ಮೇಕಪ್ ಆರ್ಟಿಸ್ಟ್ ಆಗಿದ್ದವರು 'ದೃಷ್ಟಿಬೊಟ್ಟು' ಧಾರಾವಾಹಿಗೆ ನಾಯಕಿ? ಅರ್ಪಿತಾ ನಟಿಯಾಗಿದ್ದು ಹೇಗೆ ಗೊತ್ತೇ?

By ಅನಿತಾ ಬನಾರಿ

ನಟ ಅಥವಾ ನಟಿಯಾಗಬೇಕು. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂದು ಅನೇಕರು ಕನಸು ಕಾಣುತ್ತಾರೆ. ಆದರೆ ಇನ್ನು ಕೆಲವರು ಆಕಸ್ಮಿಕವಾಗಿ ಬಣ್ಣದ ನಂಟನ್ನು ಬೆಳೆಸಿಕೊಳ್ಳುತ್ತಾರೆ. ಅಂತಹವರ ಪೈಕಿ ಅರ್ಪಿತಾ ಮೋಹಿತೆ ಕೂಡಾ ಒಬ್ಬರು.

ಯಾರೀಕೆ ಅರ್ಪಿತಾ ಮೋಹಿತೆ? ಯಾವ ಧಾರಾವಾಹಿಯಲ್ಲಿ ಈಕೆ ನಟಿಸುತ್ತಿದ್ದಾರೆ ಎಂದು ನೀವು ಆಲೋಚಿಸುತ್ತಿದ್ದೀರಾ? ಅರ್ಪಿತಾ ಮೋಹಿತೆ ಎಂಬ ಹೆಸರು ಕಿರುತೆರೆ ವೀಕ್ಷಕರಿಗೆ ಕೊಂಚ ಹೊಸದು ಎನ್ನಿಸಬಹುದು. ಯಾಕೆಂದರೆ ಕಿರುತೆರೆಯಲ್ಲಿ ಆಕೆ ದೃಷ್ಟಿಯಾಗಿ ಫೇಮಸ್ಸು!

Do you know how Arpitha Mohite who was a makeup artist became an actress

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ದೃಷ್ಟಿಬೊಟ್ಟು'ವಿನಲ್ಲಿ ನಾಯಕಿ ದೃಷ್ಟಿ ಯಾಗಿ ಅಭಿನಯಿಸುತ್ತಿರುವ ಅರ್ಪಿತಾ ಎಂದೂ ನಟಿಯಾಗಬೇಕು ಎಂದು ಬಯಸಿದವರಲ್ಲ. ಆದರೆ, ಅವಕಾಶ ಆದಾಗಿಯೇ ಹುಡುಕಿ ಬಂದಾಗ ಬೇಡ ಎನ್ನದ ಆಕೆ ನಟನೆಯತ್ತ ಮುಖ ಮಾಡಿದರು. ಸಹಜವಾಗಿ ಮನೆಯವರ ಬೆಂಬಲವೂ ಆಕೆಗಿತ್ತು.

ದೃಷ್ಟಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಅರ್ಪಿತಾ ಮೋಹಿತೆ ಈ ಹಿಂದೆ ಒಂದೆರಡು ಸಣ್ಣ ಪುಟ್ಟ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರೂ ಆಕೆ ನಟನೆಯನ್ನು ಕಲಿತಿರಲಿಲ್ಲ. ಧಾರಾವಾಹಿಯ ನಿರ್ಮಾಣ ತಂಡದಿಂದ ನೇರವಾಗಿ ಆಡಿಶನ್ ನೀಡುವಂತೆ ಕರೆ ಬಂದಿತ್ತು. ಆಡಿಶನ್‌ಗೆ ಹೋದ ಆಕೆ ಆಯ್ಕೆಯೂ ಆಗಿದ್ದರು.

ಇದೇ ಮೊದಲ ಬಾರಿಗೆ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಕಾರಣ ಆರಂಭದಲ್ಲಿ ಕೊಂಚ ಭಯವಾಗಿತ್ತು. ನಟನೆಯ ಬಗ್ಗೆ ತಿಳಿದಿರದ ಕಾರಣ ಆಕೆಗೆ ಕಷ್ಟವೂ ಆಗಿತ್ತು. ನಂತರ ಸಿಕ್ಕ ಸಮಯದಲ್ಲಿ ನಟನೆಯ ಬಗ್ಗೆ ತಿಳಿದುಕೊಂಡ ಅರ್ಪಿತಾ ಮೋಹಿತೆ ಇಂದು ದೃಷ್ಟಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

Do you know how Arpitha Mohite who was a makeup artist became an actress

ಅಂದ ಹಾಗೇ ಬಿ.ಕಾಂ ಪದವೀಧರೆಯಾಗಿರುವ ಅರ್ಪಿತಾ ಮೇಕಪ್ ಕೋರ್ಸ್ ಕೂಡಾ ಮಾಡಿಕೊಂಡಿದ್ದಾರೆ. ಮುಂದೆ ಎರಡು ವರ್ಷಗಳ ಕಾಲ ಮೇಕಪ್ ಆರ್ಟಿಸ್ಟ್ ಆಗಿ ಈಕೆ ಕೆಲಸ ಮಾಡಿದ್ದರು. ಆ ಸಮಯದಲ್ಲಿ ಅಚಾನಕ್ ಆಗಿ ದೊರೆತ ಅವಕಾಶದಿಂದ ನಟನೆಯತ್ತ ಮುಖ ಮಾಡಿದ ಅರ್ಪಿತಾ ಇದೀಗ ಹಂತ ಹಂತವಾಗಿ ‌ನಟನೆಯ ಆಯಾಮಗಳನ್ನು ಕಲಿಯುತ್ತಿದ್ದು ಪಕ್ವತೆಯನ್ನು ಪಡೆಯುತ್ತಿದ್ದಾರೆ.

ಅಂದ ಹಾಗೇ 'ದೃಷ್ಟಿಬೊಟ್ಟು' ಧಾರಾವಾಹಿಗೆ ನಾಯಕಿಯಾಗಿ ಆಯ್ಕೆಯಾಗಿದ್ದೇ ತಡ ಅರ್ಪಿತಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಡಿಲೀಟ್ ಮಾಡಿಟ್ಟಿದ್ದರಂತೆ‌. ಸೋಶಿಯಲ್ ಮೀಡಿಯಾದಲ್ಲಿ ಆಕೆಯ ನಿಜ ಸ್ವರೂಪ ಕಂಡರೆ, ಧಾರಾವಾಹಿಯ ದೃಷ್ಟಿ ಪಾತ್ರದ ಮೇಲಿರುವ ವೀಕ್ಷಕರ, ನೆಟ್ಟಿಗರ ಕುತೂಹಲ ಕಡಿಮೆಯಾದೀತು. ಹಾಗಾಗಿ ಸೋಶಿಯಲ್ ಮೀಡಿಯಾದಿಂದ ದೂರವಿದ್ದೇನೆ ಎಂಬುದು ಆಕೆಯ ಅಂಬೋಣ.

ಎಲ್ಲರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರುವ ಹುಡುಗಿ ದೃಷ್ಟಿಗೆ ಸಂಬಂಧಗಳ ಬಗೆಗೆ ವಿಶೇಷವಾದ ಗೌರವ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಈಕೆ ತನಗೇ ಯಾರೇ ಏನೂ ಕೆಟ್ಟದೇ ಮಾಡಲಿ, ಅವರಿಗೆ ಸದಾ ಕಾಲ ಒಳ್ಳೆಯದನ್ನೇ ಬಯಸುವ ಹುಡುಗಿ ಈಕೆ. ಇದೀಗ ಆಕೆಯ ನಿಜ ಸ್ವರೂಪ ಬಹಿರಂಗವಾಗಿದ್ದು ಸೌಂದರ್ಯ ಎಂದರೆ ಉರಿದು ಬೀಳುವ ನಾಯಕ ದತ್ತ ಭಾಯ್ ಈಕೆಗೆ ಹೇಗೆ ಜೋಡಿಯಾಗುತ್ತಾನೆ? ಅವರಿಬ್ಬರೂ ಯಾವ ರೀತಿಯಲ್ಲಿ ಒಂದಾಗುತ್ತಾರೆ ಎಂಬೆಲ್ಲಾ ಕುತೂಹಲಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.

ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಟಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ಈಕೆ ತನ್ನ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಂತೂ ನಿಜ.

More from Filmibeat

English summary
Drishtibottu serial actres Arpitha Mohite stayed away from social media. Do you know how she got the role
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X