ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ ನಟನಾ ಜರ್ನಿ ಶುರುವಾಗಿದ್ದು ಹೇಗೆ ಗೊತ್ತಾ?

By ಅನಿತಾ ಬನಾರಿ

ವಿಭಿನ್ನ ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ವಾಹಿನಿಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯೂ ಒಂದು. ಹೀಗಿರುವಾಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗಲಿದೆ‌‌. 'ಯಜಮಾನ' ಹೆಸರಿನ ಧಾರಾವಾಹಿಯು ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತೀ ಶೀಘ್ರದಲ್ಲಿ ಪ್ರಸಾರ ಕಾಣಲಿದೆ. ಇನ್ನು 'ಯಜಮಾನ' ಧಾರಾವಾಹಿಯಲ್ಲಿ ಮಲ್ಲಿಯಾಗಿ ಕಾಣಿಸಿಕೊಳ್ಳಲಿದ್ದಾರೆ ನಟಿ ಸೋನು ಪಾಟೀಲ್.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಮೈನಾ' ದಲ್ಲಿ ಮರಗುಳಿ ಮಲ್ಲಿಕಾ ಆಗಿ ನಟಿಸುತ್ತಿರುವ ಸೋನು ಪಾಟೀಲ್ ಕಾಮಿಡಿಯನ್ ಆಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸುತ್ತಿದ್ದಾರೆ.

Do you know how Bigg Boss contestant Sonu Patil s acting journey started

ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿರುವ ಸೋನು ಪಾಟೀಲ್ ಅವರಿಗೆ ಯಾವತ್ತಿಗೂ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಯಾವೊಂದು ಕನಸಿರಲಿಲ್ಲ. ಸೋನು ಪಾಟೀಲ್ ಅವರ ಅಜ್ಜಿಗೆ ಮೊಮ್ಮಗಳು ನಟಿಯಾಗಬೇಕು, ಆಕೆಯನ್ನು ಟಿವಿಯಲ್ಲಿ ನೋಡಬೇಕು ಎಂಬ ಬಯಕೆಯಿತ್ತು‌. ಆದರೆ ಪತ್ರಿಕೋದ್ಯಮ ಪದವಿ ಪಡೆದಿದ್ದ ಆಕೆ ಪತ್ರಕರ್ತೆ ಆಗುವ ಸಲುವಾಗಿ ಮಹಾನಗರಿಗೆ ಕಾಲಿಟ್ಟ ಸೋನು ಪಾಟೀಲ್ ಭಡ್ತಿ ಪಡೆದಿದ್ದು ನಟಿಯಾಗಿ.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೊಗ್ಗಿನ ಮನಸ್ಸು' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕಿರುತೆರೆಗೆ ಕಾಲಿಟ್ಟ ಸೋನು ಪಾಟೀಲ್ ಅವರು ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ಮುಂದೆ 'ಗಾಂಧಾರಿ', 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸವಾಲಿಗೆ ಸೈ' ರಿಯಾಲಿಟಿ ಶೋವಿನಲ್ಲಿ ಸೋನು ಪಾಟೀಲ್ ಭಾಗವಹಿಸಿದ್ದರು. ತದ ನಂತರ ತಮಿಳು ರಿಯಾಲಿಟಿ ಶೋವಿನಲ್ಲಿಯೂ ಸ್ಪರ್ಧಿಯಾಗಿ ಭಾಗವಹಿಸಿದ ಈಕೆ ಪರಭಾಷೆಯ ಕಿರುತೆರೆಯಲ್ಲಿಯೂ ಸೋನು ಪಾಟೀಲ್ ಕಮಾಲ್ ಮಾಡಿದರು.

ಮುಂದೆ ಕಿರುತೆರೆಯಿಂದ ಹಿರಿತೆರೆಗೆ ಪಾದಾರ್ಪಣೆ ಮಾಡಿರುವ ಸೋನು ಪಾಟೀಲ್ 'ದೋಸ್ತಿ ಗ್ಯಾಂಗ್', 'ಶ್ರೀಗುರು ಕೊಟ್ಟೂರೇಶ್ವರ', 'ಯರ್ರಾಬಿರ್ರಿ' ಸಿನಿಮಾಗಳಲ್ಲಿ ಈಕೆ ಬಣ್ಣ ಹಚ್ಚಿದರು. ಮನೋಜ್ಞ ನಟನೆಯ ಮೂಲಕ ಹಿರಿತೆರೆಯಲ್ಲಿ ಸದ್ದು ಮಾಡಿದ ಸೋನು ಪಾಟೀಲ್ ಮತ್ತೆ ಕಿರುತೆರೆಗೆ ಮರಳಿದ್ದು 'ಬಿಗ್ ಬಾಸ್' ಮೂಲಕ.

ಹೌದು, ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋವಿನ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಸೋನು ಪಾಟೀಲ್ ಇಂದಿಗೂ ಬಿಗ್ ಬಾಸ್ ಸೋನು ಪಾಟೀಲ್ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೇ ಮೊದಲಿಗೆ ಸೋನು ಪಾಟೀಲ್‌ಗೆ ಬಿಗ್ ಬಾಸ್ ನಿಂದ ಕರೆ ಬಂದಾಗ ಸ್ವತಃ ಸೋನು ಅವರೇ ಅದನ್ನ ನಂಬಲಿಲ್ಲವಂತೆ. ಆಮೇಲೆ ಅದು ನಿಜ ಎಂದು ತಿಳಿದಾಗ ಖುಷಿಯಾಯಿತಂತೆ‌. ಮಾತ್ರವಲ್ಲ ಇಂದು ಆಕೆಯನ್ನು ಜನ ಗುರುತಿಸುತ್ತಾರೆ ಎಂದರೆ ಅದಕ್ಕೂ ಕೂಡಾ ಬಿಗ್ ಬಾಸ್ ಕಾರಣ.

ನಟನೆಯೇ ನನ್ನ ಜಗತ್ತು ಎಂದು ಖುಷಿಯಿಂದಲೇ ಹೇಳುವ ಸೋನಿ ಪಾಟೀಲ್ ಅವರಿಗೆ ನಾಯಕಿಯಾಗಿಯೇ ನಟನಾ ಲೋಕದಲ್ಲಿ ಕಾಣಿಸಿಕೊಳ್ಳುವ ಇರಾದೆಯಿಲ್ಲ‌. ಬದಲಿಗೆ ನಟನೆಗೆ ಅವಕಾಶ ಇರುವಂತಹ ಪಾತ್ರಗಳು ಸಿಗಬೇಕು ಎಂಬ ಬಯಕೆಯಿದೆ. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಸೋನು ಪಾಟೀಲ್ ಅವರ ನಟನಾ ಪಯಣ ಕಲರ್ ಫುಲ್ ಆಗಿ ಸಾಗಲಿ.

More from Filmibeat

English summary
Do you know how Bigg Boss contestant Sonu Patil's acting journey started?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X