Bigg Boss: ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳ ಇನ್‌ಸ್ಟಾಗ್ರಾಂ ಖಾತೆಯಲ್ಲಿರೋ ಫಾಲೋವರ್ಸ್ ಎಷ್ಟು?
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'. ಯಶಸ್ವಿ ಒಂಭತ್ತು ಸೀಸನ್‌ಗಳನ್ನು ಪೂರೈಸಿರುವ ಬಿಗ್ ಬಾಸ್ ನ ಹೊಸ ಸೀಸನ್ ಅರ್ಥಾತ್ ಸೀಸನ್ 10 ಈಗಾಗಲೇ ಆರಂಭಗೊಂಡಿದೆ. ಇದೇ ಅಕ್ಟೋಬರ್ 8 ರಂದು ಆರಂಭವಾದ ಈ ಸೀಸನ್ 60 ಕ್ಕೂ ಹೆಚ್ಚು ದಿನಗಳು ಪೂರೈಸಿದೆ. 19 ಜನರು ಸ್ಪರ್ಧಿಗಳಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದು ಅದರಲ್ಲಿ ಆರು ಜನರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
ಇನ್ನು ಬಿಗ್ ಬಾಸ್ ಮೂಲಕ ಕಿರುತೆರೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ನಟ ನಟಿಯರು ಸೋಶಿಯಲ್ ಮೀಡಿಯಾದಲ್ಲಿಯೂ ಕೂಡಾ ಸಖತ್ ಸದ್ದು ಮಾಡುತ್ತಿದ್ದಾರೆ. ಹೌದು, ಬಿಗ್ ಬಾಸ್ ಸ್ಪರ್ಧಿಯಾಗಿರುವ ಇವರು ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ.

ನಮ್ರತಾ ಗೌಡ
ಬಾಲನಟಿಯಾಗಿ ಕಿರುತೆರೆಗೆ ಕಾಲಿಟ್ಟು ನಟಿಯಾಗಿ ಭಡ್ತಿ ಪಡೆದಿರುವ ನಟಿ ನಮ್ರತಾ ಗೌಡ. ಇದೀಗ ಬಿಗ್ ಬಾಸ್ ಸ್ಪರ್ಧಿಯಾಗಿ ಗಮನ ಸೆಳೆದಿರುವ ನಮ್ರತಾ ಗೌಡ ಅವರು ಇನ್‌ಸ್ಟಾಗ್ರಾಂನಲ್ಲಿ ಹೊಂದಿರುವ ಫಾಲೋವರ್ಸ್ ಸಂಖ್ಯೆ 9 ಲಕ್ಷದ 18 ಸಾವಿರ ಫಾಲೋವರ್ಸ್.

ಸಂಗೀತಾ ಶೃಂಗೇರಿ
'ಹರಹರ ಮಹಾದೇವ' ಧಾರಾವಾಹಿಯ ಸತಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಸಂಗೀತಾ ಶೃಂಗೇರಿ ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಮರಳಿರುವ ಈಕೆ 4 ಲಕ್ಷ 51 ಸಾವಿರ ಫಾಲೋವರ್ಸ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹೊಂದಿದ್ದಾರೆ.

ತನಿಷಾ ಕುಪ್ಪಂಡ
ನೆಗೆಟಿವ್ ಪಾತ್ರದ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿರುವ ನಟಿ ತನಿಷಾ ಕುಪ್ಪಂಡ ಅವರು ಹಿರಿತೆರೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್‌ನಲ್ಲಿಯೂ ಸದ್ದು ಮಾಡುತ್ತಿರುವ ಈಕೆ ಬರೋಬ್ಬರಿ 2 ಲಕ್ಷ 44 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.

ವಿನಯ್ ಗೌಡ
'ಹರಹರ ಮಹಾದೇವ' ಧಾರಾವಾಹಿಯ ಶಿವ ಆಗಿ ನಟಿಸಿ ಕರುನಾಡಿನಾದ್ಯಂತ ಮನೆ ಮಾಡಿರುವ ಹ್ಯಾಂಡ್‌ಸಮ್ ನಟನ ಹೆಸರು ವಿನಯ್ ಗೌಡ. ಪಾಸಿಟಿವ್ ಪಾತ್ರದ ಜೊತೆಗೆ ನೆಗೆಟಿವ್ ಪಾತ್ರದ ಮೂಲಕವೂ ಕಿರುತೆರೆಯಲ್ಲಿ ಸೈ ಎನಿಸಿಕೊಂಡಿದ್ದಾರೆ ವಿನಯ್ ಗೌಡ. ಸದ್ಯ ಬಿಗ್ ಬಾಸ್‌ನಲ್ಲಿಯೂ ಸಖತ್ ಸದ್ದು ಮಾಡುತ್ತಿರುವ ವಿನಯ್ ಗೌಡ 1 ಲಕ್ಷ 19 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.

ಕಾರ್ತಿಕ್ ಮಹೇಶ್
ಇನ್ನು ಈ ಸೀಸನ್‌ನಲ್ಲಿ ಉತ್ತಮವಾದ ಸ್ಪರ್ಧಿ ಎಂದು ಗುರುತಿಕೊಂಡಿರುವ ಕಾರ್ತಿಕ್ ಮಹೇಶ್ ಅವರು ಕೂಡಾ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದ ನಟ. ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿರುವ ಕಾರ್ತಿಕ್ ಮಹೇಶ್ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಾತ್ರವಲ್ಲ ಅವರು ಇನ್ ಸ್ಟಾಗ್ರಾಂನಲ್ಲಿ 1 ಲಕ್ಷ 36 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.
ಇನ್ನು ಉಳಿದಂತೆ 'ಸಿಂಪಥಿ ಸ್ಟಾರ್' ಎಂದು ಗುರುತಿಕೊಂಡಿರುವ ಡ್ರೋನ್ ಪ್ರತಾಪ್ ಅವರು 4 ಲಕ್ಷ 52 ಸಾವಿರ ಫಾಲೋವರ್ಸ್, ಕಿರುತೆರೆ ನಟಿ ಸಿರಿ ಅವರು 53.9 ಸಾವಿರ, ಮೈಕೆಲ್ ಅಜಯ್ 2 ಲಕ್ಷ 12 ಸಾವಿರ ಫಾಲೋವರ್ಸ್, ವರ್ತೂರು ಸಂತೋಷ್ 33 ಸಾವಿರ ಫಾಲೋವರ್ಸ್, ತುಕಾಲಿ ಸಂತು 12.7 ಸಾವಿರ ಫಾಲೋವರ್ಸ್, ಅವಿನಾಶ್ ಶೆಟ್ಟಿ 17.4 ಸಾವಿರ ಫಾಲೋವರ್ಸ್ ಹಾಗೂ ಪವಿ 122 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.


Click it and Unblock the Notifications











