ಡಿಂಪಲ್ ಕ್ವೀನ್ ರಚಿತಾ ರಾಮ್ ಭರತನಾಟ್ಯ ಕಲಾವಿದೆ ಅನ್ನೋ ಗೊತ್ತೇ? ಇದೂವರೆಗೂ ನೀಡಿದ ಪ್ರದರ್ಶನವೆಷ್ಟು?

By ಅನಿತಾ ಬನಾರಿ

'ಬುಲ್ ಬುಲ್' ಸಿನಿಮಾ ಮೂಲಕ ಬೆಳ್ಳಿತೆರೆ ಪ್ರೇಕ್ಷಕರಿಗೆ ಪರಿಚಯವಾದವರು ನಟಿ ರಚಿತಾ ರಾಮ್. ಗುಳಿ ಕೆನ್ನೆಯ ಈ ಸುಂದರಿ ಇಂದು ಕನ್ನಡ ಹಿರಿತೆರೆಯ ಪ್ರಮುಖ ನಟಿಯರಲ್ಲೊಬ್ಬರು. ಅಸಲಿಗೆ ನಟಿ ರಚಿತಾ ರಾಮ್ ಅವರ ಮೂಲ ಹೆಸರು ಬಿಂದ್ಯಾ ರಾಮ್. 2010 ರಿಂದ ನಟನಾ ಕ್ಷೇತ್ರದಲ್ಲಿ ಆ್ಯಕ್ಟಿವ್ ಇರುವ ಈ ನಟಿ ಬುಲ್ ಬುಲ್ ಚಿತ್ರದ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟಿದ್ದಷ್ಟೇ ಅಲ್ಲದೆ ಬೆಸ್ಟ್ ಆಕ್ಟರ್ಸ್ ಎಂಬ ಫಿಲಂ ಫಾರ್ ಅವಾರ್ಡ್ ಅನ್ನು ಕೂಡ ಪಡೆದರು.

'ಬುಲ್ ಬುಲ್' ಚಿತ್ರದ ನಂತರ ಹಲವಾರು ಸಿನಿಮಾಗಳನ್ನು ಕೊಟ್ಟಿರುವ ಈ ನಟಿ ಇಂದಿಗೂ ಸಿನಿ ಪ್ರೇಕ್ಷಕರಿಗೆ ಫೇವರಿಟ್ ಅಷ್ಟೇ ಅಲ್ಲದೆ ಕಿರುತೆರೆಯಲ್ಲಿಯೂ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ.

Do you know Kannada actress Rachita Ram is a trained Bharatanatyam dancer

'ಬುಲ್ ಬುಲ್' ಚಿತ್ರದ ನಂತರ 'ರನ್ನ', 'ಪುಷ್ಪಕ ವಿಮಾನ', 'ಭರ್ಜರಿ', 'ಅಯೋಗ್ಯ', 'ಸೀತಾರಾಮ ಕಲ್ಯಾಣ', 'ಲವ್ ಯು ರಚ್ಚು', 'ಏಕ್ ಲವ್ಯ', 'ರಥಾವರ', 'ವೀರ, ಅಂಬರೀಶ', 'ಲಿಲ್ಲಿ', 'ಜಾನಿ ಜಾನಿ ಎಸ್ ಪಪ್ಪಾ', 'ಅಮರ್', 'ಭರಾಟೆ', 'ನಟಸಾರ್ವಭೌಮ', 'ಆಯುಷ್ಮಾನ್ ಭವ', 'ಮಾನ್ಸೂನ್ ರಾಗ', 'ಕ್ರಾಂತಿ' ಹೀಗೆ ಹಲವು ಚಿತ್ರಗಳಲ್ಲಿ ರಚಿತಾ ರಾಮ್ ನಟಿಸಿದ್ದಾರೆ.

ಕನ್ನಡ ಸಿನಿಮಾರಂಗದ ಪ್ರಸ್ತುತ ಎಲ್ಲಾ ನಟ ದಿಗ್ಗಜರಾದ ತೂಗುದೀಪ ದರ್ಶನ್, ಕಿಚ್ಚ ಸುದೀಪ್, ರಮೇಶ್ ಅರವಿಂದ್, ಧ್ರುವ ಸರ್ಜಾ, ನೀನಾಸಂ ಸತೀಶ್, ಡಾಲಿ ಧನಂಜಯ್, ಉಪೇಂದ್ರ, ಶಿವರಾಜ್ ಕುಮಾರ್, ಡಾ. ಪುನೀತ್ ರಾಜಕುಮಾರ್, ಶ್ರೀನಗರ ಕಿಟ್ಟಿ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ದೇವರಾಜ್, ಡಾರ್ಲಿಂಗ್ ಕೃಷ್ಣ, ಅಭಿಷೇಕ್ ಅಂಬರೀಶ್, ಶ್ರೀಮುರಳಿ, ಗೋಲ್ಡನ್ ಸ್ಟಾರ್ ಗಣೇಶ್, ನಟಿ ರಮ್ಯಾ ಹಿರಿಯ ಕಲಾವಿದ ಅನಂತನಾಗ್ ಮುಂತಾದವರೊಂದಿಗೆ ನಟಿಸಿದ್ದಾರೆ. ಕನ್ನಡ ಭಾಷೆ ಅಲ್ಲದೆ ತೆಲುಗು ಸಿನಿಮವಾದ 'ಸೂಪರ್ ಮಚಿ' ಯಲ್ಲೂ ನಟಿಸಿದ್ದಾರೆ.

Do you know Kannada actress Rachita Ram is a trained Bharatanatyam dancer

ಸಿನಿರಂಗಕ್ಕೆ ಕಾಲಿಡುವ ಮೊದಲು ನಟಿ ರಚಿತಾ ರಾಮ್ ಅವರು 'ಬೆಂಕಿಯಲ್ಲಿ ಅರಳಿದ ಹೂವು', 'ಅರಸಿ' ಎಂಬ ಧಾರಾವಾಹಿಗಳ ಮೂಲಕ ಜನಮನ ಗೆದ್ದಿದ್ದರು. ಅರಸಿ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರ ಮಾಡಿದ್ದರೂ ಸಹ ತಮ್ಮ ನಟನೆಯಿಂದ ಬಹಳಷ್ಟು ಅಭಿಮಾನಿಗಳನ್ನು ಪಡೆದ ಇವರು ನಂತರ ಸಿನಿ ಕ್ಷೇತ್ರಕ್ಕೆ ಕಾಲಿಟ್ಟರು.

ಈಗ ಸಿನಿಮಾ ಅಷ್ಟೇ ಅಲ್ಲದೆ ಕಿರುತೆರೆಯಲ್ಲಿಯೂ ಆ್ಯಕ್ಟಿವ್ ಆಗಿರುವ ಈಕೆ, ಕಾಮಿಡಿ ಟಾಕೀಸ್, ಮಜಾ ಭಾರತ, ಡ್ರಾಮಾ ಜೂನಿಯರ್ಸ್ ಸೀಸನ್ 4, ಸೂಪರ್ ಕ್ವೀನ್ ಭರ್ಜರಿ ಬ್ಯಾಚುಲರ್ಸ್ ಮುಂತಾದ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಭರತನಾಟ್ಯ ಕಲಾವಿದೆಯೂ ಆಗಿರುವ ಇವರು 50ಕ್ಕೂ ಹೆಚ್ಚು ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿದ್ದಾರಂತೆ. ಇವರ ಶಬರಿ ವೇಟಿಂಗ್ ಫಾರ್ ರಾಮ, ಅಯೋಗ್ಯ ಟು, ಲವ್ ಮೀ ಆರ್ ಹೇಟ್ ಮಿ, ಸಂಜು ವೆಡ್ಸ್ ಗೀತಾ, ಕಲ್ಟ್, ರಚಯ್ಯ, ಮುಂತಾದ ಚಿತ್ರಗಳು ಬಿಡುಗಡೆಯ ಹಂತದಲ್ಲಿದೆ.

ಇವರ ಗುಳಿಗೆನ್ನೆ ಹಾಗೂ ಸರಳತೆಗೆ ಸಿನಿ ಪ್ರೇಕ್ಷಕರ ಬಹುದೊಡ್ಡ ಅಭಿಮಾನಿ ಬಳಗವನ್ನೇ ಪಡೆದುಕೊಂಡಿರುವ ನಟಿ ರಚಿತಾ ರಾಮ್ ತಮ್ಮ ಅದ್ಭುತ ನಟನೆಗೆ ಹಲವಾರು ಅವಾರ್ಡ್ ಗಳನ್ನು ಪಡೆದಿದ್ದಾರೆ. ಐದಕ್ಕೂ ಹೆಚ್ಚಿನ ಬೆಸ್ಟ್ ಆಕ್ಟರ್ಸ್ ಅವಾರ್ಡ್ ಗಳನ್ನು ಪಡೆದ ಈಕೆ ಇಂಟರ್ನ್ಯಾಷನಲ್ ಅವಾರ್ಡ್ ಗಳನ್ನು ತಮ್ಮ ಮುಡುಗೇರಿಸಿಕೊಂಡಿದ್ದಾರೆ.

More from Filmibeat

English summary
Do you know Kannada actress Rachita Ram is a trained Bharatanatyam dancer:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X