'ಭಾರ್ಗವಿ ಎಲ್‌ಎಲ್‌ಬಿ' ನಟಿ ರಾಧಾ ಭಗವತಿಗೆ ಲವ್ ಬ್ರೇಕಪ್ ಕಲಿಸಿದ ಪಾಠವೇನು?
ಮಲ್ಲಿ ಎಂದರೆ ಎಲ್ಲರ ಕಣ್ಣು ಹೋಗುವುದು 'ಅಮೃತಧಾರೆ' ಧಾರಾವಾಹಿಯತ್ತ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ಮಲ್ಲಿ ಎಂಬ ಪಾತ್ರದ ಮೂಲಕ ಜನಮನದಲ್ಲಿ ಜಾಗ ಮಾಡಿಕೊಂಡಿರುವ ನಟಿ ರಾಧಾ ಭಗವತಿ ಇದೀಗ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿ ಮೂಲಕ ಹೆಚ್ಚಿನ ಅಭಿಮಾನಿಗಳನ್ನು ಗಳಿಸುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಮೃತಧಾರೆ' ಧಾರಾವಾಹಿಯಲ್ಲಿ ಮಲ್ಲಿಯಾಗಿ ಅಭಿನಯಿಸುತ್ತಿದ್ದ ರಾಧಾ ಭಗವತಿ ಅವರು ಇದೀಗ ಆ ಪಾತ್ರದಿಂದ ಹೊರಬಂದು 'ಭಾರ್ಗವಿ ಎಲ್‌ಎಲ್‌ಬಿ' ಧಾರವಾಹಿಯಲ್ಲಿ ನಾಯಕ ನಟಿ ಭಾರ್ಗವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಕಾವ್ರೇ ಅಕ್ಕಾವ್ರೆ ಎನ್ನುತ್ತಾ ಭೂಮಿಕಾ ಅವರ ಹಿಂದೆ ಓಡಾಡುತ್ತಿದ್ದ ಮೃಧು ಮನಸ್ಸಿನ ಮುಗ್ದ ಹಳ್ಳಿ ಹುಡುಗಿ ಮಲ್ಲಿಯ ಪಾತ್ರದಿಂದ ನೇರ, ಧೈರ್ಯಶಾಲಿ, ಯಾವುದಕ್ಕೂ ಅಂಜದ ಭಾರ್ಗವಿ ಎಂಬ ಪಾತ್ರಕ್ಕೆ ಜೀವ ತುಂಬುತ್ತಿರುವ ರಾಧಾ ಭಗವತಿ ತಮ್ಮ ಅದ್ಭುತ ಅಭಿನಯಕ್ಕೆ ಬಹಳಷ್ಟು ಜನ ಮೆಚ್ಚುಗೆ ಪಡೆಯುತ್ತಿದ್ದಾರೆ.

ಅಂದ ಹಾಗೆ ಇತ್ತೀಚೆಗೆ ಮಿಸ್ಟರ್ ಡಿ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನ ಇಂಟರ್ ವ್ಯೂನಲ್ಲಿ ಮಾತನಾಡಿದ ನಟಿ ರಾಧಾ ಭಗವತಿ ತಮ್ಮ ವೈಯಕ್ತಿಕ ಜೀವನದ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಗ ತಮಗೆ ಲವ್ ಬ್ರೇಕಪ್ ಆಗಿರುವುದಾಗಿ ಹೇಳಿಕೊಂಡಿರುವ ನಟಿ ರಾಧಾ ಭಗವತಿ, ಬ್ರೇಕಪ್‌ನಿಂದ ನಾನು ಜೀವನದಲ್ಲಿ ಬಹಳ ದೊಡ್ಡ ಪಾಠವನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಇವರ ನಟನೆಗೆ ಸಂಭಾವನೆ ಎಷ್ಟು ಎಂದು ಕೇಳಿದ್ದಕ್ಕೆ ಮೊದಲಿಗೆ ದಿನಕ್ಕೆ 750 ಸಂಭಾವನೆ ಇತ್ತು. ಈಗಿನ ಸಂಭಾವನೆಯನ್ನು ಹೇಳುವುದಿಲ್ಲ ಎಂದರು. ಈಗ ರಾಧಾ ಭಗವತಿಯವರು ಸಿಂಗಲ್ಲ ಕಮಿಟೆಡ್ ಆಗಿದ್ದಾರಾ? ಎಂಬ ಪ್ರಶ್ನೆಗೆ ನಿಖರವಾದ ಉತ್ತರವನ್ನು ಕೊಡದೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ ಈ ನಟಿ.

ನಟಿ ರಾಧಾ ಭಗವತಿ ಅವರು ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇದ್ದಾರೆ. ನಟಿ ರಾಧಾ ಭಗವತಿ ಅವರು ತುಂಬಾ ಚೆನ್ನಾಗಿ ಹಾಡುತ್ತಾರೆ. ಅವರು ಹಾಡು ಹೇಳಿದ್ದ ವಿಡಿಯೋ ಒಂದನ್ನು ಇತ್ತೀಚಿಗೆ ಪೋಸ್ಟ್ ಮಾಡಿದ್ದರು. ಅದು 2.5 ಮಿಲಿಯನ್ ವ್ಯೂಗಳನ್ನು ಪಡೆದಿತ್ತು .
ಈಗಾಗಲೇ ಬಹಳಷ್ಟು ಪ್ರಾಜೆಕ್ಟ್ ಗಳಲ್ಲಿ ಅಭಿನಯಿಸಿರುವ ಇವರು 'ಅಮೃತಧಾರೆ' ಧಾರಾವಾಹಿಗೂ ಮೊದಲು 'ಉಘೇ ಉಘೇ ಮಾದೇಶ್ವರ' ಧಾರಾವಾಹಿಯಲ್ಲಿ ನಟಿಸಿದ್ದರು. ರಾಮ್ ಜಿ ಅವರ ನಿರ್ದೇಶನದ 'ರಾಮಾಚಾರಿ" ಧಾರಾವಾಹಿಯಲ್ಲಿ ರಾಮಾಚಾರಿ ಸಹೋದರಿಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು ನಟಿ ರಾಧಾ ಭಗವತಿ.
'ವಸಂತ ಕಾಲದ ಹೂಗಳು' ಸಿನಿಮಾದಲ್ಲಿ ನಟಿಸಿದ ಈಕೆ ಹಿರಿತರೆಗೆ ಕಾಲಿಟ್ಟರು. ಈ ಚಿತ್ರದಲ್ಲಿ ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರವನ್ನು ಮಾಡಿದ್ದಾರೆ. ಹೌದು, ಧಾರಾವಾಹಿಗಳಷ್ಟೇ ಅಲ್ಲದೆ ಸಿನಿಮಾದಲ್ಲೂ ನಟಿಸಿರುವ ಈಕೆ ಅಭಿಜಿತ್ ತೀರ್ಥಹಳ್ಳಿಯವರ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಟ ನಿರ್ದೇಶಕ ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರವನ್ನು ಮಾಡಿದ್ದಾರೆ ನಟಿ ರಾಧಾ ಭಗವತಿ. ಸಿನಿಮಾಗಳಷ್ಟೇ ಅಲ್ಲದೆ 'ಬಾನಿಗೊಂದು ತಾರೆ' ಎಂಬ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ರಾಧಾ ಭಗವತಿ ಅಭಿನಯವಷ್ಟೇ ಅಲ್ಲದೆ ಹಾಡಿನಲ್ಲೂ ಸೈ ಅನಿಸಿಕೊಂಡಿರುವುದರಿಂದ ಇವರ ಅಭಿಮಾನಿಗಳು ಹಾಗೂ ನೆಟ್ಟಿಗರು ಬಹಳ ಖುಷಿಪಟ್ಟಿದ್ದಾರೆ. ಇವರ ಕಂಠಸಿರಿಗೆ ಮಾರುಹೋಗಿರುವ ಅಭಿಮಾನಿಗಳು ಆಗಾಗ ಸೋಶಿಯಲ್ ಮೀಡಿಯಾ ಅಕೌಂಟಿನಲ್ಲಿ ಕಾಮೆಂಟ್‌ಗಳ ಮೂಲಕ ನಟಿಗೆ ಹಾಡುಗಳನ್ನು ಹಾಡಿ ಪೋಸ್ಟ್ ಮಾಡಲು ಕೇಳಿಕೊಳ್ಳುತ್ತಿರುತ್ತಾರೆ.
ಅಂದ ಹಾಗೆ ನಟಿ ರಾಧಾ ಭಗವತಿ ಅವರ ಕುಟುಂಬವೇ ಕಲಾವಿದರ ಕುಟುಂಬ. ಇವರ ಅಜ್ಜ ರಂಗಭೂಮಿ ಕಲಾವಿದರಾಗಿದ್ದರು. ಜೊತೆಗೆ ಹರಿಕಥೆ ದಾಸರು ಕೂಡ ಆಗಿದ್ದರು. ಇವರ ತಾಯಿ ಜಾನಪದ ಗೀತೆಗಳ ತುಂಬಾ ಚೆನ್ನಾಗಿ ಹಾಡುತ್ತಾರಂತೆ. ಈ ರೀತಿಯ ಕೌಟುಂಬಿಕ ವಾತಾವರಣದಲ್ಲಿ ಬೆಳೆದಿದ್ದರಿಂದ ರಾಧಾ ಭಗವತಿ ಅವರಿಗೂ ಕಲೆ ಹಾಗೂ ಗಾಯನ ಎಂದರೆ ಬಹಳ ಇಷ್ಟವಂತೆ. ನಟನೆ ಗಾಯನವಷ್ಟೇ ಅಲ್ಲದೆ ಕಂಠ ದಾನವನ್ನು ಮಾಡುವ ಈಕೆ, ಸದ್ಯಕ್ಕೆ 'ಮದುಮಗಳು' ಧಾರಾವಾಹಿಯ ನಾಯಕಿಯ ಪಾತ್ರಕ್ಕೆ ಕಂಠದಾನ ಮಾಡುತ್ತಿದ್ದಾರೆ. ಅಭಿನಯವಷ್ಟೇ ಅಲ್ಲದೆ ಮಾಡಲಿಂಗ್ ಕೂಡ ಮಾಡುವ ರಾಧಾ ಭಗವತಿಯವರಿಗೆ ಸಿನಿ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರನ್ನು ಮಾಡಬೇಕು ಎಂಬ ಆಸೆ ಇದೆಯಂತೆ.


Click it and Unblock the Notifications











