ನಮ್ರತಾ ಗೌಡ ಹಾಕಿರೋ ಈ ಸಿಂಪಲ್ ಸ್ಲಿಪ್ಪರ್‌ ಬೆಲೆ ಎಷ್ಟು ಗೊತ್ತಾ?

By ಎಸ್ ಸುಮಂತ್

ನಮ್ರತಾ ಗೌಡ ಫ್ಯಾಷನ್ ಐಕಾನ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾವ ಕಾರ್ಯಕ್ರಮಕ್ಕೆ ಯಾವ ರೀತಿಯ ಬಟ್ಟೆ ಹಾಕಬೇಕು, ಯಾವ ರೀತಿಯ ಮೇಕಪ್ ಮಾಡಿಕೊಳ್ಳಬೇಕು ಎಂಬುದೆಲ್ಲವೂ ಗೊತ್ತಿದೆ. ಮೇಕಪ್ ಇಲ್ಲದೆ ಹೊರಗೆ ಬರುವುದೇ ಇಲ್ಲ. ಅದರಲ್ಲೂ ಲಿಪ್ ಸ್ಟಿಕ್ ಇಲ್ಲದೇ ಮನೆಯಲ್ಲೂ ಅಡ್ಡಾಡುವುದಿಲ್ಲ. ಸುಮಾರು ಜನರಿಗೆ ನಮ್ರತಾ ಗೌಡ ಸ್ಟೈಲ್ ಫಾಲೋ ಮಾಡೋದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ನಮ್ರತಾ ಗೌಡರಂತೆ ಮೇಕಪ್, ಡ್ರೆಸ್ ಮಾಡಿಕೊಳ್ಳುವವರು ಸಾಕಷ್ಟು ಜನ ಇದ್ದಾರೆ.

ನಮ್ರತಾ ಗೌಡ ಸ್ಯಾರಿ ಪ್ರಿಯೆ. ಹೊರಗೆ ಎಲ್ಲಿಯೇ ಕಾಣಿಸಿಕೊಂಡರು ಹೆಚ್ಚು ಸೀರೆ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಒಂದೆರೆಡು ರೂಪಾಯಿ ಸೀರೆ ಅಲ್ಲ. ಹೆಚ್ಚು ಇರುವುದೇ ಮೈಸೂರು ಸಿಲ್ಕ್ ಸೀರೆಗಳು. ನಮ್ರತಾ ಬಳಿ ಇರುವ ಸೀರೆಗಳು ದುಬಾರಿ ಸೀರೆಗಳೇ ಆಗಿವೆ. ಒಮ್ಮೆ ಫಾಲೋವರ್ಸ್ ಒತ್ತಾಯದ ಮೇರೆಗೆ ನಮ್ರತಾ ಗೌಡ ಸೀರೆಗಳ ಕಲೆಕ್ಷನ್ಸ್ ವಿಡಿಯೋ ಮಾಡಿದ್ದರು. ಅದರಲ್ಲಿ ಹೆಚ್ಚು ಇದ್ದದ್ದು ರೇಷ್ಮೆ ಸೀರೆಗಳೇ ಆಗಿದ್ದವು.

Do you know how much these simple slippers worn by Namrata Gowda cost

ಹಾಗೇ ಒಮ್ಮೆ ತಮ್ಮಲ್ಲಿರುವ ಸ್ಲಿಪ್ಪರ್ ವಿಡಿಯೋಗಳನ್ನು ಮಾಡಿದ್ದರು ನಮ್ರತಾ. ತೀರಾ ಸಿಂಪಲ್ ಸ್ಲಿಪ್ಪರ್‌ಗೂ ಎರಡು ಸಾವಿರ, ಮೂರು ಸಾವಿರ ರೂಪಾಯಿ ಕೊಟ್ಟಿದ್ದರು. ಐದು ಸಾವಿರ, ಹತ್ತು ಸಾವಿರ ಬೆಲೆಯ ಸ್ಲಿಪ್ಪರ್‌ಗಳೇ ಜಾಸ್ತಿ ಇದ್ದದ್ದು. ಎಲ್ಲರಿಗೂ ಗೊತ್ತಿರುವಂತೆ ನಮ್ರತಾ ಗೌಡ ದುಬಾರಿ ಲೈಫ್ ಅನ್ನೇ ಲೀಡ್ ಮಾಡ್ತಾ ಇದಾರೆ. ಅದನ್ನು ಅವರು ಪ್ರದರ್ಶಿಸುತ್ತಾರೆ. ಹಾಕುವ ಬಟ್ಟೆ, ಸ್ಲಿಪ್ಪರ್, ಮೇಕಪ್ ಎಲ್ಲವೂ ದುಬಾರಿ.

ನಮ್ರತಾ ಗೌಡ ಈಗ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಸೋಷಿಯಲ್ ಮಿಡೀಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಅವರದ್ದೇ ಆದ ಯೂಟ್ಯೂಬ್ ಚಾನೆಲ್ ಕೂಡ ಇದೆ. ಹಬ್ಬ, ಪೂಜೆ ಎಂದರೆ ಬಹಳ ಭಕ್ತಿ. ತಾನೇ ಮುಂದೆ ನಿಂತು ಹಬ್ಬವನ್ನ ಆಚರಣೆ ಮಾಡುತ್ತಾರೆ. ಈ ಯುಗಾದಿ ಹಬ್ಬಕ್ಕು ಅಷ್ಟೇ ನಮ್ರತಾ ಗೌಡ ಅವರೇ ತೋರಣವನ್ನು ಕಟ್ಟಿದ್ದಾರೆ. ಅದರ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ರತಾ ಮನೆಯಲ್ಲಿ ಪೂಜೆಯನ್ನು ಹೆಚ್ಚಾಗಿ ಮಾಡಿಸುತ್ತಾರೆ. ಹೀಗಾಗಿ ಆ ಪೂಜೆಯಲ್ಲಿ ನಮ್ರತಾ ಗೌಡ ಲುಕ್ ನೋಡುವುದಕ್ಕೇನೆ ಬಹಳ ಇಷ್ಟವಾಗುತ್ತದೆ. ಅವರ ಫಾಲೋವರ್ಸ್ ಅದನ್ನ ತೀರಾ ಸೂಕ್ಷ್ಮವಾಗಿ ಗಮನಿಸುತ್ತಾರೆ.

ಪ್ರವಾಸಕ್ಕೆಂದು ಹೋದಾಗ, ಫ್ರೆಂಡ್ ಜೊತೆ ಹೋದಾಗ ಅಷ್ಟೇ ಯಾಕೆ ಮನೆಯಲ್ಲಿರುವಾಗಲೂ ನಮ್ರತಾ ಹಾಕುವ ಬಟ್ಟೆ ಮೇಲೆ ಎಲ್ಲೆ ಕಣ್ಣು ಇರುತ್ತದೆ. ಅಷ್ಟು ಚೆಂದವಾಗಿ ತನ್ನನ್ನು ತಾನೂ ಮೇಕವರ್ ಮಾಡಿಕೊಳ್ಳುತ್ತಾರೆ‌. ಇದೀಗ ವಿಚಾರ ಏನಪ್ಪ ಅಂದ್ರೆ ಅವರು ವಿಡಿಯೋ ಒಂದರಲ್ಲಿ ರೆಡಿಯಾದ ಮೇಲೆ ತೋರಿಸಿದ ಸ್ಲಿಪ್ಪರ್ ವಿಚಾರ. ಅಷ್ಟು ಸಿಂಪಲ್ ಆಗಿರುವ ಸ್ಲಿಪ್ಪರ್ ಬೆಲೆ ಬಗ್ಗೆ ಕುತೂಹಲ ಅಷ್ಟೇ.

ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಂಡಿರುವ ನಮ್ರತಾ, ಆ ವಿಡಿಯೋದಲ್ಲಿ ತಾನೇ ಮೇಕಪ್ ಮಾಡಿಕೊಂಡು, ಡ್ರೆಸ್ ಎಲ್ಲಾ ಆದ ಮೇಲೆ ಸ್ಲಿಪ್ಪರ್ ಕೂಡ ತೋರಿಸುತ್ತಾರೆ. ಅದುವೇ ಜ್ಹರಾ ಬ್ರಾಂಡ್. ಫ್ಲಾಟ್ ಅಂಡ್ ಸಿಂಪಲ್ ಸ್ಲಿಪ್ಪರ್. ಅದನ್ನ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಅಬ್ಬಬ್ಬಾ ಇಷ್ಟು ಸಿಂಪಲ್ ಸ್ಲಿಪ್ಪರ್‌ಗೆ 2,500 ರೂಪಾಯಿ ಇದೆ. ಇದೇ ಡಿಸೈನ್ ಸ್ಲಿಪ್ಪರ್‌ಗಳು 100-200 ರೂಪಾಯಿಗೂ ಸಿಗುತ್ತೆ. ಅದು ಬೇರೆ ಮಾತು. ಆದರೆ ಬ್ರಾಂಡ್ ಅಂದ್ರೆ ಬ್ರಾಂಡ್ ಅಲ್ವೇ.

More from Filmibeat

English summary
Here is the details about Big Boss fame Namratha gowda's slipper price;
Read more about: bigg boss kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X