'ನಮ್ಮನೆ ಯುವರಾಣಿ' ನಟಿ ಕಾವ್ಯಾ ಮಹಾದೇವ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಎಷ್ಟು ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ನಮ್ಮನೆ ಯುವರಾಣಿ'ಯೂ ಒಂದು. 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ನಾಯಕಿ ಅಹಲ್ಯಾ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆಯ ಹೆಸರು ಕಾವ್ಯಾ ಮಹಾದೇವ್. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಕಾವ್ಯಾ ಮಹಾದೇವ್ 'ನಮ್ಮನೆ ಯುವರಾಣಿ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕೊಂಚ ಕಡಿಮೆಯೇ ಎಂದು ಹೇಳಬಹುದು.
ಹೌದು, 'ನಮ್ಮನೆ ಯುವರಾಣಿ' ಧಾರಾವಾಹಿಯ ನಂತರ ಬೇರೆ ಯಾವುದೇ ಧಾರಾವಾಹಿಯಲ್ಲೂ ನಟಿಸದ ಕಾವ್ಯಾ ಮಹಾದೇವ್ ರಿಯಾಲಿಟಿ ಶೋನಲ್ಲಿ ಮೋಡಿ ಮಾಡಿದ್ದರು. ಹೌದು, ತಮ್ಮ ಪತಿ ಕುಮಾರ್ ಅವರೊಂದಿಗೆ 'ರಾಜ ರಾಣಿ ಸೀಸನ್ 2'ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಕಾವ್ಯಾ ಮಹಾದೇವ್ ಆ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದ್ದರು.

ಇನ್ನು ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಕಾವ್ಯಾ ಮಹಾದೇವ್ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 81.1k ಫಾಲೋವರ್ಸ್ ಅನ್ನು ಹೊಂದಿರುವ ಈಕೆ ರಂಗಭೂಮಿಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಬೆಡಗಿ ಎಂದು ಹೇಳಿದರೆ ತಪ್ಪಾಗಲಾರದು.
ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗಲೇ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಾವ್ಯಾ ಮಹಾದೇವ್ ನಂತರ ಸೇರಿದ್ದು ಅಭಿನಯ ತರಂಗಕ್ಕೆ. ಹೌದು, ಎಂ.ಎಸ್.ಮೂರ್ತಿಯವರ ಅಭಿನಯ ತರಂಗ ಸೇರಿದ ಕಾವ್ಯಾ ಮಹಾದೇವ್ ನಟನೆಯ ರೀತಿ ನೀತಿಗಳನ್ನು ಹಂತ ಹಂತವಾಗಿ ಅರಿತುಕೊಂಡರು.
ಅಭಿನಯ ತರಂಗದಲ್ಲಿ ತರಬೇತಿ ಮುಗಿಸಿದ್ದೇ ತಡ, 'ಚರಣ ದಾಸಿ' ಧಾರಾವಾಹಿಗೆ ಆಡಿಶನ್ ನಡೆಯುತ್ತಿತ್ತು.
ಅಣ್ಣನ ಮಾತಿನಂತೆ ಚರಣದಾಸಿ ಧಾರಾವಾಹಿಯ ಆಡಿಶನ್‌ಗೆ ಹೋದ ಆಕೆಗೆ ಆಶ್ಚರ್ಯ ಕಾದಿತ್ತು. ಆಕೆ ಆಯ್ಕೆಯೂ ಆಗಿದ್ದರು. 'ಚರಣದಾಸಿ' ಧಾರಾವಾಹಿಯ ದೀಪಾಳಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಕಾವ್ಯಾ ಮಹಾದೇವ್ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ತೆರೆಯ ಮೇಲೆ ಮೋಡಿ ಮಾಡಿದರು.

ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಕಾಂಚನಾ ಆಗಿ ಅಭಿನಯಿಸಿದ ಕಾವ್ಯಾ ಮಹಾದೇವ್ ಮೊದಲ ಬಾರಿಗೆ ಖಳನಾಯಕಿಯಾಗಿ ಕಿರುತೆರೆಯಲ್ಲಿ ಅಬ್ಬರಿಸಿದರು. ಮಾತ್ರವಲ್ಲ ಆ ಪಾತ್ರ ಅವರಿಗೆ ಸಾಕಷ್ಟು ಖುಷಿಯನ್ನು ನೀಡಿತ್ತು. ಇನ್ನು ನೆಗೆಟಿವ್ ಪಾತ್ರದಲ್ಲಿ ನಟನೆಗೆ ಅವಕಾಶ ಜಾಸ್ತಿ ಎನ್ನುವ ಈಕೆ ಆ ಧಾರಾವಾಹಿಯಲ್ಲಿ ದೆವ್ವದ ಪಾತ್ರದ ಮೂಲಕವೂ ಮೋಡಿ ಮಾಡಿದ್ದರು.
ಮುಂದೆ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಅಹಲ್ಯಾ ಆಗಿ ನಟಿಸಿದ ಈಕೆ ಪಾಸಿಟಿವ್ ಮಾತ್ರವಲ್ಲದೇ ನೆಗೆಟಿವ್ ಪಾತ್ರದ ಮೂಲಕವೂ ಕಿರುತೆರೆಯಲ್ಲಿ ಮಿಂಚಿದ್ದರು. ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಕಾವ್ಯಾ ಮಹಾದೇವ್ ಮತ್ತೆ ಯಾವಾಗ ಹೊಸ ಧಾರಾವಾಹಿಯೊಂದಿಗೆ ಕಾಣಿಸಿಕೊಳ್ಳುತ್ತಾರೆ ಅನ್ನೋದು ನೋಡಬೇಕಿದೆ.


Click it and Unblock the Notifications











