Actress Akshara: ಪುಟ್ಟಕ್ಕನ ಮಗಳು ಸಹನಾ ಉರ್ಫ್ ಅಕ್ಷರ ನಟನಾ ಜರ್ನಿ ಶುರುವಾಗಿದ್ದು ಹೇಗೆ ಗೊತ್ತಾ?

By ಅನಿತಾ ಬನಾರಿ

ಆರೂರು ಜಗದೀಶ್ ನಿರ್ದೇಶನದಡಿಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪುಟ್ಟಕ್ಕನ ಹಿರಿ ಮಗಳು ಸ್ನೇಹ ಆಗಿ ಅಭಿನಯಿಸುತ್ತಿರುವ ಅಕ್ಷರ ಪೋಷಕ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಚೆಲುವೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಾಯಕ ತಂಗಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಅಕ್ಷರ ನಂತರ ಬದಲಾಗಿದ್ದು ನಾಯಕಿಯಾಗಿ.

Do you know how Puttakkana Makkalu Serial fame Akshara acting journey started?

'ರಕ್ಷಾಬಂಧನ' ಮೂಲಕ ಕಿರುತೆರೆಗೆ ಪಾದಾರ್ಪಣೆ

ರಮೇಶ್ ಇಂದಿರಾ ನಿರ್ದೇಶನದಡಿಯಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಮ್ನೋರು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ಅಕ್ಷರಗೆ ಕಾಲೇಜು ದಿನಗಳಿಂದಲೂ ನಟಿಯಾಗಬೇಕು ಎಂಬ ಆಸೆಯಿತ್ತಂತೆ. ಅದೇ ಕಾರಣದಿಂದ 'ರಕ್ಷಾಬಂಧನ' ಧಾರಾವಾಹಿಯ ಆಡಿಶನ್‌ಗೆ ಹೋದ ಆಕೆ ಆಯ್ಕೆಯೂ ಆದರಂತೆ.

'ಅಮ್ನೋರು' ಧಾರಾವಾಹಿಯಲ್ಲಿ ನಾಯಕಿ

'ರಕ್ಷಾಬಂಧನ' ಧಾರಾವಾಹಿಯಲ್ಲಿನ ಅಕ್ಷರ ಅವರ ನಟನೆ ನೋಡಿದ ರಮೇಶ್ ಇಂದಿರಾ ಅವರು 'ಅಮ್ನೋರು' ಧಾರಾವಾಹಿಯಲ್ಲಿ ನಟಿಸುವ ಸುವರ್ಣಾವಕಾಶ ನೀಡಿದರು. ಎರಡನೇ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಅವಕಾಶ ದೊರೆತಾಗ ಸಹಜವಾಗಿ ಅಕ್ಷರ ಅವರಿಗೆ ಸಂತಸವಾಯಿತಂತೆ. ದೇವರನ್ನು ನಂಬುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡ ಅಕ್ಷರ ಸೀರಿಯಲ್ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು. ಮುಂದೆ ಕಾರಣಾಂತರಗಳಿಂದ ಆ ಧಾರಾವಾಹಿ ಅರ್ಧದಲ್ಲಿಯೇ ತನ್ನ ಪ್ರಸಾರ ನಿಲ್ಲಿಸಿತ್ತು.

Do you know how Puttakkana Makkalu Serial fame Akshara acting journey started?

ಪುಟ್ಟಕ್ಕನ ಮಗಳಾಗಿ ಮೋಡಿ

ಸದ್ಯ ಪುಟ್ಟಕ್ಕನ ಹಿರಿಮಗಳಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಅಕ್ಷರ ಸೀರಿಯಲ್ ನಲ್ಲಷ್ಟೇ ತುಂಬಾ ಟ್ರೆಡಿಶನಲ್. ಹಾಫ್ ಸಾರಿ, ಸೀರೆ ಉಡುತ್ತಾ ಹಳ್ಳಿ ಭಾಷೆ ಮಾತನಾಡುತ್ತಾ ಹಳ್ಳಿ ಹುಡುಗಿಯಾಗಿ ಮೋಡಿ ಮಾಡುತ್ತಿರುವ ಅಕ್ಷರ ನಿಜ ಜೀವನದಲ್ಲಿ ಪಕ್ಕಾ ಮಾಡರ್ನ್! ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅಕ್ಷರ ಆಗಾಗ ವಿಭಿನ್ನ ಶೈಲಿಯ ಫೋಟೋಶೂಟ್ ಗಳನ್ನು ಮಾಡಿಸಿಕೊಳ್ಳುತ್ತಿದ್ದು ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

More from Filmibeat

English summary
Do you know how Puttakkana Makkalu Serial fame Akshara acting journey started?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X