Actress Nirusha Gowda: 'ಗಂಡ ಹೆಂಡ್ತಿ' ಸೀರಿಯಲ್ ನಟಿ ನಿರುಷಾ ಗೌಡ ನಟನಾ ಜರ್ನಿ ಶುರುವಾಗಿದ್ದೇಗೆ ಗೊತ್ತಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಗಂಡ ಹೆಂಡ್ತಿ'ಯು ವಿಭಿನ್ನ ಕಥಾಹಂದರದ ಮೂಲಕ ಸೀರಿಯಲ್ ವೀಕ್ಷಕರ ಮನ ಸೆಳೆಯುತ್ತಿದೆ. ಮಧ್ಯಾಹ್ನದ ಸಮಯದಲ್ಲಿ ಪ್ರಸಾರವಾಗುತ್ತಿರುವ 'ಗಂಡ ಹೆಂಡ್ತಿ' ಧಾರಾವಾಹಿಯಲ್ಲಿ ನಾಯಕಿ ಸ್ವಾತಿ ಆಗಿ ಅಭಿನಯಿಸುತ್ತಿರುವ ನಿರುಷಾ ಗೌಡ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದುಬಿಟ್ಟಿದ್ದಾರೆ.
ಅಂದ ಹಾಗೇ 'ಗಂಡ ಹೆಂಡ್ತಿ' ಧಾರಾವಾಹಿಯು ಮದುವೆಗೂ ಮೊದಲೇ ತನ್ನ ಪ್ರಿಯಕರನ ಮೋಸಕ್ಕೆ ಬಲಿಯಾಗಿ ಗರ್ಭಿಣಿಯಾಗುವ ಹೆಣ್ಣುಮಗಳ ಕಥೆ. ನಾಯಕಿ ಸ್ವಾತಿ ಹಾಗೂ ನಾಯಕ ಮುರಳಿ ಪ್ರಾಣ ಸ್ನೇಹಿತರು. ಒಬ್ಬರಿಗೊಬ್ಬರು ಏನು ಬೇಕಾದರೂ ಮಾಡುವಂತಹ ಸ್ನೇಹಿತರ ಮಧ್ಯೆ ಯಾವ ಮುಚ್ಚುಮರೆಯೂ ಇರುವುದಿಲ್ಲ.

ನಾಯಕನಿಗೆ ಸಹನಾ ಎನ್ನುವ ಹುಡುಗಿಯ ಜೊತೆಗೆ ಮದುವೆ ನಿಶ್ವಯವಾಗುತ್ತದೆ. ಇತ್ತ ನಾಯಕಿ ಕೂಡಾ ರಾಹುಲ್ ಎನ್ನುವ ಹುಡುಗನನ್ನು ಪ್ರೀತಿಸುತ್ತಿರುತ್ತಾಳೆ. ಆದರೆ ರಾಹುಲ್ ಕೆಟ್ಟವನಾಗಿದ್ದು ನಾಯಕಿಯ ತಂದೆಯ ಮೇಲಿನ ದ್ವೇಷಕ್ಕೆ ನಾಯಕಿಗೆ ಮೋಸ ಮಾಡುತ್ತಾನೆ. ಆಕೆಯನ್ನು ಮೋಸದಿಂದ ಬಲೆಗೆ ಬೀಳಿಸುವ ಆತ ಗರ್ಭಿಣಿಯಾಗುವಂತೆ ಮಾಡುತ್ತಾನೆ.
ಮುಂದೆ ಸ್ವಾತಿಗೆ ಆತ ತನಗೆ ಮೋಸ ಮಾಡಿದ ವಿಚಾರ ಅರಿವಾಗುತ್ತದೆ. ಆತನನ್ನು ಕನ್ವಿನ್ಸ್ ಮಾಡಬೇಕು ಎಂದು ಅಂದುಕೊಳ್ಳುವಾಗ ಆತ ಆಕ್ಸಿಡೆಂಟ್‌ನಲ್ಲಿ ಸಾಯುತ್ತಾನೆ. ಇತ್ತ ಸ್ನೇಹಿತೆಯ ಜೀವ ರಕ್ಷಣೆಗಾಗಿ ಮುರಳಿ ಆಕೆಯನ್ನು ಮದುವೆಯಾಗಿರುವ ನಾಟಕವಾಡುತ್ತಾನೆ. ಅಸಲಿಗೆ ಆತ ತಾಳಿಯೇ ಕಟ್ಟಿರುವುದಿಲ್ಲ. ಆದರೆ ಜೀವದ ಸ್ನೇಹಿತೆಯನ್ನು ರಕ್ಷಿಸುತ್ತಾನೆ.

ನಿರುಷಾಗೆ ಮೊದಲ ಸೀರಿಯಲ್ ಅಲ್ಲ
ಸ್ವಾತಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ನಿರುಷಾಗೆ ಇದು ಮೊದಲ ಧಾರಾವಾಹಿಯಲ್ಲ. ಇದಕ್ಕಿಂತ ಮೊದಲು ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಅಮ್ಮನ ಮದುವೆ" ಧಾರಾವಾಹಿಯಲ್ಲಿ ನಾಯಕಿ ನವಮಿ ಆಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು ನಿರುಷಾ ಗೌಡ.
ಮಾಡೆಲ್ ಆಗಿಯೂ ಮೋಡಿ
ನಟನೆಗೆ ಪಾದಾರ್ಪಣೆ ಮಾಡುವ ಮೂಲಕ ಮಾಡೆಲಿಂಗ್ ಲೋಕದಲ್ಲಿಯೂ ಕಮಾಲ್ ಮಾಡಿದ್ದರು ನಿರುಷಾ ಗೌಡ. ಕೆಲವೊಂದು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿಯೂ ನಿರುಷಾ ಗೌಡ ಕಾಣಿಸಿಕೊಂಡಿದ್ದು ಫೋಟೋಶೂಟ್ ಮೂಲಕವೂ ಸದ್ದು ಮಾಡುತ್ತಿದ್ದಾರೆ. ಕೇವಲ ವೆಸ್ಟರ್ನ್ ಮಾತ್ರವಲ್ಲದೇ ಟ್ರೆಡಿಶನಲ್ ಲುಕ್ ನಲ್ಲಿಯೂ ನಿರುಷಾ ಗೌಡ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದು ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications











