ಕಿರುತೆರೆಯಲ್ಲಿ ಗೌರಿಯ ನಟನಾ ಜರ್ನಿ ಶುರುವಾಗಿದ್ದು ಹೇಗೆ ಗೊತ್ತಾ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಶ್ರೀಗೌರಿ' ಕೂಡಾ ಒಂದು. 'ಶ್ರೀಗೌರಿ' ಧಾರಾವಾಹಿಯಲ್ಲಿ ನಾಯಕಿ ಗೌರಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಅಮೂಲ್ಯ. ತಮ್ಮ ನಟನೆಯ ಮೂಲಕ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಹುಡುಗಿ ಅಮೂಲ್ಯ ಕಿರುತೆರೆ ಪ್ರೇಕ್ಷಕರ ಪಾಲಿಗೆ ಪ್ರೀತಿಯ ಕಮಲಿ ಹೌದು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಕಮಲಿ'ಯೂ ಒಂದು. ಪಕ್ಕಾ ಹಳ್ಳಿ ಹುಡುಗಿ ಕಮಲಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಅಮೂಲ್ಯ ಗೌಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಆಕಸ್ಮಿಕವಾಗಿ ಎಂದು ಹೇಳಿದರೆ ತಪ್ಪಾಗಲಾರದು. ನಟಿಯಾಗಬೇಕು, ಬಣ್ಣದ ಜಗತ್ತಿನಲ್ಲಿ ಕಾಣಿಸಿಕೊಳ್ಳಬೇಕು ಎಂಬ ಯಾವೊಂದು ಬಯಕೆಗಳನ್ನು ಹೊಂದಿರದ ಈಕೆ ‌ನಟಿಯಾಗಲು ಆಚಾನಕ್ ಆಗಿ ದೊರಕಿರುವಂತಹ ಅವಕಾಶ.

Do you know how Gauri serial actress Amulya Gowda acting journey started

ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಅಮೂಲ್ಯ ಅವರ ಬದುಕನ್ನು ಬದಲಾಯಿಸಿದ್ದು ರಿಯಾಲಿಟಿ ಶೋ ಎಂದರೆ ಸುಳ್ಳಲ್ಲ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಾರಿಗುಂಟು ಯಾರಿಗಿಲ್ಲ' ಎನ್ನುವ ರಿಯಾಲಿಟಿ ಶೋವಿನಲ್ಲಿ ತಮ್ಮ ಸಂಬಂಧಿಕರೊಡನೆ ಹೋಗಿದ್ದರು. ಅದು ಅವರ ಬದುಕಿನ ಟರ್ನಿಂಗ್ ಪಾಯಿಂಟ್ ಎನ್ನಬಹುದು. ಅಲ್ಲಿ ಆಕೆಯೊಂದಿಗೆ ಮಾತನಾಡಿದವರೊಬ್ಬರು ನಟನೆಯ ಬಗ್ಗೆ ಮಾಹಿತಿ ನೀಡಿದ್ದರು.

ಆರಂಭದಲ್ಲಿ ಬೇಕಾ ಬೇಡವೋ ಎಂದೆನಿಸಿದರೂ ಅದಾಗಿಯೇ ಬಂದ ಅವಕಾಶವಾದ ಕಾರಣ ತಿರಸ್ಕರಿಸದ ಅಮೂಲ್ಯ ಒಪ್ಪಿಕೊಂಡರು. 'ಅನುರಾಗ ಸಂಗಮ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದೂ ಆಯಿತು. ಮೊದಲ ಧಾರಾವಾಹಿಯಲ್ಲಿ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಶ್ರೀನಾಥ್ ಅವರ ಮಗಳ ಪಾತ್ರದಲ್ಲಿ ನಟಿಸಿದ ಈಕೆ ನಂತರ ಹಿಂತಿರುಗಿ ನೋಡಿದ್ದಿಲ್ಲ.

ಮುಂದೆ ಸ್ಟಾರ್ ಸುವರ್ಣ ವಾಹಿನಿಯ 'ಸ್ವಾತಿಮುತ್ತು', ಜೀ ಕನ್ನಡ ವಾಹಿನಿಯ 'ಪುನರ್ ವಿವಾಹ' ಧಾರಾವಾಹಿಯಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಮೂಲ್ಯ ನಂತರ ಬದಲಾದುದು ನಾಯಕಿಯಾಗಿ. ಉದಯ ವಾಹಿನಿಯ 'ಅರಮನೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಅಮೂಲ್ಯರಿಗೆ ಜನಪ್ರಿಯತೆ ನೀಡಿದ್ದು, ಜನ ಗುರುತಿಸುವಂತೆ ಮಾಡಿದ್ದು ಕಮಲಿ ಪಾತ್ರ.

Do you know how Gauri serial actress Amulya Gowda acting journey started

ಕಮಲಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಅಮೂಲ್ಯ ಮುಂದೆ ಪರಭಾಷೆಯ ಕಿರುತೆರೆಗೆ ಕಾಲಿಟ್ಟಿದ್ದು ಅಲ್ಲೂ ನಟನಾ ಛಾಪನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ. 'ಕಮಲಿ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ಈಕೆ ನಂತರ ಕಾಣಿಸಿದ್ದು ಬಿಗ್ ಬಾಸ್ ನಲ್ಲಿ.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟ ಈಕೆ ಬರೋಬ್ಬರಿ 91 ದಿನಗಳ ಕಾಲ ಆ ಮನೆಯಲ್ಲಿ ಇದ್ದುದು ಮಾತ್ರವಲ್ಲದೇ ತಮ್ಮ ನಡೆ, ನುಡಿ, ಆಟದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದ್ದರು.'ಶ್ರೀಗೌರಿ' ಧಾರಾವಾಹಿಯ ಗೌರಿಯಾಗಿ ಕನ್ನಡ ಕಿರುತೆರೆಯತ್ತ ಮತ್ತೆ ಮರಳಿದ ಈಕೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಗೌರಿಯ ಪಾತ್ರವನ್ನು ಇಷ್ಟಪಟ್ಟಿದ್ದಾರೆ.

More from Filmibeat

English summary
Do you know how Gauri serial actress Amulya Gowda acting journey started?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X