'ಶಾಂಭವಿ' ಧಾರಾವಾಹಿಯ ನಟಿ ಧನುಷ್; ನಟನಾಗುವ ಕನಸು ಈಡೇರಿಸಿಕೊಂಡಿದ್ದೇಗೆ ಗೊತ್ತೇ?

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಶಾಂಭವಿ'ಯೂ ಒಂದು. ಸೂಪರ್ ನ್ಯಾಚುರಲ್ ಧಾರಾವಾಹಿ ಶಾಂಭವಿಯೂ ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆಯುತ್ತಿದೆ. ಸಂತೋಷದ ಸಂಗತಿಯೆಂದರೆ ಈ ಧಾರಾವಾಹಿಯು ಎರಡು ಭಾಷೆಗಳಿಗೆ ರಿಮೇಕ್ ಕೂಡಾ ಆಗಿದೆ.

ಹೌದು, 'ಶಾಂಭವಿ' ಧಾರಾವಾಹಿಯು ;ಭೈರವಿ' ಎನ್ನುವ ಹೆಸರಿನಲ್ಲಿ ತೆಲುಗು ಭಾಷೆಯಲ್ಲೂ ಕೂಡಾ ಪ್ರಸಾರವಾಗುತ್ತಿದೆ. ಮಾತ್ರವಲ್ಲ ಸನ್ ಮರಾಠಿ ಚಾನೆಲ್ ನಲ್ಲಿ 'ಆದಿಶಕ್ತಿ' ಎನ್ನುವ ಹೆಸರಿನಲ್ಲಿ ಪ್ರಸಾರ ಕಾಣುತ್ತಿದೆ.

Do you know how Dhanush fulfilled his dream of becoming an actor

ಅಷ್ಟೇ ಅಲ್ಲದೇ ಹಿಂದಿ ಮತ್ತು ಬಂಗಾಲ ಭಾಷೆಗೆ ಡಬ್ ಕೂಡಾ ಆಗಿದೆ. 'ಮಹಾಶಕ್ತಿ ಶಾಂಭವಿ' ಎನ್ನುವ ಹೆಸರಿನಲ್ಲಿ ಹಿಂದಿಯಲ್ಲಿ ಪ್ರಸಾರ ಕಂಡರೆ, 'ಜೊಯೋಂಗೋದೇಹಿ' ಎನ್ನುವ ಹೆದರಿನಲ್ಕಿ ಸನ್ ಬಂಗ್ಲಾ ವಾಹಿನಿಯಲ್ಲಿ ಈ ಧಾರಾವಾಹಿಯು ಪ್ರಸಾರಗೊಳ್ಳುತ್ತಿದೆ.

'ಶಾಂಭವಿ' ಧಾರಾವಾಹಿಯಲ್ಲಿ ನಾಯಕ ಅಶೋಕ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಧನುಷ್. ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಧನುಷ್ ಅವರು ಈ ಹಿಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಯನತಾರಾ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಹೌದು, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಯನತಾರಾ' ಧಾರಾವಾಹಿಯಲ್ಲಿ ನಾಯಕ ರಾಹುಲ್ ಆಗಿ ನಟಿಸುವ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡಿರುವ ಧನುಷ್ ಅವರು ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ್ದಾರೆ.

ಸದ್ಯ ಅಶೋಕ್ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಧನುಷ್ ಅವರಿಗೆ ಮೊದಲಿನಿಂದಲೂ ಇದ್ದುದು ಒಂದೇ ಬಯಕೆ. ಒಂದೇ ಕನಸು. ಅದು ನಟನಾಗಬೇಕು, ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬುದೊಂದೇ ಧನುಷ್ ಅವರಿಗೆ ಇದ್ದ ಬಯಕೆ. 'ನಯನತಾರಾ' ಧಾರಾವಾಹಿಯ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡಿರುವ ಧನುಷ್ ಅವರು ಬಾಲ್ಯದ ಕನಸನ್ನು ನನಸು ಮಾಡಿಕೊಂಡಿರುವ ಖುಷಿಯಲ್ಲಿದ್ದಾರೆ.

Do you know how Dhanush fulfilled his dream of becoming an actor

ಹೌದು, ನಟನಾಗಬೇಕು ಎಂಬ ಒಂದೇ ಒಂದು ಕನಸು ಹೊಂದಿದ್ದ ಧನುಷ್ ಗೌಡ ಅದೇ ಕಾರಣದಿಂದ ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಗಮನ ಕೊಟ್ಟಿರಲಿಲ್ಲ. ಮತ್ತೆ ಅದೊಂದೇ ಕನಸು ಅವರಿಗಿದ್ದ ಕಾರಣ ಅದರ ಬಗ್ಗೆಯೇ ಅವರು ಆಲೋಚಿಸುತ್ತಿದ್ದರು‌. ಹೌದು, ನಟನಾಗಬೇಕು ಎಂಬುದು ಅವರ ದೃಡನಿರ್ಧಾರವಾದ ಕಾರಣ ನಟನೆಯ ರೀತಿ ನೀತಿಗಳನ್ನು ಅರಿಯುವ ನಿರ್ಧಾರ ಮಾಡಿದರು ಧನುಷ್.

ಪರಿಪೂರ್ಣ ನಟನಾಗಲು ತರಬೇತಿ ಮುಖ್ಯ. ಸೂಕ್ತ ತರಬೇತಿ ಪಡೆದರಷ್ಟೇ ನಟನೆಯಲ್ಲಿ ಪಕ್ವತೆಯನ್ನು ಪಡೆಯಲು ಸಾಧ್ಯ ಎಂದು ಅರಿತ ಧನುಷ್ ಅಭಿನಯ ತರಬೇತಿ ಶಾಲೆಗೆ ಸೇರಿ ನಟನೆಯ ಆಗು ಹೋಗುಗಳ ಬಗ್ಗೆ ಹಂತಹಂತವಾಗಿ ತಿಳಿದುಕೊಂಡರು. ಜೊತೆಗೆ ಮೂಕಾಭಿನಯ, ಸಂಭಾಷಣೆಯ ಬಗ್ಗೆ ಅರಿತ ಧನುಷ್ ಗೌಡ ಅವರು ಕ್ಯಾಮೆರಾ ಎದುರಿಸುವುದು ಹೇಗೆ ಎಂಬುದನ್ನು ತಿಳಿದುಕೊಂಡರು.

ನಟನಾಗಬೇಕು ಎನ್ನುವ ಕನಸಿನಿಂದ ತರಬೇತಿಯನ್ನು ಮುಗಿಸಿಕೊಂಡ ಧನುಷ್ ಅವರ ಮುಂದಿನ ದಿನಗಳು ಹೂವಿನ ಹಾಸಿಗೆಯಾಗಿರಲಿಲ್ಲ. ತರಬೇತಿಯ ಬಳಿಕ ಆಡಿಶನ್ ಗಳನ್ನು ಅಟೆಂಡ್ ಮಾಡಿದ ಧನುಷ್ ಸರಿಸುಮಾರು ನೂರಕ್ಕೂ ಹೆಚ್ಚಿನ ಆಡಿಶನ್ ಗಳಲ್ಲಿ ಭಾಗವಹಿಸಿದ್ದರು. ಆದರೆ ಮೊದಮೊದಲು ಯಾವುದಕ್ಕೂ ಅವರು ಆಯ್ಕೆಯಾಗದಿದ್ದರೂ, ಪ್ರಯತ್ನ ಬಿಡಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದರು.

'ಜೀವನಚೈತ್ರ' ಧಾರಾವಾಹಿಯಲ್ಲ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟರು ಧನುಷ್. ಹೌದು, ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನೆಗೆ ಕಾಲಿಟ್ಟ ಇವರು ನಟನೆಯ ಕುರಿತ ವಿಚಾರಗಳನ್ನು ಕಲಿತುಕೊಂಡರು. ಮುಂದೆ 'ನಯನತಾರಾ' ಧಾರಾವಾಹಿಯ ರಾಹುಲ್ ಆಗಿ ನಟಿಸಿದ ಧನುಷ್ ಆ ಪಾತ್ರದ ಮೂಲಕವೂ ವೀಕ್ಷಕರ ಮನ ಸೆಳೆದರು.

ಇದೀಗ 'ಶಾಂಭವಿ' ಧಾರಾವಾಹಿಯಲ್ಲಿ‌ ಅಶೋಕ್ ಆಗಿ ಅಭಿನಯಿಸುತ್ತಿರುವ ಧನುಷ್ ಅವರಿಗೆ ಸಿನಿಮಾದಲ್ಲಿಯೂ ನಟಿಸುವ ಬಯಕೆಯಿದೆ. ಹೌದು, ಅವಕಾಶ ಸಿಕ್ಕರೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುವ ಮಹಾದಾಸೆ ಧನುಷ್ ಅವರದ್ದು.

More from Filmibeat

English summary
Do you know how Dhanush fulfilled his dream of becoming an actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X