"ಭೂಮಿ ತಾಯಿಯನ್ನು ಉಳಿಸಿಕೊಳ್ಳಬೇಕು" ಎಂದು ಕರೆ ನೀಡಿದ ಕಿರುತೆರೆ ನಟಿ ಶ್ವೇತಾ ಪ್ರಸಾದ್
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಜಾಹ್ನವಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಚೆಂದುಳ್ಳಿ ಚೆಲುವೆಯ ಹೆಸರು ಶ್ವೇತಾ ಪ್ರಸಾದ್. ಮುಂದೆ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕಿ ಆರಾಧನಾ ಆಗಿ ಮಿಂಚಿದ್ದರು. ತದ ನಂತರ ಈ ನಟಿ 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಗಮನ ಸೆಳೆದಿದ್ದರು.
'ರಾಧೆ ಶ್ಯಾಮ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಶ್ವೇತಾ ಪ್ರಸಾದ್ ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ 'ಕಾಟೇರ'ದಲ್ಲಿ ಫೋರೆನ್ಸಿಕ್ ಆಫೀಸರ್ ಆಗಿ ಮಿಂಚಿದ್ದರು.

ನಟನೆಯ ಹೊರತಾಗಿ ಉದ್ಯಮಿಯಾಗಿ ಕಾಣಿಸಿಕೊಂಡಿರುವ ನಟಿ ಶ್ವೇತಾ ಪ್ರಸಾದ್, ಇದೀಗ ವಿಶ್ವ ಭೂಮಿ ದಿನದಂದು ಭೂಮಿ ತಾಯಿ ಬಗ್ಗೆ ಮಾತನಾಡಿದ್ದಾರೆ.
"ಭೂಮಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಇದೀಗ ನಮ್ಮ ಕರ್ತವ್ಯವಾಗಿದೆ. ನಾವು ಭೂಮಿ ತಾಯಿಯಿಂದ ಎಲ್ಲವನ್ನೂ ಪಡೆದಿದ್ದೇವೆ. ಇದೀಗ ಅವಳನ್ನು ಉಳಿಸಿಕೊಳ್ಳಬೇಕಾದ ಸಮಯ ಬಂದಿದೆ. ನಮ್ಮ ಮೆಟೀರಿಯಲಿಸ್ಟಿಕ್ ಜೀವನದಿಂದ ಹಲವಾರು ರೀತಿಯಲ್ಲಿ ಭೂಮಿ ಹಾಳಾಗುತ್ತಿದೆ" ಎಂದು ಆಕೆ ಹೇಳಿಕೊಂಡಿದ್ದಾರೆ.

ಇದರ ಜೊತೆಗೆ "ಚಿಕ್ಕಂದಿನಿಂದಲೂ ನನಗೆ ಪರಿಸರದ ಜೊತೆ ಒಳ್ಳೆಯ ಒಡನಾಟವಿದೆ. ಮಣ್ಣಿನಲ್ಲಿ ಆಡುವುದು, ಗಿಡ ನೆಡುವುದು, ಗಿಡಗಳಿಗೆ ನೀರು ಹಾಕುವುದು, ಈ ನೆನಪುಗಳು ನನ್ನ ಜೀವನದ ಬೆಸ್ಟ್ ಮೆಮೊರಿಸ್. ನನ್ನ ಕಡೆಯಿಂದ ನಾನು ವಿಶ್ವ ಭೂಮಿ ದಿನದಂದು ರಾತ್ರಿ 8 ರಿಂದ 9ಕ್ಕೆ ಒಂದು ಗಂಟೆಯ ಕಾಲ ಲೈಟ್ಗಳನ್ನು ಆಫ್ ಮಾಡುತ್ತಿದ್ದೇನೆ. ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸಬಹುದು" ಎಂದು ಹೇಳುವ ಮೂಲಕ ಪರಿಸರ ಸಂರಕ್ಷಣೆಗೆ ಕರೆ ನೀಡಿದ್ದರು ನಟಿ ಶ್ವೇತಾ ಪ್ರಸಾದ್.
ಇನ್ನು ಶ್ವೇತಾ ಪ್ರಸಾದ್ ಅವರು ಇತ್ತೀಚೆಗಷ್ಟೇ ಶಾರದಾ ದೇವಿಯಂತೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಅದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿತ್ತು. ಜೊತೆಗೆ ತಮ್ಮ ನೆಚ್ಚಿನ ನಟಿಯ ಹೊಸ ಅವತಾರವನ್ನು ಕಂಡು ನೆಟ್ಟಿಗರು ಫಿದಾ ಕೂಡಾ ಆಗಿದ್ದರು.
ಶ್ವೇತಾ ಪ್ರಸಾದ್ ಅವರು ತಮ್ಮ ಪತಿ ಆರ್ ಜೆ ಪ್ರದೀಪ್ ಅವರ ಜೊತೆ ಸೇರಿ ಪ್ರೊಡಕ್ಷನ್ ಹೌಸ್ ಒಂದನ್ನು ಶುರು ಮಾಡಿದ್ದಾರೆ. 'ಮರ್ಯಾದೆ ಪ್ರಶ್ನೆ' ಎನ್ನುವ ಸಿನಿಮಾವೊಂದು ಅವರ ಪ್ರೊಡಕ್ಷನ್ ಹೌಸ್‌ನಿಂದ ಹೊರಬರಲಿದ್ದು ಅದಕ್ಕೆ ಕಥೆಯನ್ನು ಸ್ವತಃ ಪ್ರದೀಪ್ ಅವರೇ ಬರೆದಿದ್ದಾರೆ.


Click it and Unblock the Notifications











