'ಮುಕ್ತ ಮುಕ್ತ' ಧಾರಾವಾಹಿಯ ಶಶಿಧರ ಪಾತ್ರಧಾರಿ ಕಾರ್ತಿಕ್ ಹೆಬ್ಬಾರ್ ಗಾಯಕ ಕೂಡ ಹೌದು!

By ಅನಿತಾ ಬನಾರಿ

ಟಿ. ಎನ್. ಸೀತಾರಾಮ್ ಅವರ 'ಮುಕ್ತ ಮುಕ್ತ' ಧಾರಾವಾಹಿ ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಯಾಗಿತ್ತು. ಇದರಲ್ಲಿ ಬಂದ ಪ್ರತೀ ಪಾತ್ರವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದಲ್ಲದೆ ಸಮಾಜದ ನಾನಾ ರೀತಿಯ ಜನರನ್ನು ಪ್ರತಿನಿಧಿಸುವಂತಿತ್ತು.

ಇದರಲ್ಲಿ ಶಾಂಭವಿ ಮನೆಯವರೆಲ್ಲರೂ ವಿಭಿನ್ನ ರೀತಿಯಲ್ಲಿ ಜನರಿಗೆ ಇಷ್ಟವಾಗಿದ್ದರು. ಅದರಲ್ಲೂ ಶಾಂಭವಿಯ ತಮ್ಮನ ಪಾತ್ರವಾಗಿದ್ದ ಶಶಿಧರನಂತೂ ಜನರಿಗೆ ನೆಚ್ಚಿನ ಪಾತ್ರವಾಗಿತ್ತು ಎಂದರೆ ತಪ್ಪಾಗಲ್ಲ.

Do you know Muktha Muktha Kannada serial actor Karthik Hebbar is also a singer

ಆಗ ತಾನೇ ಕಾಲೇಜು ಮುಗಿಸಿರುವ ಹುಡುಗ, ಸಾಲ ಮಾಡಿ ಹಾರ್ಟಿಕಲ್ಚರ್ ಗೆ ಕೈ ಹಾಕಿ ನಂತರ ಹಲವಾರು ತೊಂದರೆಗಳನ್ನು ಎದುರಿಸುವ ಪಾತ್ರ ಅದು. ಆದರೆ ಧಾರಾವಾಹಿಯ ಹಲವಾರು ಸಂಚಿಕೆಗಳು ಶಶಿಧರನ ಹಾಡಿನಿಂದಲೇ ಆರಂಭವಾಗಿದ್ದಿದೆ. ಇಡೀ ಧಾರಾವಾಹಿಯಲ್ಲಿ ಶಶಿಧರ್ ಬಹಳ ಸೊಗಸಾಗಿ ಅರ್ಥಪೂರ್ಣವಾದ ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದ್ದಿದೆ.

ಶಶಿಧರನ ಪಾತ್ರದಲ್ಲಿ ಕಾಣಿಸಿಕೊಂಡವರು ನಟ ಕಾರ್ತಿಕ್ ಹೆಬ್ಬಾರ್. ಮೂಲತಃ ಮಡಿಕೇರಿ ಅವರಾದ ಇವರು ಇದೀಗ ಬೆಂಗಳೂರಿನ ನಿವಾಸಿ. 'ಮುಕ್ತ ಮುಕ್ತ' ಧಾರಾವಾಹಿ ನಂತರ ಇನ್ಯಾವುದೇ ಧಾರಾವಾಹಿಗಳಲ್ಲೂ ಇವರು ನಟಿಸಿಲ್ಲ. 'ಮುಕ್ತ ಮುಕ್ತ' ಧಾರಾವಾಹಿಯಲ್ಲಿ ಇವರು ನಟಿಸಿದ್ದು ಮಾತ್ರವಲ್ಲದೆ ಕೆಲವು ಸಂಚಿಕೆಗಳಿಗೆ ಸ್ಕ್ರಿಪ್ಟ್ ಅನ್ನು ಕೂಡ ಬರೆದಿದ್ದರಂತೆ.

ಪ್ರಸ್ತುತ ಕಾರ್ತಿಕ್ ಹೆಬ್ಬಾರ್ ಅವರು ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನ ಹಲವು ಸಭೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಂತೂ ಬಹಳ ಪಾಪ್ಯುಲರ್ ಇರುವ ಇವರು ಅರ್ಥಗರ್ಭಿತ ಹಾಡುಗಳ ರೀಲ್ಸ್‌ಗಳನ್ನು ಆಗಾಗ ಹಾಡಿ ಪೋಸ್ಟ್ ಮಾಡುತ್ತಿರುತ್ತಾರೆ.

ಇನ್‌ಸ್ಟಾಗ್ರಾಂನಲ್ಲಿ ಇವರಿಗೆ 25,000ಕ್ಕೂ ಹೆಚ್ಚಿನ ಫಾಲೋವರ್ಸ್ ಇದ್ದು, ಇವರು ತಮ್ಮ ಅಕೌಂಟ್‌ನಲ್ಲಿ ಹಾಡಿರುವ 'ಮಳೆಬಿಲ್ಲು' ಧಾರಾವಾಹಿ ಟೈಟಲ್ ಸಾಂಗ್ ಜನ ಮೆಚ್ಚುಗೆಯನ್ನು ಪಡೆದಿದೆ. ಮುಚ್ಚುಮರೆ ಇಲ್ಲದೆ 'ಮುಕ್ತ ಮುಕ್ತ' ಧಾರಾವಾಹಿಯ ಟೈಟಲ್ ಹಾಡು, ಅಂತರ ತಮ ನೀ ಗುರು ಮುಂತಾದ ಭಾವಗೀತೆಗಳು ಹೆಚ್ಚಿನ ವ್ಯೂ ಹಾಗೂ ಲೈಕ್ ಗಳನ್ನು ಪಡೆದಿವೆ. ಈವರೆಗೂ ಇವರು ಮಾಡಿರುವ 2000 ಪೋಸ್ಟ್ ಗಳಲ್ಲಿ ಹೆಚ್ಚಿನವು ಹಾಡಿನ ಪೋಸ್ಟ್ ಗಳೇ ಆಗಿವೆ.

ಸದ್ಯಕ್ಕೆ ನಟ ಕಾರ್ತಿಕ್ ಹೆಬ್ಬಾರ್, ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಹಲವಾರು ನಾಟಕಗಳನ್ನು ರಚಿಸಿ ನಿರ್ದೇಶಿಸುತ್ತಿರುತ್ತಾರೆ. ರಂಗಶಂಕರ ಮುಂತಾದ ನಾಟಕ ಕಲಾಮಂದಿರಗಳಲ್ಲಿ ಇವರ ನಾಟಕ ಪ್ರದರ್ಶನಗೊಳ್ಳುತ್ತಿರುತ್ತದೆ. ಕಲಾವಿದರಾದ ಸೀತಾ ಕೋಟೆ, ಚಂದ್ರ ಕೀರ್ತಿ, ಗಾಯಕ ದರ್ಶನ್, ಮುರಳಿ ಶ್ರೀ ರಾಮ್, ದೀಪಿಕಾ ಆರಾಧ್ಯ, ಯಶಸ್ವಿನಿ ಚೆನ್ನಯ್ಯ ಮುಂತಾದವರೊಂದಿಗಿನ ಬಹು ದೊಡ್ಡ ತಂಡವನ್ನೇ ಕಟ್ಟಿಕೊಂಡಿದ್ದಾರೆ ನಟ ಕಾರ್ತಿಕ್ ಹೆಬ್ಬರ್.

ಇವರಿಗೆ ಪುಸ್ತಕ ಓದುವ ಹವ್ಯಾಸವು ಇದ್ದು, 'ಪತಂಗ ಪ್ರಭಾವ', '36 ಸತಿ ಸಾವಿತ್ರಿ ನಿವಾಸ', 'ಅಮ್ಮ ಮತ್ತು ಸುಹೇಲ್' ಮುಂತಾದ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ.
ಎಲ್ ಜಿ ಬಿ ಟಿ ಕ್ಯು ಕಮ್ಯುನಿಟಿಯಲ್ಲಿ ಗುರುತಿಸಿಕೊಳ್ಳುವ ಇವರು ಈ ವಿಚಾರವಾಗಿ ಸಾಮಾಜಿಕ ಒಪ್ಪು ತಪ್ಪುಗಳ ಬಗ್ಗೆ ತಮ್ಮ ಅಕೌಂಟ್‌ನಲ್ಲಿ ಮಾತನಾಡುತ್ತಿರುತ್ತಾರೆ.

More from Filmibeat

English summary
Do you know Muktha Muktha Kannada serial actor Karthik Hebbar is also a singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X