ಜೀ ಕನ್ನಡದ 'ಸೀತಾರಾಮ' ಧಾರಾವಾಹಿಯ ನಟಿ ವೈಷ್ಣವಿ ಗೌಡ ವಯಸ್ಸೆಷ್ಟು ಗೊತ್ತೇ?
ಕಿರುತೆರೆಯಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟಿಯರಲ್ಲಿ ವೈಷ್ಣವಿ ಗೌಡ ಕೂಡ ಒಬ್ಬರು. ಕಳೆದ ಕೆಲವು ವರ್ಷಗಳಿಂದ ವೈಷ್ಣವಿ ಗೌಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಸ ಸದ್ಯ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಸೀತಾರಾಮ' ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಸೀತೆಯ ಪಾತ್ರ ಕಿರುತೆರೆ ವೀಕ್ಷಕರಿಗೆ ಇಷ್ಟ ಆಗಿದೆ.
ಕಿರುತೆರೆ ವೀಕ್ಷಕರಿಗೆ ಅವರ ನೆಚ್ಚಿನ ನಟಿಯರ ಬಗ್ಗೆ ತಿಳಿದು ಕೊಳ್ಳುವುದು ಅಂದರೆ ಬಲು ಕುತೂಹಲ. ನಟಿಯರ ವಯಸ್ಸು, ಧಾರಾವಾಹಿ, ಸಂಭಾವನೆ ಇಂತಹ ವಿಷಯಗಳ ಬಗ್ಗೆ ಕಣ್ಣಿಟ್ಟಿರುತ್ತಾರೆ. ಈಗಂತೂ ಕಿರುತೆರೆ ನಟಿಯರ ಸೋಶಿಯಲ್ ಮೀಡಿಯಾವನ್ನು ನಿರಂತರವಾಗಿ ಫಾಲೋ ಮಾಡುತ್ತಲೇ ಇರುತ್ತಾರೆ. ಸದ್ಯ ವೈಷ್ಣವಿ ಗೌಡ ವಯಸ್ಸಿನ ಬಗ್ಗೆ ಅವರಿಗೆ ಅನುಮಾನ ಮೂಡಿದೆ. ವಿಶೇಷ ಅಂದರೆ, ಉತ್ತರವೂ ಸಿಕ್ಕಿದೆ.

ವೈಷ್ಣವಿ ಗೌಡ ಕಿರುತೆರೆಗೆ ಕಾಲಿಟ್ಟು ಸುಮಾರು 14 ವರ್ಷಗಳೇ ಆಗುತ್ತಿದೆ. ಕಾಲೇಜು ಶಿಕ್ಷಣ ಪಡೆಯುತ್ತಿರುವಾಗಲೇ ವೈಷ್ಣವಿ ಗೌಡ ಕಿರುತೆರೆ ಪ್ರವೇಶ ಮಾಡಿದ್ದರು. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ 'ದೇವಿ' ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟಿದ್ದ ನಟಿ ಅಲ್ಲಿಂದ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಒಂದರ ಹಿಂದೊಂದು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಈ ಧಾರಾವಾಹಿ ಮುಗಿಯುತ್ತಿದ್ದಂತೆ ಜೀ ಕನ್ನಡದಲ್ಲಿಯೇ ಮತ್ತೊಂದು ಧಾರಾವಾಹಿ 'ಪುನರ್ ವಿವಾಹ'ದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ವೈಷ್ಣವಿ ಗೌಡಗೆ ಅಷ್ಟೊಂದು ಜನಪ್ರಿಯತೆಯೇನೂ ಸಿಗಲಿಲ್ಲ. ಆದರೆ, 2013ರಿಂದ ಕಲರ್ಸ್ ಕನ್ನಡದಲ್ಲಿ 'ಅಗ್ನಿಸಾಕ್ಷಿ' ಧಾರಾವಾಹಿ ಪ್ರಸಾರ ಆಗಿತ್ತು. ಇದು ವೈಷ್ಣವಿ ಗೌಡಗೆ ಹೆಸರು ತಂದುಕೊಟ್ಟಿತ್ತು.
2013ರಿಂದ ಆರಂಭ ಆಗಿದ್ದ ಈ ಧಾರಾವಾಹಿ ಬರೋಬ್ಬರು 2020ರವರೆಗೂ ಪ್ರಸಾರ ಕಂಡಿತ್ತು. ಸುಮಾರು ಆರೂವರೆ ವರ್ಷಗಳ ಕಾಲ ಒಂದೇ ಧಾರಾವಾಹಿ ಕಿರುತೆರೆ ವೀಕ್ಷಕರನ್ನು ರಂಜಿಸಿತ್ತು. ಇಲ್ಲಿಂದ ವೈಷ್ಣವಿ ಗೌಡ ಕನ್ನಡಿಗರ ಪ್ರತಿಯೊಂದು ಮನೆಯಲ್ಲೂ ಫೇಮಸ್ ಆಗಿಬಿಟ್ಟರು. 'ಅಗ್ನಿಸಾಕ್ಷಿ' ಮುಗಿಯುತ್ತಿದ್ದಂತೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿದ್ದರು.
ಬಿಗ್‌ಬಾಸ್ ನಿಂದ ಹೊರಬರುತ್ತಿದ್ದಂತೆ ಒಂದಿಷ್ಟು ದಿನ ಗ್ಯಾಪ್ ಕೊಟ್ಟು ವೈಷ್ಣವಿ ಗೌಡ ಮತ್ತೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ 'ಸೀತಾರಾಮ' ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಗೆ ವೀಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದೇ ವೈಷ್ಣವಿ ಗೌಡಗೆ ಎಷ್ಟು ವಯಸ್ಸು ಅಂತ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಅದಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಅವರ ವಯಸ್ಸಿನ ಬಗ್ಗೆ ಕಾಮೆಂಟ್ ಮಾಡುತ್ತಲೇ ಇದ್ದಾರೆ.
ವೈಷ್ಣವಿ ಗೌಡ ಅವರ ವಯಸ್ಸು 31 ವರ್ಷ ಎಂದು ವರದಿಯಾಗಿದೆ. ಆದರೆ, ಅವರೇ ಅಧಿಕೃತವಾಗಿ ಹೇಳಿಕೊಂಡಿದ್ದಾರಾ ಅನ್ನೋದು ಇನ್ನೂ ಗೊತ್ತಾಗಿಲ್ಲ. ಆದರೆ, ಅಭಿಮಾನಿಗಳು ಮಾತ್ರ ಮದುವೆ ಆಗುವ ವಯಸ್ಸು. ಬೇಗನೇ ಮದುವೆ ಆಗಿ ಅಂತ ಹೇಳುತ್ತಿದ್ದಾರೆ. ಸದ್ಯ ಸೀತಾರಾಮ ಧಾರಾವಾಹಿಯ ಹೀರೋ ಗಗನ್ ಹಾಗೂ ವೈಷ್ಣವಿ ಜೋಡಿ ಸೂಪರ್ ಎನ್ನುತ್ತಿದ್ದಾರೆ ನೆಟ್ಟಿಗರು.


Click it and Unblock the Notifications











