'ಅಮೃತಧಾರೆ' ಧಾರಾವಾಹಿಯ ರಾಧಾ ಭಗವತಿ ಕುಟುಂಬಕ್ಕಿದೆ ರಂಗಭೂಮಿಯ ನಂಟು; ಏನದು ನಿಮಗೆ ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅಮೃತಧಾರೆ' ಯೂ ಒಂದು. ವಿಭಿನ್ನ ರೀತಿಯ ಕೌಟುಂಬಿಕ ಕಥಾ ಹಂದರವನ್ನೊಳಗೊಂಡಿರುವ ಈ ಧಾರಾವಾಹಿಯ ಪ್ರತಿಯೊಂದು ಪಾತ್ರವೂ ಅತ್ಯದ್ಭುತವಾಗಿದೆ. ಅದರಲ್ಲೂ ನಾಯಕ ಗೌತಮ್ ದಿವಾನ್ ತಮ್ಮ ಜೈದೇವ್‌ನ ಪತ್ನಿ ಮಲ್ಲಿಯಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ನಟಿಯ ಹೆಸರು ರಾಧಾ ಭಗವತಿ.
ಪಕ್ಕಾ ಹಳ್ಳಿ ಹುಡುಗಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ರಾಧಾ ಭಗವತಿ ತನ್ನ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಬೆಡಗಿ. ಮುದ್ದಾದ ನಟನೆಯ ಮೂಲಕ ಮೋಡಿ ಮಾಡುತ್ತಿರುವ ರಾಧಾ ಭಗವತಿ ಅವರಿಗೆ ನಟನೆ ಎಂಬುದು ರಕ್ತಗತವಾಗಿ ಬಂದಿದೆ ಎಂದರೆ ತಪ್ಪಾಗಲಾರದು.

ರಾಧಾ ಭಗವತಿ ಅವರ ತಾತ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡವರು. ಮಾತ್ರವಲ್ಲ ಹರಿಕಥೆ ದಾಸರಾಗಿ ಇವರ ತಾತ ಕಾಣಿಸಿಕೊಂಡವರು. ಇದರ ಜೊತೆಗೆ ರಾಧಾ ಭಗವತಿ ಅವರ ಅಮ್ಮ ಜಾನಪದ ಹಾಡುಗಾರ್ತಿ. ಒಟ್ಟಿನಲ್ಲಿ ಮನೆಯಲ್ಲಿ ಸಂಪೂರ್ಣ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ನಟನೆಯತ್ತ ಮನಸ್ಸು ವಾಲಿತ್ತು.
ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕ ರಾಮಾಚಾರಿಯ ತಂಗಿ ಶ್ರುತಿಯಾಗಿ ರಾಧಾ ಭಗವತಿ ನಟಿಸಿದ್ದರು. ಮುಂದೆ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬಂದ ಈಕೆ ನಂತರ ಕಾಣಿಸಿದ್ದು ಮಲ್ಲಿಯಾಗಿ. ಹಳ್ಳಿ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ ಈಕೆ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ರಾಧಾ ಭಗವತಿ ಅವರು ಈಗಾಗಲೇ ಹಿರಿತೆರೆಯಲ್ಲಿ ತೊಡಗಿಸಿಕೊಂಡಿರುವ ಬೆಡಗಿ. 'ಆ 90 ದಿನಗಳು' ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲೂ ನಟನಾ ಕಂಪನ್ನು ಪಸರಿಸಿದ್ದಾರೆ ಈಕೆ. ಮುಂದೆ ಸಚಿನ್ ಶೆಟ್ಟಿ ನಿರ್ದೇಶನದ 'ವಸಂತ ಕಾಲದ ಹೂಗಳು' ಸಿನಿಮಾಕ್ಕೆ ಆಯ್ಕೆಯಾಗಿರುವ ಈಕೆ ವಯಸ್ಸಿಗೆ ಬಂದ ಕಾಲೇಜು ಹುಡುಗಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ಬಣ್ಣ ಹಚ್ಚಿರುವ ರಾಧಾ ಭಗವತಿ ಹಿರಿತೆರೆಯಲ್ಲಿಯೂ ನಟನಾ ಛಾಪನ್ನು ಮೂಡಿಸುತ್ತಿದ್ದಾರೆ. ಇನ್ನು 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯ ಪಾತ್ರಕ್ಕೆ ಈಕೆ ಜೀವ ತುಂಬುತ್ತಿದ್ದು ಆ ಸಿನಿಮಾವನ್ನು ಸ್ಯಾಂಡಲ್ ವುಡ್ ನ ಜನಪ್ರಿಯ ನಿರ್ದೇಶಕರಾದ ಎಸ್ ನಾರಾಯಣ್ ನಿರ್ದೇಶಿಸುತ್ತಿದ್ದಾರೆ.
ಮಲ್ಲಿ ಪಾತ್ರದ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿರುವ ರಾಧಾ ಭಗವತಿ ಅವರು ಹಿರಿತೆರೆಯಲ್ಲಿಯೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿರುವ ಬೆಡಗಿ. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಅವಕಾಶಗಳನ್ನು ಈಕೆ ಪಡೆಯುತ್ತಿದ್ದರೂ ಪಾತ್ರಗಳ ಆಯ್ಕೆಯಲ್ಲಿ ಕೊಂಚ ಸ್ಟ್ರಿಕ್ಟ್ ಎಂದು ಹೇಳಿದರೆ ತಪ್ಪಾಗಲಾರದು. ಮುಖ್ಯವಾಗಿ ಗ್ಲಾಮರಸ್ ಆಗಿರುವಂತಹ ಪಾತ್ರಗಳಿಂದ ದೂರವಿರುವ ಈಕೆ ಪಾತ್ರವನ್ನು ಒಪ್ಪುವ ಮೊದಲು ಸಾಕಷ್ಟು ಬಾರಿ ಆಲೋಚಿಸುತ್ತಾರೆ.
ನಟನೆಯ ಹೊರತಾಗಿ ಈಕೆ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಹೌದು, ಹಿನ್ನೆಲೆ ಗಾಯಕಿಯಾಗಿರುವ ಈಕೆ ಎರಡು ಸಿನಿಮಾಗಳಲ್ಲಿ ಹಾಡಿದ್ದಾರೆ. ಇನ್ನು ಕಂಠದಾನ ಕಲಾವಿದೆಯಾಗಿರುವ ಈಕೆ 'ಮದುಮಗಳು" ಧಾರಾವಾಹಿಯಲ್ಲಿ ನಾಯಕಿಯ ಪಾತ್ರಕ್ಕೆ ದನಿ ನೀಡಿದ್ದರು. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಕೊಂಚ ಮಟ್ಟಿಗೆ ಆ್ಯಕ್ಟಿವ್ ಆಗಿರುವ ಈಕೆ ಬಿಡುವು ದೊರೆತಾಗಲೆಲ್ಲಾ ಫೋಟೋಗಳನ್ನು, ರೀಲ್ಸ್ ಗಳನ್ನು ಹಾಕುತ್ತಾ ನೆಟ್ಟಿಗರ, ಫಾಲೋವರ್ಸ್ ಮನ ಸೆಳೆಯುತ್ತಿರುತ್ತಾರೆ.


Click it and Unblock the Notifications











