ಫಿಜಿಯೋಥೆರಪಿಸ್ಟ್ ಆಗಿದ್ದ ನಟಿ ಆರತಿ; ಕಿರುತೆರೆಗೆ ಕಾಲಿಟ್ಟಿದ್ದು ಹೇಗೆ ಗೊತ್ತಾ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಗಳ ಪೈಕಿ 'ಬ್ರಹ್ಮಗಂಟು' ಕೂಡಾ ಒಂದು. 'ಬ್ರಹ್ಮಗಂಟು'ವಿನಲ್ಲಿ ಪೊಲೀಸ್ ಅಧಿಕಾರಿಯ ಮಗಳು ಸಂಜನಾ ಆಗಿ ನಟಿಸುತ್ತಿರುವ ಬೆಡಗಿಯ ಹೆಸರು ಆರತಿ ಪಡುಬಿದ್ರಿ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಬ್ರಹ್ಮಗಂಟು'ವಿನಲ್ಲಿ ನಾಯಕಿ ಅಮೂಲ್ಯ ಅಕ್ಕ ಆರತಿ ಆಗಿ ಈಕೆ ಕಾಣಿಸಿಕೊಂಡಿದ್ದರು.

ಹೌದು, 'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿಯಾಗಿ ಅಭಿನಯಿಸುತ್ತಿದ್ದ ಗಗನ ಅವರು ಮುಂದೆ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಾಗ ಆ ಜಾಗಕ್ಕೆ ಆಯ್ಕೆಯಾದವರು ಆರತಿ ಪಡುಬಿದ್ರಿ. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಆರತಿ ಪಡುಬಿದ್ರಿ ಅವರಿಗೆ 'ಗಟ್ಟಿಮೇಳ' ಎರಡನೇ ಧಾರಾವಾಹಿಯೂ ಹೌದು.

Do you know how physiotherapist Aarthi became an actress

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹೂಮಳೆ' ಧಾರಾವಾಹಿಯಲ್ಲಿ ನಾಯಕನ ಅಕ್ಕ ಅಂಬಿಕಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ಆರತಿ. ಮೊದಲ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಈಕೆ ಕಾಣಿಸಿಕೊಂಡಿದ್ದರೂ ಅಭಿನಯದ ಮೂಲಕ ಗುರುತಿಸಿಕೊಂಡಿದ್ದ ಬೆಡಗಿ.

ಸದ್ಯ ನಟಿಯಾಗಿ ಬಣ್ಣದ ಲೋಕದಲ್ಲಿ ಕಮಾಲ್ ಮಾಡುತ್ತಿರುವ ಆರತಿ ಪಡುಬಿದ್ರಿ ಫಿಜಿಯೋಥೆರಪಿಸ್ಟ್ ಕೂಡ ಹೌದು. ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ಈಕೆಗೆ ಮಾಡೆಲಿಂಗ್‌ನತ್ತ ವಿಶೇಷ ಒಲವಿತ್ತು. ಅದೇ ಕಾರಣದಿಂದ ಕೆಲಸದಿಂದ ಬ್ರೇಕ್ ಸಿಕ್ಕಾಗಲೆಲ್ಲಾ ಮಾಡೆಲಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ನಂತರ ನಟನೆಯತ್ತ ಈಕೆಯ ಮನಸ್ಸು ಹೊರಳಿತು.

ವೃತ್ತಿ, ಪ್ರವೃತ್ತಿ ಎರಡನ್ನೂ ಸಂಭಾಳಿಸಿಕೊಂಡು ಸಾಗುವ ಆರತಿ ಅವರು ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಂಡಿದ್ದಾರೆ. ಡ್ಯಾನ್ಸಿಂಗ್ ಶೋವೊಂದರ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಆರತಿ ಪಡುಬಿದ್ರಿ ಆ ಶೋವಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದರು. ಅಂಬಿಕಾ ಆಗಿ ಕಿರುತೆರೆಗೆ ಕಾಲಿಟ್ಡು ಮುಂದೆ ಆರತಿಯಾಗಿ ಮೋಡಿ ಮಾಡಿದ ಈಕೆ ಇದೀಗ ಸಂಜನಾ ಆಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

Do you know how physiotherapist Aarthi became an actress

ಮಾಡೆಲಿಂಗ್‌ನ ಆಗು ಹೋಗುಗಳನ್ನು ತಿಳಿದಿರುವ ಆರತಿ ಅವರು ನಟನೆಯೂ ಕೂಡಾ ತುಂಬಾ ಸುಲಭ ಎಂದು ಆರಂಭದ ದಿನಗಳಲ್ಲಿ ತಿಳಿದಿದ್ದರು. ಆದರೆ ನಟನೆಗೆ ಕಾಲಿಟ್ಟ ಬಳಿಕವಷ್ಟೇ ಅದರ ಕಷ್ಟಗಳೇನು ಎಂಬುದು ಆಕೆಗೆ ಅರಿವಾದದ್ದು. ಮುಂದೆ ಹಂತಹಂತವಾಗಿ ಎಲ್ಲವನ್ನೂ ಕಲಿತುಕೊಂಡ ಆಕೆ ಇಂದು ನಟನೆಯಲ್ಲಿ ಪಕ್ವತೆಯನ್ನು ಪಡೆದುಕೊಂಡಿದ್ದಾರೆ.

ಇನ್ನು ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಈಕೆ ಸಕತ್ ಆ್ಯಕ್ಟೀವ್ ಆಗಿರುವ ಆರತಿ ಸಮಯ ಸಿಕ್ಕಾಗಲೆಲ್ಲಾ ಫೋಟೋಶೂಟ್ ಗಳನ್ನು ಮಾಡುತ್ತಿರುತ್ತಾರೆ. ಬಿಡುವಾದಾಗಲೆಲ್ಲಾ ಪೋಸ್ಟ್‌ಗಳನ್ನು ಹಾಕುವ ಮೂಲಕ ಫಾಲೋವರ್‌ಗಳನ್ನು ಎಂಗೇಜ್ ಆಗಿರುವಂತೆ ನೋಡಿಕೊಳ್ಳುವ ಈಕೆ 41.9k ಫಾಲೋವರ್ಸ್ ಹೊಂದಿದ್ದಾರೆ.

More from Filmibeat

English summary
Do you know how physiotherapist Aarthi became an actress?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X