ಕರಾವಳಿ ಕುವರಿ ಶಿಲ್ಪಾ ಕಾಮತ್ 'ನೂರು ಜನ್ಮಕೂ' ಧಾರಾವಾಹಿ ಮೈತ್ರಿಯಾಗಿ ಬದಲಾಗಿದ್ದು ಹೇಗೆ? ಈಕೆಯ ಹಿನ್ನೆಲೆಯೇನು?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಗಳ ಪೈಕಿ 'ನೂರು ಜನ್ಮಕೂ' ಕೂಡಾ ಒಂದು. ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ 'ನೂರು ಜನ್ಮಕೂ' ಧಾರಾವಾಹಿಯಲ್ಲಿ ನಾಯಕಿ ಮೈತ್ರಿಯಾಗಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಶಿಲ್ಪಾ ಕಾಮತ್.

'ನೂರು ಜನ್ಮಕೂ' ಧಾರಾವಾಹಿಯಲ್ಲಿ ಕಾಮಿನಿ ಹಾಗೂ ಮೈತ್ರಿ ಎನ್ನುವ ಎರಡು ನಾಯಕಿಯರಿದ್ದು ಮೈತ್ರಿಯಾಗಿ ಅಭಿನಯಿಸುತ್ತಿರುವ ಬೆಡಗಿ ಹೆಸರು ಶಿಲ್ಪಾ ಕಾಮತ್. ಅಂದ ಹಾಗೇ ಕರಾವಳಿ ಮೂಲದ ಈ ಹುಡುಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಕಳೆದ ವರ್ಷ ಅಂದರೆ 2023 ರಲ್ಲಿ 'ಮಿಸ್ ಮಂಗಳೂರು' ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಲ್ಪಾ ಕಾಮತ್ ರನ್ನರ್ ಅಪ್ ಆಗಿದ್ದರು.

Do you know how Nooru Janmaku serial actress Shilpa Kamat turned into Maitri

ಮೂಲತಃ ಉಡುಪಿಯವರಾದ ಶಿಲ್ಪಾ ಕಾಮತ್ ಬೆಳೆದಿದ್ದೆಲ್ಲಾ ಕಡಲನಗರಿ ಮಂಗಳೂರಿನಲ್ಲಿ. ಇದೀಗ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಾರಣ ಮಹಾನಗರಿ ಬೆಂಗಳೂರಿನಲ್ಲಿ ನೆಲೆಸಿರುವ ಶಿಲ್ಪಾ ಕಾಮತ್ ಎಂಕಾಂ ಪದವೀಧರೆ ಹೌದು. ಎಂಕಾಂ ಪದವಿಯ ಬಳಿಕ ಒಂದಷ್ಟು ಸಮಯಗಳ ಕಾಲ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದ ಶಿಲ್ಪಾ ಕಾಮತ್ ತದ ನಂತರ ಒಂದಷ್ಟು ಸಮಯಗಳ ಕಾಲ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದರು.

ಕಿರುಚಿತ್ರದ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಶಿಲ್ಪಾ ಕಾಮತ್ ನಂತರ ನಟಿಸಿದ್ದು ಸಿನಿಮಾದಲ್ಲಿ. 'ರಂಗಸ್ಥಳ' ಸಿನಿಮಾದಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಮೋಡಿ ಮಾಡಿದ ಶಿಲ್ಪಾ ಕಾಮತ್ ನಂತರ ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ. 'ನೂರು ಜನ್ಮಕೂ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಶಿಲ್ಪಾ ಕಾಮತ್ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Do you know how Nooru Janmaku serial actress Shilpa Kamat turned into Maitri

ಧಾರಾವಾಹಿಯ ಪ್ರೋಮೋ ರಿಲೀಸ್ ಆದಾಗ "ಎಲ್ಲರಿಗೂ ನಮಸ್ಕಾರ. ನಾನು ಮೊದಲ ಬಾರಿಗೆ ನಿಮ್ಮೆಲ್ಲರ ಮನೆ ಮಗಳಾಗಿ ಕಲರ್ಸ್ ಕನ್ನಡ ವಾಹಿನಿಯ ಮೂಲಕ ಈ ಧಾರಾವಾಹಿಯಲ್ಲಿ ಪರಿಚಯವಾಗಲಿದ್ದೇನೆ. ಮೊದಲು ಈ ಅವಕಾಶಕ್ಕಾಗಿ ಕಲರ್ಸ್ ಕನ್ನಡ ವಾಹಿನಿ ಮತ್ತು ಸಂಪೂರ್ಣ ತಂಡಕ್ಕೆ ಧನ್ಯವಾದಗಳು" ಎಂದು ಶಿಲ್ಪಾ ಕಾಮತ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇದರ ಜೊತೆಗೆ "ಈ ತಂಡದ ಭಾಗವಾಗಿರುವುದು ನನಗೆ ತುಂಬಾ ಖುಷಿ ತಂದಿದೆ. ಈ ತಂಡದ ಬೆಂಬಲ ಮತ್ತು ಸಹನೆಗೆ ಧನ್ಯವಾದಗಳು. ಈ ಧಾರಾವಾಹಿಯ ಕಥೆ ತುಂಬಾ ಕುತೂಹಲಕಾರಿಯಾಗಿದೆ. ನಿಮಗೆ ಇಷ್ಟವಾಗುವುದು ಖಚಿತ" ಎಂದು ಧಾರಾವಾಹಿ ಆರಂಭವಾಗುವ ಮೊದಲೇ ಧಾರಾವಾಹಿಯ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಶಿಲ್ಪಾ ಕಾಮತ್.

ಅಂದ ಹಾಗೇ ಮುದ್ದು ಮುಖದ ಬೆಡಗಿ ಶಿಲ್ಪಾ ಕಾಮತ್ ಇಂದು ನಿಮ್ಮ ಪ್ರೀತಿಯ ಮೈತ್ರಿಯಾಗಿ ಬದಲಾಗಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಸೋಶಿಯಲ್ ಮೀಡಿಯಾ. ಹೌದು, ಇನ್‌ಸ್ಟಾಗ್ರಾಂನಲ್ಲಿ ಶಿಲ್ಪಾ ಪೋಸ್ಟ್ ಮಾಡಿರುವಂತಹ ಫೋಟೋಗಳಿಂದಲೇ ಇಂದು ಆಕೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶಿಲ್ಪಾ ಫೋಟೋ ನೋಡಿದ ಪ್ರೊಡಕ್ಷನ್ ಮ್ಯಾನೇಜರ್ ಶಿಲ್ಪಾ ಅವರಿಗೆ ಮೆಸೇಜ್ ಮಾಡಿದ್ದಾರೆ. ನಂತರ ಆಡಿಶನ್ ನೀಡಿ ಪಾಸ್ ಆದ ಶಿಲ್ಪಾ ಮೈತ್ರಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ‌.

More from Filmibeat

English summary
Do you know how TV actress Shilpa Kamat's acting journey started?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X