"ಅರೆ ತುಂಬಾ ದಿನವಾಯಿತು, ಹೇಗಿದ್ದೀರಾ?" ಎಂದ 'ಕನ್ನಡತಿ' ರಂಜಿನಿ ರಾಘವನ್; ನೆಟ್ಟಿಗರ ಬೇಡಿಕೆ ಇಟ್ಟಿದ್ದೇನು?

By ಅನಿತಾ ಬನಾರಿ

'ಕನ್ನಡತಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ನಟಿ ರಂಜಿನಿ ರಾಘವನ್ ಇದೀಗ ಅಭಿಮಾನಿಗಳ ಮುಂದೆ ಬಂದಿದ್ದಾರೆ. 'ಕನ್ನಡತಿ' ಧಾರಾವಾಹಿಯಲ್ಲಿ ಅಚ್ಚ ಕನ್ನಡ ಮಾತನಾಡುತ್ತಾ ಕನ್ನಡ ಪ್ರೇಮವನ್ನು ಕರ್ನಾಟಕದುದ್ದಕ್ಕೂ ಸಾರಿದ ನಟಿ ರಂಜಿನಿ ರಾಘವನ್ ಅವರು ಸೋಶಿಯಲ್ ಮೀಡಿಯಾದಿಂದ ಸ್ವಲ್ಪ ದೂರವೇ ಉಳಿದಿದ್ದಾರೆ.

ಸಿನಿಮಾ, ಧಾರಾವಾಹಿ, ಕಥೆ, ಸಾಹಿತ್ಯ ಪ್ರೊಡಕ್ಷನ್ ಡೈರೆಕ್ಷನ್ ಎಂಬಿತ್ಯಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಯುವ ನಟಿ ರಂಜಿನಿಯವರು ಇದೀಗ ಸೋಶಿಯಲ್ ಮೀಡಿಯಾ ಕಡೆಗೆ ಒಂದು ಇಣುಕು ಹಾಕಿದ್ದಾರೆ.

Do you know what actress Ranjani Raghavan said on Instagram

ಹೌದು ಇನ್‌ಸ್ಟಾಗ್ರಾಂನಿಂದ ತುಸು ದೂರವೇ ಉಳಿದಿರುವ ನಟಿ ರಂಜಿನಿ ರಾಘವನ್ ಅವರು ಬಹಳ ಅಪರೂಪಕ್ಕೆ ಇನ್‌ಸ್ಟಾಗ್ರಾಂ ಕಡೆ ತಲೆ ಹಾಕಿದ್ದು, ವಿಶೇಷ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. "ಅರೆ ಎಲ್ಲರೂ ಹೇಗಿದ್ದೀರಿ? ತುಂಬಾ ದಿನವಾಯಿತು ನಿಮ್ಮನ್ನು ನೋಡಿ" ಎಂದೇ ತಮ್ಮ ಮಾತು ಶುರು ಮಾಡಿರುವ ರಂಜಿನಿ ಅವರು ತಾವು ಇತ್ತೀಚೆಗಷ್ಟೇ ಪಡೆದಿರುವ ಪ್ರಶಸ್ತಿಯೊಂದರ ಬಗ್ಗೆ ಹೇಳಿಕೊಂಡಿದ್ದಾರೆ.

ಅಂದಹಾಗೆ, ನಟಿ ರಂಜಿನಿ ರಾಘವನ್ ಅವರು ಇಂದು ಒಬ್ಬ ನಟಿಯಾಗಷ್ಟೇ ಅಲ್ಲದೆ ಸಾಹಿತಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. 'ಕಥೆ ಡಬ್ಬಿ' ಎಂಬ ಇವರ ಮೊದಲ ಕಥಾ ಸಂಕಲನದ ನಂತರ 'ಸ್ವೈಪ್ ರೈಟ್' ಎಂಬ ಕಾದಂಬರಿಯು ಹೊರಬಂದಿದೆ. ಸಿಹಿಸುದ್ದಿ ಇರುವುದೇ ಇಲ್ಲಿ! ನಟಿ, ಬರಹಗಾರ್ತಿ ರಂಜಿನಿ ರಾಘವನ್ ಅವರಿಗೆ ಕರ್ನಾಟಕ ಕನ್ನಡ ಬರಹಗಾರ ಹಾಗೂ ಪ್ರಕಾಶಕ ಸಂಘದ ವತಿಯಿಂದ ಒಂದು ಪ್ರಶಸ್ತಿ ದೊರಕಿದೆ. ಹೌದು, 'ಯುವ ಸಾಹಿತ್ಯ ರತ್ನ' ಪ್ರಶಸ್ತಿ ಪಡೆದಿರುವ ನಟಿ ರಂಜನಿ ರಾಘವನ್ ಅವರು ಈ ಬಗ್ಗೆ ತಮ್ಮ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Do you know what actress Ranjani Raghavan said on Instagram

ಪ್ರಶಸ್ತಿಯೊಂದಿಗಿನ ಒಂದೆರಡು ವಿಡಿಯೋ ಹಾಗೂ ಫೋಟೋವನ್ನು ಶೇರ್ ಮಾಡಿರುವ ನಟಿ ರಂಜಿನಿ ರಾಘವನ್ ಅವರು, ಸೀರೆ ಉಟ್ಟು, ಪ್ರಶಸ್ತಿ ತಮ್ಮ ಕೈಯಲ್ಲಿ ಇಟ್ಟುಕೊಂಡು ಬಹಳ ಚೆನ್ನಾಗಿ ಸಂಭ್ರಮದಲ್ಲಿ ಕಾಣಿಸಿದ್ದಾರೆ. ನಟಿಯ ಈ ಹೊಸ ಬೆಳವಣಿಗೆಗೆ ಸಂತಸಪಟ್ಟಿರುವ ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭ ಹಾರೈಕೆಯ ಮಳೆಯನ್ನೇ ಸುರಿಸಿದ್ದಾರೆ. ಒಂದಷ್ಟು ಜನ "ನಿಮಗೆ ಪ್ರಶಸ್ತಿ ಬಂದಾಗ ನಾವು ನೆನಪಾದ್ವ?!" ಎಂದು ಕಾಲೆಳೆದಿದ್ದಾರೆ. ಮತ್ತೊಂದಿಷ್ಟು ಜನ "ನಿಮ್ಮ ಅಪ್ಡೇಟ್ ಸಿಗೋದೇ ಇಲ್ಲ ಆಗಾಗ ಇನ್‌ಸ್ಟಾಗ್ರಾಂಗೆ ಬರ್ತಾ ಇರಿ" ಎಂಬ ಕೋರಿಕೆಯನ್ನು ಇಟ್ಟಿದ್ದಾರೆ.

ಈ ಪ್ರಶಸ್ತಿ ನನ್ನೆಲ್ಲಾ ಓದುಗರಿಗೆ ಅರ್ಪಣೆ ಎಂದು ಬರೆದು ಕೊಂಡಿರುವ ನಟಿ ರಂಜಿನಿ ರಾಘವನ್ ಅವರಿಗೆ ಓದುಗಾ ಅಭಿಮಾನಿಗಳು ಮತ್ತಷ್ಟು ಬರಹಗಳು ಮುಂಬರಲಿ ಎಂದು ಶುಭ ಹಾರೈಸಿದ್ದಾರೆ. ಒಟ್ಟಿನಲ್ಲಿ ಇದೀಗ ಬರಹ ಹಾಗೂ ಸಿನಿಮಾದಲ್ಲೇ ಬಹಳಷ್ಟು ಬ್ಯುಸಿ ಇರುವ ನಟಿ ರಂಜಿನಿ ನಟ ರಾಘವನ್ ಅವರು ಸದ್ಯಕ್ಕೆ ನಟ ವಿಜಯ್ ರಾಘವೇಂದ್ರ ಅವರೊಂದಿಗೆ "ಸ್ವಪ್ನ ಮಂಟಪ" ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರಕ್ಕೆ ಈಗಾಗಲೇ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದು, ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅಂದಹಾಗೆ ನಟಿ ರಂಜಿನಿ ರಾಘವನ್ ಅವರು ನಟಿಸಿರುವ 'ಕಾಂಗರು' ಎಂಬ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿದ್ದು ಒಂದಾದ ಮೇಲೊಂದು ಚಿತ್ರಗಳಲ್ಲಿ ಬ್ಯುಸಿ ಇರುವ ನಟಿ ಇದೀಗ ಪ್ರಶಸ್ತಿಯನ್ನು ಪಡೆದು ಮತ್ತಷ್ಟು ಸದ್ದು ಮಾಡಿದ್ದಾರೆ.

More from Filmibeat

English summary
Do you know what actress Ranjani Raghavan said on Instagram,
Read more about: actress social media ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X