Virat Vatsal ; ಡ್ಯಾನ್ಸರ್ ಆಗಿದ್ದ ವಿರಾಟ್ ವತ್ಸಲ್ ನಟನಾಗಿದ್ದು ಹೇಗೆ ಗೊತ್ತಾ?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ರಾಧಿಕಾ" ಧಾರಾವಾಹಿ ಇದೀಗ ಕಿರುತೆರೆ ಪ್ರೇಕ್ಷಕರ ಫೇವರೆಟ್ ಧಾರಾವಾಹಿಗಳಲ್ಲೊಂದು. ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ರಾಧಿಕಾ ಧಾರಾವಾಹಿಯು ಇತ್ತೀಚೆಗಷ್ಟೇ ತನ್ನ ಪ್ರಸಾರವನ್ನು ನಿಲ್ಲಿಸಿತ್ತು. ಈ ಧಾರಾವಾಹಿಯಲ್ಲಿ ನಾಯಕ ಚಿರಂತ್ ಆಗಿ ನಟಿಸಿ ಸೈ ಎನಿಸಿಕೊಂಡಿದ್ದರು ನಟ ವಿರಾಟ್ ವತ್ಸಲ್.
ಮೂಲತಃ ದಾವಣಗೆರೆಯವರಾದ ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿ ಏಳೆಂಟು ವರ್ಷಗಳ ಕಾಲ ವೃತ್ತಿ ಜೀವನವನ್ನು ಕಳೆಯುತ್ತಿದ್ದರು. ಜೊತೆಗೆ ಒಂದು ಹೋಟೆಲ್ ಅನ್ನು ಕೂಡ ಇವರು ನಡೆಸುತ್ತಿದ್ದರು. ಕೋವಿಡ್ ಬಂದ ನಂತರ ವಿರಾಟ್ ಅವರಿಗೆ ಆರ್ಥಿಕ ಸಂಕಷ್ಟ ಶುರುವಾಯಿತು. ಡ್ಯಾನ್ಸ್ ಕೊರಿಯೋಗ್ರಾಫಿ ಶಾಲೆ ಕೂಡ ಹಿಂದೆ ಬಿತ್ತು. ಆಗ ಡ್ಯಾನ್ಸ್ ಇಂದ ಹೊರ ಬಂದು ಬೇರೆ ಏನಾದರೂ ಮಾಡಬೇಕೆಂಬ ಅನಿವಾರ್ಯತೆ ಬಂತು. ಅದಕ್ಕೆ ಸರಿಯಾಗಿ ಸಂಘರ್ಷ ಎಂಬ ಧಾರಾವಾಹಿ ಇವರ ಕೈ ಸೇರಿತು.

ಜೊತೆಗೆ ನನ್ನ ದೇವರು ಎಂಬ ಧಾರಾವಾಹಿಯಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದರು. ನಂತರ ರಾಧಿಕಾ ಧಾರಾವಾಹಿಯಲ್ಲಿ ಚಿರಂತ್ ಆಗಿ ನಟಿಸುವ ಅವಕಾಶವೂ ಇವರಿಗೆ ದೊರಕಿತು. ಒಂದಾದ ಮೇಲೆ ಒಂದರಂತೆ ಧಾರಾವಾಹಿಯಲ್ಲಿ ನಟಿಸಿರುವ ವಿರಾಟ್ ನಟನೆ ಕೂಡ ಡ್ಯಾನ್ಸ್ ನ ರೀತಿಯಲ್ಲಿ ಬಣ್ಣದ ಲೋಕದ ಇನ್ನೊಂದು ಮುಖ ಎಂದು ನಂಬಿದ್ದಾರೆ.
ವಿರಾಟ್ ವತ್ಸಲ್ ಅವರು ಚಿಕ್ಕವನಿದ್ದಾಗ ಬಹಳ ಒರಟು ಸ್ವಭಾವದವನಾಗಿದ್ದರು. ಹಾಗಾಗಿ ಅವರ ತಾಯಿ ಅವರನ್ನು ವಸತಿ ಶಾಲೆಗೆ ಸೇರಿಸಿದರು. ವಿರಾಟ್ ಅವರ ತಾಯಿ ಹಾಗೂ ಚಿಕ್ಕಮ್ಮ ಇಬ್ಬರೂ ರಂಗಭೂಮಿಯವರು. ಶಾಲೆ ಮುಗಿಯುತ್ತಿದ್ದಂತೆಯೇ ವಿರಾಟ್ ಅವರಿಗೆ ಡ್ಯಾನ್ಸ್ ನಲ್ಲಿ ಆಸಕ್ತಿ ಬಂದಿತ್ತು. ಹಾಗೆ ಡಾನ್ಸ್ ಕಲಿತ ಇವರು ತನ್ನ ಸೀನಿಯರ್ ಒಬ್ಬರು ಆರಂಭಿಸಿದ್ದ ಸ್ಟೆಪ್ ಎನ್ನುವ ಡ್ಯಾನ್ಸ್ ಕ್ಲಾಸ್ ಗೆ ಸೇರಿಕೊಂಡರು.
ಮುಂದೆ ಒಂದಷ್ಟು ಜನ ವಿದ್ಯಾರ್ಥಿಗಳು ಆ ಶಾಲೆಗೆ ಬಂದರು. ಅವರಿಗೆ ಡ್ಯಾನ್ಸ್ ಹೇಳಿಕೊಡುತ್ತಿರುವಂತೆ ವಿರಾಟ್ ಅವರು ಕೂಡಾ ಡಾನ್ಸ್ ಕಲಿತರು. ಅಲ್ಲಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಈ ಮೂಲಕ ಬಹಳಷ್ಟು ಖ್ಯಾತಿಗಳಿಸಿದ್ದರು. ಮುಂದೆ ನಿಧಾನವಾಗಿ ಡಾನ್ಸ್ ರಿಯಾಲಿಟಿ ಶೋಗೆ ಹೋದರು.
ಕಸ್ತೂರಿ ವಾಹಿನಿಯಲ್ಲಿ ನಡೆಯುತ್ತಿದ್ದ ರಿಯಾಲಿಟಿ ಶೋ ನಲ್ಲಿ ಕೊನೆವರೆಗೂ ಪೈಪೋಟಿ ನೀಡಿ ರನ್ನರ್ ಅಪ್ ಆಗಿ ಹೊರ ಬಂದರು. ಈ ರಿಯಾಲಿಟಿ ಶೋ ವಿರಾಟ್ ಅವರಿಗೆ ಬಹಳಷ್ಟು ಖ್ಯಾತಿ ನೀಡಿತು. ಮುಂದೆ ತನ್ನದೇ ಸ್ವಂತ ಡ್ಯಾನ್ಸ್ ಸ್ಕೂಲ್ ಆರಂಭಿಸಿದರು ಎಲ್ಲವೂ ಬಹಳ ಚೆನ್ನಾಗಿ ನಡೆಯುತ್ತಿದ್ದ ಕಾಲದಲ್ಲೇ ಕೋವಿಡ್ ಬಂದು ನಂತರ ಕ್ರಮೇಣ ನಟನೆಗೆ ಕಾಲಿಡುವಂತೆ ಆಯಿತು.
ಧಾರಾವಾಹಿಗಳಷ್ಟೇ ಅಲ್ಲದೆ ಸಿನಿಮಾದಲ್ಲಿಯೂ ನಟಿಸಬೇಕೆಂಬ ಆಸೆ ನಟ ವಿರಾಟ್ ಅವರಿಗಿದೆ. ಸಿನಿಮಾಗಳಲ್ಲಿ ನಟಿಸಬೇಕೆನ್ನುವುದೇ ನನ್ನ ಮುಖ್ಯ ಅಂತಿಮ ಗುರಿ. ಸಿನಿಮಾಗಳಲ್ಲಿ ನಟಿಸುವುದು ಅಷ್ಟು ಸುಲಭದ ಮಾತಲ್ಲ. ಒಳ್ಳೆಯ ಅವಕಾಶ ಒಳ್ಳೆಯ ಕಥೆ ಪ್ರೊಡಕ್ಷನ್ ಹೌಸ್ ಒಳ್ಳೆಯ ನಿರ್ದೇಶಕರು ಹೀಗೆ ಹಲವಾರು ಅಂಶಗಳನ್ನು ಕೂಡಿರುತ್ತದೆ. ಸರಿಯಾದ ಸಮಯ ಬಂದಾಗ ಈ ಎಲ್ಲವೂ ಒಂದಾಗಿ ನಮಗೆ ಅವಕಾಶಗಳು ಸಿಗುತ್ತವೆ. ಆ ಸರಿಯಾದ ಸಮಯಕ್ಕೆ ತಾಳ್ಮೆಯಿಂದ ಕಾಯಬೇಕು ಎನ್ನುತ್ತಾರೆ ವಿರಾಟ್ ವತ್ಸಲ್.
ನಟನೆ ಎಂಬುದು ಬಣ್ಣದ ಲೋಕವೇನೋ ಹೌದು, ಆದರೆ ಈ ಲೋಕದಲ್ಲಿ ನಾವು ಸರ್ವೈವ್ ಆಗುವುದಕ್ಕೆ ಬಹಳಷ್ಟು ತಾಳ್ಮೆ ಬೇಕು. ನಾನು ಹೀರೋ ಆಗಿ ಮಾತ್ರ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದರೆ ಈ ಈ ಪ್ರಪಂಚ ಅಷ್ಟು ಸುಲಭವಲ್ಲ. ಕೊಟ್ಟ ಯಾವ ಪಾತ್ರವನ್ನು ಚೆನ್ನಾಗಿ ನಿಭಾಯಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಹಾಗೂ ಮನಸ್ಸು ಇರಬೇಕು. ಆಗ ಮಾತ್ರ ಇಂತಹ ಬಣ್ಣದ ಪ್ರಪಂಚದಲ್ಲಿ ದೀರ್ಘಕಾಲ ಉಳಿದುಕೊಳ್ಳಲು ಸಾಧ್ಯ. ಇದೇ ವೃತ್ತಿ ಇದೆಲ್ಲದ ಬೇರೇನೂ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ನಾವು ಇರಬಾರದು. ಬದಲಾಗಿ, ಕಾಲಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆಗೆ ಹೊಂದಿಕೊಳ್ಳುವ ಮನಸ್ಥಿತಿ ನಮ್ಮದಾಗಿರಬೇಕು. ಹಲವು ಬಾರಿ ನಮ್ಮ ಪ್ರಯತ್ನಕ್ಕೆ ಪ್ರತಿಫಲ ಬಹಳ ನಿಧಾನವಾಗಿ ಸಿಗುತ್ತದೆ. ಆದರೆ ಅದು ಸಿಗುವವರೆಗೂ ಕಾಯುವ ತಾಳ್ಮೆ ನಮ್ಮಲ್ಲಿರಬೇಕು ಎನ್ನುತ್ತಾರೆ ನಟ ವಿರಾಟ್ ವತ್ಸಲ್.


Click it and Unblock the Notifications











