ಬಿಗ್ ಬಾಸ್ ಭವ್ಯಾ ಗೌಡ ಮತ್ತು ಗೋಲ್ಡನ್ ಗರ್ಲ್ ಅಮೂಲ್ಯ ನಡುವೆ ಇರುವ ಸಂಬಂಧವೇನು ?

ಗೀತಾ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಪರಿಚಯವಾದವರು ಭವ್ಯಾ ಗೌಡ. ಮೊದಲ ಧಾರಾವಾಹಿಯಲ್ಲಿಯೇ ತಮ್ಮ ಅಭಿನಯದಿಂದ ಜನಮನ ಗೆದ್ದ ಭವ್ಯಾ ಗೌಡ ಬಿಗ್ ಬಾಸ್‌ ಕನ್ನಡ ಕಾರ್ಯಕ್ರಮದ ಹನ್ನೊಂದನೇ ಅಧ್ಯಾಯದ ಮೊದಲ ಸ್ಫರ್ಧಿ ಕೂಡ ಹೌದು. ಬಿಗ್ ಬಾಸ್ ಮನೆಯಲ್ಲಿ 117 ದಿನಗಳ ಕಾಲ ಇದ್ದ ಹೆಗ್ಗಳಿಕೆ ಇವರದ್ದು. ಇಂಥಾ ಭವ್ಯಾ ಗೌಡ ಮತ್ತು ಕನ್ನಡ ಚಿತ್ರರಂಗದ ಗೋಲ್ಡನ್ ಗರ್ಲ್ ಅಮೂಲ್ಯ ನಿಜ ಜೀವನದಲ್ಲಿ ಸಂಬಂಧಿಕರು ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ.

ಹೌದು, ಅಸಲಿಗೆ ಬಿಗ್ ಬಾಸ್ ಮನೆಯಲ್ಲಿ ಕೊನೆಯ ಹಂತಕ್ಕೆ ಭವ್ಯಾ ಗೌಡ ಬಂದಾಗ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಭವ್ಯಾ ಗೌಡ ಅವರ ಪರ ಅಭಿಯಾನ ಮಾಡಿದ್ದರು. ಭವ್ಯಾ ಗೌಡಗೆ ನಿಮ್ಮ ಅಮೂಲ್ಯವಾದ ಮತವನ್ನು ಹಾಕಿ ಎಂದು ಮನವಿಯನ್ನು ಮಾಡಿಕೊಂಡಿದ್ದರು. ಆ ಪೈಕಿ ಅಮೂಲ್ಯ ಕೂಡ ಇದ್ದರು. ಹೀಗಾಗಿಯೇ ಅನೇಕರು ಅಮೂಲ್ಯ ಮತ್ತು ಭವ್ಯಾ ಗೌಡ ನಡುವೆ ಇರುವ ಸಂಬಂಧವೇನು ಎಂದು ತಲೆ ಕೆಡಿಸಿಕೊಂಡಿದ್ದರು. ಗೂಗಲ್‌ಗೆ ಕೂಡ ಈ ಪ್ರಶ್ನೆಯನ್ನು ಕೇಳುತ್ತಿದ್ದರು. ಈ ಪ್ರಶ್ನೆಗೆ ಈಗ ಭವ್ಯಾ ಗೌಡ ಅವರೇ ಉತ್ತರ ನೀಡಿದ್ದಾರೆ. ಅಮೂಲ್ಯ ನನ್ನ ಸಂಬಂಧಿಕರು ಎಂದು ಹೇಳಿದ್ದಾರೆ.

Do you know the connection between Bigg Boss Kannada 11 fame Bhavya Gowda and actress Amulya

ಹೌದು, ನ್ಯೂಸ್ ಫಸ್ಟ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಭವ್ಯಾ ಗೌಡ ಅಮೂಲ್ಯ ಅಕ್ಕನ ಪತಿ ಜಗದೀಶ್ ಅಣ್ಣ ನನಗೆ ಸಂಬಂಧದಲ್ಲಿ ದೊಡ್ಡಪ್ಪನ ಮಗ ಆಗಬೇಕು, ಹೀಗಾಗಿ ಸಂಬಂಧದದಲ್ಲಿ ನನಗೆ ಅಮೂಲ್ಯ ಅತ್ತಿಗೆ ಆಗಬೇಕು ಎಂದು ಹೇಳಿದ್ದಾರೆ.

ಅಮೂಲ್ಯ ಅಕ್ಕ ಮೊದಲಿಂದ ನನಬೆ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದಿರುವ ಭವ್ಯಾ ಗೌಡ ಯಾವುದೇ ವಿಚಾರ ಇದ್ದರೂ ನಮ್ಮ ಅನುಮಾನಗಳನ್ನು ಅವರು ದೂರ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ. ಹಾಗೇ ಮಾಡು ಹೀಗೆ ಮಾಡು ಎಂದು ನನಗೆ ಅವರು ಸಲಹೆ ನೀಡಿದ್ದು ಇದೆ ಎಂದಿರುವ ಭವ್ಯಾ ಗೌಡ ನಿಮ್ಮ ಮನೆಗೆ ನೀವೆ ಗಂಡು ಮಕ್ಕಳು ಎಂದು ಅಮೂಲ್ಯ ಅಕ್ಕ ತುಂಬಾ ಸಲ ಹೇಳಿದ್ದಾರೆ ಎಂದು ನೆನಪು ಮಾಡಿಕೊಂಡಿದ್ದಾರೆ. ಜಗದೀಶ್ ಅಣ್ಣ ಮತ್ತು ಅಮೂಲ್ಯ ಅಕ್ಕ ನಮ್ಮ ಕುಟುಂಬಕ್ಕೆ ತುಂಬಾನೇ ಆಪ್ತರು ಎಂದು ಹೇಳಿದ್ದಾರೆ.

ಅಂದ್ಹಾಗೇ ಭವ್ಯಾ ಗೌಡ ಬಿಗ್ ಬಾಸ್ ಮನೆಯಲ್ಲಿದ್ದಾಗ ಅಮೂಲ್ಯ ಅವರ ಪತಿ ಜಗದೀಶ್ ಆರ್ ಚಂದ್ರ ನನಗೆ ಭವ್ಯಾ ಗೌಡ ತಂಗಿ ಆಗಬೇಕು ಧಾರಾವಾಹಿ ಇರಬಹುದು ಬಿಗ್ ಬಾಸ್ ಶೋ ಇರಬಹುದು ತನ್ನ ಶ್ರಮದಿಂದಲೇ ಭವ್ಯಾ ಇಲ್ಲಿಯವರೆಗೆ ಬಂದಿದ್ದಾಳೆ ಎಂದು ಹೇಳಿದ್ದರು. ಬಿಗ್ ಬಾಸ್ ಶೋನಲ್ಲಿ ಮಹಿಳೆ ಗೆದ್ದು ತುಂಬಾ ಸಮಯ ಆಯ್ತು ಈಗ ಭವ್ಯಾ ಈ ಕಪ್ ಗೆಲ್ಲಬೇಕು ಎನ್ನುವುದು ನನ್ನ ಆಶಯ, ನಿಮ್ಮ ಆಶೀರ್ವಾದ ಆಕೆಯ ಮೇಲೆ ಸದಾ ಇರಲಿ ಭವ್ಯಾಗೆ ನಿಮ್ಮ ಮತ ಹಾಕಿ ಎಂದು ಮನವಿಯನ್ನು ಮಾಡಿಕೊಂಡಿದ್ದರು.

ಇನ್ನು ಈ ಕುರಿತು ಮಾತನಾಡಿದ್ದ ಅಮೂಲ್ಯ ಭವ್ಯಾ ಅವರನ್ನು ನಾನು 08 ವರ್ಷಗಳಿಂದ ನೋಡುತ್ತಿದ್ದೇನೆ, ಜಗದೀಶ್ ಅವರನ್ನು ಮದುವೆಯಾದ ನಂತರ ಅವರ ಪರಿಚಯ ಆಯ್ತು, ಭವ್ಯಾ ಗೌಡ ಸಹೋದರರಿಯರು ಜೀವನದಲ್ಲಿ ತುಂಬಾ ಫೋಕಸ್ ಆಗಿದ್ದು ಸಾಕಷ್ಟು ಶ್ರಮ ವಹಿಸುತ್ತಾರೆ ಎಂದು ಹೇಳಿದ್ದರು. ಮನೆಗೆ ಶಕ್ತಿ ಆಗಬೇಕು ಎನ್ನುವ ಆಸೆ ಹೊಂದಿದ್ದಾರೆ. ಇವರ ಈ ಆಸೆ ನೆರವೇರಲಿ ನನ್ನ ಕಡೆಯಿಂದ ಶುಭವಾಗಲಿ ಎಲ್ಲರೂ ನಿಮ್ಮ ಮತ ಭವ್ಯಾ ಗೌಡ ಅವರಿಗೆ ಹಾಕಿ ಎಂದು ಮನವಿಯನ್ನು ಮಾಡಿಕೊಂಡಿದ್ದರು ಅಮೂಲ್ಯ.

More from Filmibeat

Read more about: bigg boss biggboss tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X