"ತಾಳಿ, ಕಾಲುಂಗರ ಎರಡನ್ನೂ ಖುಷಿಯಿಂದ ತೊಡುತ್ತೇನೆ"; ಇಸ್ಮಾರ್ಟ್ ಜೋಡಿಯ ಇಂಪನಾ ಜಯರಾಜ್

By ಅನಿತಾ ಬನಾರಿ

ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಗಾಯಕಿ ಇಂಪನಾ ಜಯರಾಜ್ ಎಲ್ಲರಿಗೂ ಗೊತ್ತು. 2021ರಲ್ಲಿ ನಟ ಅಜಿತ್ ಜಯರಾಜ್ ಅವರನ್ನು ಮದುವೆಯಾದರು. ನಂತರ 'ಇಸ್ಮಾರ್ಟ್ ಜೋಡಿ' ಎಂಬ ರಿಯಾಲಿಟಿ ಶೋ ಮೂಲಕ ಈ ಜೋಡಿ ಬಹಳಷ್ಟು ಫೇಮಸ್ ಆದರು. ಸದ್ಯಕ್ಕೆ ಈ ಜೋಡಿಗೆ ಬಹಳ ದೊಡ್ಡ ಫ್ಯಾನ್ ಬೇಸ್ ಇದೆ ಅಂದರೆ ತಪ್ಪಾಗಲ್ಲ.

ಗಾಯಕಿ ಇಂಪನಾ ಜಯರಾಜ್ ಅವರು ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟಿವ್ ಇದ್ದು, ಇದೀಗ ತಮ್ಮ ಮದುವೆ ವಿಚಾರವಾಗಿ ಒಂದು ಪೋಸ್ಟನ್ನು ಹಾಕಿಕೊಂಡಿದ್ದಾರೆ. ತಾಳಿ, ಕಾಲುಂಗರದ ಬಗ್ಗೆ ಈಕೆ ಮಾತನಾಡಿರುವ ಈ ಪೋಸ್ಟ್ ಸದ್ಯಕ್ಕೆ ಬಹಳ ವೈರಲ್ ಆಗುತ್ತಿದೆ.

Do you know what Impana Jayaraj said about marriage tradition

"ಮದುವೆಯಾದ ಮೇಲೆ ನಿಮಗೆ ವೃತ್ತಿ ಜೀವನಕ್ಕೆ ತೊಂದರೆ ಆಯ್ತಾ? ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನ ಹೇಗೆ ನಡೆಯುತ್ತಿದೆ ಎಂಬೆಲ್ಲಾ ಪ್ರಶ್ನೆಗಳನ್ನು ನನಗೆ ಆಗಾಗ ಅಭಿಮಾನಿಗಳು ಕೇಳುತ್ತಿರುತ್ತಾರೆ. ಅದಕ್ಕೆ ಉತ್ತರ ಇಲ್ಲಿದೆ. ಮದುವೆಯಾದ ಮೇಲೆ ನಾನು ಹೆಚ್ಚು ಖುಷಿಯಿಂದ ಇದ್ದೇನೆ" ಎಂದಿದ್ದಾರೆ.

ಇದರ ಜೊತೆಗೆ "ಗ್ಲಾಮರ್ ಜಗತ್ತಿನಲ್ಲಿ ಎಷ್ಟೋ ಜನ ನಟ, ನಟಿಯರು ತಾವು ಮದುವೆಯಾಗಿರುವುದನ್ನೇ ಮುಚ್ಚಿಡುತ್ತಾರೆ. ಅದರಲ್ಲೂ ಇತ್ತೀಚೆಗೆ ತಾಳಿ ಹಾಗೂ ಕಾಲುಂಗುರವನ್ನು ಹಾಕದೆ ಇರುವುದೇ ಹೆಚ್ಚಿನ ಟ್ರೆಂಡ್ ಆಗಿಬಿಟ್ಟಿದೆ. ಆದರೆ ನಾನೆಂದು ಆ ತಪ್ಪನ್ನು ಮಾಡುವುದಿಲ್ಲ. ತಾಳಿ ಹಾಗೂ ಕಾಲುಂಗುರವನ್ನು ನಾನು ಬಹಳ ಖುಷಿಯಿಂದಲೇ ಧರಿಸುತ್ತೇನೆ. ಏಕೆಂದರೆ ನನ್ನ ವೈವಾಹಿಕ ಜೀವನದ ಬಗ್ಗೆ ನನಗೆ ಖುಷಿ ಹಾಗೂ ನೆಮ್ಮದಿ ಇದೆ. ನಾನು ನಟ ಅಜಿತ್ ಜಯರಾಮ್ ಅವರ ಪತ್ನಿ ಎಂದು ಹೇಳಿಕೊಳ್ಳೋಕೆ ನನಗೆ ಬಹಳ ಸಂಭ್ರಮವಿದೆ" ಎಂದಿದ್ದಾರೆ.

"ಮದುವೆ ಆಗಿರುವ ವಿಚಾರ ಸಮಾಜಕ್ಕೆ ತಿಳಿದರೆ ಅಥವಾ ಗ್ಲಾಮರ್ ಜಗತ್ತಿಗೆ ಗೊತ್ತಾದರೆ ನಮಗೆ ಅವಕಾಶಗಳು ಕಮ್ಮಿಯಾಗುತ್ತವೆ ಎಂದು ಭಾವಿಸುವುದು ತಪ್ಪು. ನನ್ನ ಜೀವನದ ಅನುಭವ ಹೇಳುವುದಾದರೆ ನನಗೆ ಮದುವೆಯ ನಂತರ ಗೌರವ ಹೆಚ್ಚಾಗಿದೆ. ಚಿಕ್ಕದಿನಿಂದಲೂ ನನ್ನ ಸುತ್ತಮುತ್ತಲಿನ ಹೆಂಗಸರು ತಾಳಿ ಹಾಗೂ ಕಾಲುಂಗುರವನ್ನು ಧರಿಸುವುದನ್ನು ನಾನು ನೋಡಿ ಬೆಳೆದಿದ್ದೇನೆ. ನನ್ನ ತಾಯಿ ಕೂಡ ತಾಳಿ ಹಾಗೂ ಕಾಲುಂಗರಕ್ಕೆ ಗೌರವ ಕೊಡುವುದನ್ನು ನಾನು ನೋಡಿ ಕಲಿತಿದ್ದೇನೆ. ಯಾವುದೇ ರೀತಿಯ ಬಟ್ಟೆ ಹಾಕಿದರೂ ಅದರ ಅಂದ ಚಂದಕ್ಕೆ ತಾಳಿ ಹಾಗೂ ಕಾಲುಂಗುರವನ್ನು ತೆಗೆದು ಇಡುವ ಅವಶ್ಯಕತೆ ಇಲ್ಲ" ಎಂದು ತಾಳಿ ಹಾಗೂ ಕಾಲುಂಗುರದ ಮಹತ್ವವನ್ನು ಹೇಳಿದ್ದಾರೆ ಗಾಯಕಿ ಇಂಪನಾ ಜಯರಾಜ್.

Do you know what Impana Jayaraj said about marriage tradition

"ನೀವು ನಿಮ್ಮ ತಾಳಿ ಹಾಗೂ ಕಾಲುಂಗುರವನ್ನು ಯಾಕೆ ಹಾಕಬೇಕು ಹೇಗೆ ಹಾಕಬೇಕು ಎಂಬಿತ್ಯಾದಿ ವಿಚಾರಗಳನ್ನು ಹೇಳಲು ನಾನು ಯಾರು ಅಲ್ಲ. ನಾನು ಹೀಗೆ ಮಾಡುತ್ತೇನೆ, ನೀವು ಹೀಗೆ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನೀವೇ ಯೋಚಿಸಿ ನೋಡಿ ನೀವು ಖುಷಿಯಿಂದ ಮದುವೆಯಾಗಿದ್ದೀರಿ ಅಂದ್ಮೇಲೆ ಅದರಲ್ಲಿ ಮುಚ್ಚಿಡುವ ಅವಶ್ಯಕತೆ ಏನು? " ಎಂದು ಪ್ರಶ್ನಿಸಿದ್ದಾರೆ ಗಾಯಕಿ ಇಂಪನಾ.

ಇಂಪನಾ ಅವರ ಈ ಪೋಸ್ಟ್ ಸದ್ಯಕ್ಕೆ ಬಹಳ ವೈರಲ್ ಆಗಿದ್ದು ನೆಟ್ಟಿಗರು ಅಭಿಮಾನಿಗಳು ಹಾಗೂ ಇನ್‌ಸ್ಟಾಗ್ರಾಂ ಫಾಲೋವರ್ಸ್ ಇದನ್ನು ಮೆಚ್ಚಿಕೊಂಡಿದ್ದಾರೆ. ಮಾತು ಎಂದರೆ ಇದು, ಸುಸಂಸ್ಕೃತ ಮನೆತನದಿಂದ ಬಂದವರು ಇಂತಹ ವಿಚಾರಗಳನ್ನು ಪ್ರಮೋಟ್ ಮಾಡಬೇಕು ಎಂದೆಲ್ಲ ಕಮೆಂಟ್‌ಗಳು ಬಂದಿದೆ.

ಅಂದಹಾಗೆ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಬಂದ ಇಂಪನಾ ಹಾಗೂ ಅಜಿತ್ ಜಯರಾಜ್ ಜೋಡಿ ಸೂಪರ್ ಕಪಲ್ ಎಂಬ ಅವಾರ್ಡ್ ಅನ್ನು ಪಡೆದಿದ್ದರು.

More from Filmibeat

English summary
Impana Jayaraj says she is happy to claim to be actor Ajith Jayaraj's wife,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X