ರಕ್ಷಿತಾ ಪ್ರೇಮ್ ಮೊದಲು ಜಡ್ಜ್ ಆಗಿದ್ದ ರಿಯಾಲಿಟಿ ಶೋ ಯಾವುದು? ಆ ಶೋ ಎಲ್ಲಿ ಪ್ರಸಾರ ಆಗಿತ್ತು?

By ಅನಿತಾ ಬನಾರಿ

ಪ್ರಸ್ತುತ ಕಿರುತೆರೆಯ ಮೂಲಕ ಜನಮನ ಗೆಲ್ಲುತ್ತಿರುವವರು ನಟಿ ರಕ್ಷಿತಾ ಪ್ರೇಮ್. ಹೌದು ಸಿನಿಮಾ ನಟಿಯಾದರೂ ಇತ್ತೀಚೆಗೆ ಕಿರುತೆರೆಯಲ್ಲಿ ಹಲವಾರು ರಿಯಾಲಿಟಿ ಶೋ ಗಳಲ್ಲಿ ತೀರ್ಪುಗಾರರಾಗಿ ಆಗಮಿಸಿರುವ ರಕ್ಷಿತಾ ಕಿರುತೆರೆ ಪ್ರೇಕ್ಷಕರಿಗೂ ಬಹಳ ಚೆನ್ನಾಗಿ ಪರಿಚಯವಾಗಿದ್ದಾರೆ. ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿರುವ ನಟಿ ರಕ್ಷಿತಾ ಬರೀ ನಟಿಯಲ್ಲ ನಿರ್ಮಾಪಕಿಯೂ ಹೌದು.

ನಟಿ ರಕ್ಷಿತಾ ಅವರ ಮೂಲ ಹೆಸರು ಶ್ವೇತ. ಸಿನಿ ರಂಗಕ್ಕೆ ಕಾಲಿಡುವಾಗ ಹೆಸರು ಬದಲಾಯಿಸಿದ ಈಕೆ ರಕ್ಷಿತಾ ಎಂಬ ಹೆಸರಿನ ಮೂಲಕವೇ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯ. ಬೆಂಗಳೂರಿನವರೇ ಆದ ಈಕೆ, ಅಪ್ಪು ಸಿನಿಮಾ ಮೂಲಕ ಕನ್ನಡ ಬೆಳ್ಳಿತೆರೆಗೆ ಕಾಲಿಟ್ಟರು. ಇವರ ತಂದೆ ಕನ್ನಡದ ಖ್ಯಾತ ಸಿನಿಮಾಟೋಗ್ರಾಫರ್ ಬಿ ಸಿ ಗೌರಿಶಂಕರ್ ಹಾಗೂ ತಾಯಿ ನಟಿ ಮಮತಾ ರಾವ್.

Do you know Rakshitha Prem s first reality show as judge

ಅಪ್ಪು ಸಿನಿಮಾದಲ್ಲಿ ನಟ ಪುನೀತ್ ರಾಜಕುಮಾರ್ ಅವರೊಂದಿಗೆ ನಟಿಸಿದ ಶ್ವೇತಾಗೆ ಪಾರ್ವತಮ್ಮ ರಾಜಕುಮಾರ್ ಅವರೇ ರಕ್ಷಿತಾ ಎಂಬ ಹೆಸರನ್ನು ಕೊಟ್ಟರು.
ಅಂದಿನಿಂದ ಈಕೆ ನಟಿ ರಕ್ಷಿತಾ ಎಂದೇ ಚಿರಪರಿಚಿತ. ಅಪ್ಪು ಸಿನಿಮಾ ಮೂಲಕ ಕನ್ನಡ ಹಿರಿತೆರೆಗೆ ಕಾಲಿಟ್ಟರೂ ಸಹ ಈಕೆ ಮುಂದೆ ಧಮ್, ಗೋಕರ್ಣ, ಲಕ್ಷ್ಮಿ ನರಸಿಂಹ, ಅವಳೇ ನನ್ನ ಗೆಳತಿ, ಕಲಾಸಿಪಾಳ್ಯ, ಯಶವಂತ್, ಸುಂಟರಗಾಳಿ, ಹುಬ್ಬಳ್ಳಿ, ಮಂಡ್ಯ, ತನನಂ ತನನಂ ಹೀಗೆ ಹದಿನೈದಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಈಕೆ ಬಣ್ಣ ಹಚ್ಚಿದ್ದಾರೆ.

ಅಂದ ಹಾಗೇ ಕನ್ನಡವಷ್ಟೇ ಅಲ್ಲದೆ ಈಡಿಯಟ್ ಎಂಬ ತೆಲುಗು ಹಾಗೂ ದಮ್, ಸಿಲಾಂಬರಸನ್ ಎಂಬ ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗ ಕಂಡಿರುವ ಕಲಾವಿದರಾದ ಪುನೀತ್ ರಾಜಕುಮಾರ್, ಉಪೇಂದ್ರ, ಕಿಚ್ಚ ಸುದೀಪ್, ತೂಗುದೀಪ ದರ್ಶನ್, ಆದಿತ್ಯ, ನಾಗಾರ್ಜುನ ಅಕ್ಕಿನೇನೀ, ಮಹೇಶ್ ಬಾಬು, ಜೂನಿಯರ್ ಎನ್ ಟಿ ಆರ್, ಜಗಪತಿ ಬಾಬು, ವಿ ರವಿಚಂದ್ರನ್, ರವಿತೇಜ ಮುಂತಾದವರೊಂದಿಗೆ ನಟಿಸಿರುವ ಬಹುಭಾಷಾ ಕಲಾವಿದೆ ನಟಿ ರಕ್ಷಿತಾ.

ಕನ್ನಡ ಹಿರಿತೆರೆ ನಿರ್ದೇಶಕ ಪ್ರೇಮ ಅವರನ್ನು ಮದುವೆಯಾದ ನಂತರ ನಟನೆಯಿಂದ ದೂರವೇ ಉಳಿದ ಈಕೆ ನಿರ್ಮಾಪಕವಾಗಿ ತಮ್ಮ ಹೊಸ ಪಯಣವನ್ನು ಆರಂಭಿಸಿದರು.
ಪತಿ ಪ್ರೇಮ್ ಅವರ ನಿರ್ದೇಶನದ ಜೋಗಯ್ಯ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರು ಮುಖ್ಯ ಭೂಮಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ನಿರ್ಮಾಪಕಿಯಾಗುವ ಮೂಲಕ ಸಿನಿಮಾ ನಿರ್ಮಾಣದಲ್ಲಿ ಹೆಚ್ಚಿನ ಒಲವು ತೋರಿಸಿದರು ನಟಿ ರಕ್ಷಿತಾ. ಇದರ ಜೊತೆಗೆ 'ಡಿಕೆ' ಹಾಗೂ 'ಏಕ್ ಲವ್ ಯೂ' ಸಿನಿಮಾಗಳ ನಿರ್ಮಾಪಕರಾಗಿಯೂ ರಕ್ಷಿತಾ ಪ್ರೇಮ್ ಕಾಣಿಸಿಕೊಂಡಿದ್ದಾರೆ.

ಪ್ರಸ್ತುತ ಕನ್ನಡ ಕಿರುತೆರೆಗೆ ಹೆಚ್ಚು ಆ್ಯಕ್ಟೀವ್ ಇರುವ ನಟಿ ರಕ್ಷಿತಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸ್ವಯಂವರ' ಶೋವಿನ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟಿದ್ದರು. 'ತಕಧಿಮಿತಾ ದಿ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡ ಈಕೆ ನಂತರ ಹಿಂತಿರುಗಿ ನೋಡಿದ್ದಿಲ್ಲ. ಪುಟಾಣಿ ಪಂಟ್ರು ಸೀಸನ್ 2, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಹತ್ತಕ್ಕೂ ಹೆಚ್ಚು ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Do you know Rakshitha Prem's first reality show as judge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X