"ಮಲಗಿರೋ ಮಗು ಕಣ್ತೆರೆದು ತಾಯಿಯನ್ನು ನೋಡಿ ನಗುತ್ತಲ್ಲ ಅದೇ ಸಂಭ್ರಮ": ತಾಯ್ತನದ ಬಗ್ಗೆ ಆಶಿತಾ ಹೇಳಿದ್ದೇನು?

By ಅನಿತಾ ಬನಾರಿ

ಹೌದು, ಕಿರುತೆರೆ ನಟಿ ಆಶಿತಾ ಚಂದ್ರಪ್ಪ ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಅನುಭವಿಸಿದ್ದಾರೆ. ಆಶಿತಾ ಚಂದ್ರಪ್ಪ ತಾಯ್ತನದ ಅನುಭವವನ್ನು ಪಡೆಯುತ್ತಿದ್ದಾರೆ. ತಮ್ಮ ತಾಯ್ತನದ ಅನುಭವ ಹಾಗೂ ಸಂಭ್ರಮವನ್ನು ಈಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಟಿಸಿದ್ದ ಆಶಿತಾ ಚಂದ್ರಪ್ಪ ತದ ನಂತರ ನಟನೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಇದೀಗ ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿರುವ ಆಶಿತಾ ಅವರು ತಾಯ್ತನದ ಅನುಭವದ ಬಗ್ಗೆ ಬಹಳ ಸುಂದರವಾಗಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Do you know what Ashita Chandrappa said when she shared her experience of motherhood?

"ತಾಯಿತನ ಎನ್ನುವುದು ಬಹಳ ವಿಶೇಷವಾದ ಅನುಭವ. ಮಲಗಿರುವ ಮಗು ಕಣ್ಣು ತೆರೆದಾಗ ತಾಯಿಯನ್ನು ನೋಡಿ ನಗುತ್ತದಲ್ಲ ಅದು ಬಹಳ ಸಂಭ್ರಮವನ್ನು ಕೊಡುತ್ತದೆ. ಇವಳು ನನ್ನವಳು ಇವಳಷ್ಟು ನನ್ನನ್ನು ಪ್ರೀತಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಆ ನಗುವಿನ ಹಿಂದಿನ ಭಾವ ಎಂದು ನನಗನಿಸುತ್ತದೆ. ಇವೆಲ್ಲವೂ ಪ್ರತಿಯೊಂದು ಹೆಣ್ಣು ತನ್ನ ಜೀವನದಲ್ಲಿ ಅನುಭವಿಸಬೇಕಾದ ಅತ್ಯಮೂಲ್ಯ ಭಾವ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ ಆಶಿತಾಚಂದ್ರಪ್ಪ.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಆಶಿತ ಚಂದ್ರಪ್ಪ ಅವರು ತಮ್ಮ ಬರವಣಿಗೆ ಹಾಗೂ ಪದಗಳಿಂದಲೇ ಓದುಗರಿಗೆ ಹೆಚ್ಚು ಹತ್ತಿರವಾಗುತ್ತಿದ್ದಾರೆ. ಇವರ ಈ ಪೋಸ್ಟ್‌ಗೆ ಬಹಳಷ್ಟು ಮೆಚ್ಚುಗೆ ಹಾಗು ಶುಭಾಶಯಗಳ ಸುರಿಮಳೆಯ ಸುರಿದಿದ್ದು, ಫ್ಯಾನ್ಸ್ ಹಾಗೂ ಫಾಲೋವರ್ಸ್ ಸಖತ್ ಖುಷಿಯಾಗಿದ್ದಾರೆ.

ಅಂದ ಹಾಗೆ ಇತ್ತೀಚೆಗೆ ಈ ರೀತಿ ಕಿರುತೆರೆ ಸೆಲಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದ ವಿಶೇಷ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ತೀರ ಸಾಮಾನ್ಯವಾಗಿದೆ. ಈ ರೀತಿ ಅವರ ತಮ್ಮ ಅಭಿಮಾನಿಗಳೊಂದಿಗೆ ಕನೆಕ್ಟ್‌ ಆಗಿರಲು ಬಯಸುತ್ತಿದ್ದಾರೆ. ಸಾಮಾನ್ಯ ಜನರಿಗೂ ಇದರಿಂದ ಬಹಳಷ್ಟು ವಿಚಾರಗಳು ತಿಳಿಯುವಂತಾಗಿದೆ.

Do you know what Ashita Chandrappa said when she shared her experience of motherhood?

'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಾಯಕಿ ಶಾಲಿನಿ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಆಶಿತಾ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಂದರಿ' ಧಾರಾವಾಹಿಯಲ್ಲಿ ಐಎಎಸ್ ಅಧಿಕಾರಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನೀಲಿ'ಯಲ್ಲಿ ರೇಖಾ ಪಾತ್ರಕ್ಕೆ ಜೀವ ತುಂಬಿದ್ದ ಆಶಿತಾ ಅಲ್ಲಿ ಖಳನಾಯಕಿಯಾಗಿ ಮಿಂಚಿದರು.

ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ಅವನಿಯಾಗಿ ನಟಿಸಿದ್ದ ಈಕೆ ಫ್ಯಾಷನ್ ಸ್ಟೈಲಿಸ್ಟ್ ಆಗಿ ಗುರುತಿಸಿಕೊಂಡ ಬೆಡಗಿ. ಸಿನಿಮಾ ವಿತರಕ ಚಂದ್ರಪ್ಪ ಅವರ ಮಗಳಾಗಿರುವ ಆಶಿತಾ ಅವರು ಆಕಸ್ಮಿಕವಾಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡಾಕೆ. ಸಹಜ ನಟನೆಯ ಮೂಲಕ ಗುರುತಿಸಿಕೊಂಡಿರುವ ಅಶಿತಾ ನಟಿಸಿದ್ದು ಕೇವಲ ನಾಲ್ಕು ಧಾರಾವಾಹಿಗಳಲ್ಲಿ ಅಷ್ಟೇ ಆದರೂ ಇಂದಿಗೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ‌.

More from Filmibeat

English summary
Television actress Ashita Chandrappa says motherhood is a special experience:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X