rupali Ganguly started her acting journey

ಅದಾದ ನಂತರ ಹೆಚ್ಚು ಕಮ್ಮಿ ಆರರಿಂದ ಏಳು ವರ್ಷಗಳ ಕಾಲ ಯಾವುದೇ ನಟನೆಯಲ್ಲಿ ಕಾಣಿಸಿಕೊಳ್ಳದ ನಟಿ ರೂಪಾಲಿ ಗಂಗೂಲಿ ಇದೀಗ ಮತ್ತೆ ಕಿರುತೆರೆ ನಟನೆಗೆ ಕಾಲಿಟ್ಟಿದ್ದಾರೆ. ಈಗ ತಮ್ಮ ಕಿರುತೆರೆ ಜರ್ನಿ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ಅವರು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ದಶಕಗಳ ಹಿಂದೆ ನಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟವಿತ್ತು. ನನ್ನ ತಂದೆ ಆರೋಗ್ಯ ಸರಿ ಇರಲಿಲ್ಲ. ಯಾವುದೇ ವ್ಯವಸ್ಥೆ ಇಲ್ಲದ ಸರ್ಕಾರಿ ಆಸ್ಪತ್ರೆಯಲ್ಲಿ ಅವರನ್ನು ಸೇರಿಸಲು ನನಗೆ ಇಷ್ಟವಿರಲಿಲ್ಲ. ಹಾಗಾಗಿ ನಾನು ಧಾರಾವಾಹಿ ಕ್ಷೇತ್ರಕ್ಕೆ ಕಾಲಿಟ್ಟೆ. ನನಗೆ ಸಿಕ್ಕ ಸಣ್ಣಪುಟ್ಟ ಪಾತ್ರಗಳನ್ನೇ ಅಚ್ಚುಕಟ್ಟಾಗಿ ಮಾಡುತ್ತಾ ಹೋದೆ. ಸಂಭಾವನೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದರೆ ಆಗ ಬರುತ್ತಿದ್ದ ಪ್ರತಿಯೊಂದು ರೂಪಾಯಿ ನನಗೆ ಬಹಳ ಮುಖ್ಯವಾಗಿತ್ತು ಎಂದು ರೂಪಾಲಿ ಹಂಚಿಕೊಂಡಿದ್ದಾರೆ.

"ಅಷ್ಟೇ ಅಲ್ಲದೆ ಈ ರೀತಿ ಧಾರಾವಾಹಿಗೆ ಕಾಲಿಟ್ಟೆ ಎಂಬ ಕಾರಣಕ್ಕೆ ನನ್ನ ಕುಟುಂಬದವರು ಹಾಗೂ ಬಹಳಷ್ಟು ಜನ ನನ್ನನ್ನು ಬಹಳ ತುಚ್ಚವಾಗಿ ಕಂಡರು. ಆದರೆ ಮನೆಯಲ್ಲಿನ ಸಂಕಷ್ಟ ನನಗೆ ಅದು ಯಾವುದಕ್ಕೂ ತಲೆಕೆಡಿಸಿಕೊಳ್ಳದಂತೆ ನೋಡಿಕೊಂಡಿತು. ಮಾತನಾಡುವವರು ಏನು ಬೇಕಾದ್ರೂ ಮಾತನಾಡುತ್ತಾರೆ. ಆದರೆ ನಾವು ಏನೆಂಬುದು ನಮಗೆ ತಿಳಿದಿದ್ದರೆ ಎಲ್ಲವೂ ಸುಲಭ ಸಾಧ್ಯ" ಎಂದು ತಾವು ಅನುಭವಿಸಿದ ಕೆಟ್ಟ ಕಾಮೆಂಟ್‌ಗಳ ಬಗ್ಗೆಯೂ ಈಕೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Do you know how Anupama serial fame Rupali Ganguly started her acting journey

ಅಂದ ಹಾಗೆ ನಟಿ ರೂಪಾಲಿ ಗಂಗೂಲಿ ಅವರು 'ಸುಕನ್ಯಾ' ಧಾರಾವಾಹಿ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ 'ಸಾರಾಭಾಯಿ ವರ್ಸಸ್ ಸಾರಾಭಾಯಿ' ಧಾರಾವಾಹಿಯಿಂದ ಬಹಳಷ್ಟು ಮನೆ ಮಾತಾಗಿದ್ದರು. ನಂತರ ಅಶ್ವಿನ್ ಕೇ ವರ್ಮ ಎಂಬುವವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಈಕೆ, ಇದೀಗ ಏಳು ವರ್ಷದ ಮಗನ ತಾಯಿ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಒಂದು ದೊಡ್ಡ ಬ್ರೇಕ್ ತೆಗೆದುಕೊಂಡಿರುವ ನಟಿ ರೂಪಾಲಿ ಗಂಗೂಲಿ ಇದೀಗ ಮತ್ತೆ 'ಅನುಪಮಾ' ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. 'ಅನುಪಮಾ' ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ರೂಪಾಲಿ ಸದ್ಯಕ್ಕೆ ಕಿರುತೆರೆ ಕ್ಷೇತ್ರದಲ್ಲಿ ಬಹಳ ದೊಡ್ಡ ಸಂಭಾವನೆ ತೆಗೆದುಕೊಳ್ಳುತ್ತಿರುವ ನಟಿ ಕೂಡ ಹೌದು.

More from Filmibeat

English summary
Actress Rupali Ganguly made her acting debut to compensate for the financial hardships of the family
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X