ಚಾಮುಂಡೇಶ್ವರಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡ ಮೋನಿಷಾ ಪೊನ್ನು ಹೇಳಿದ್ದೇನು ಗೊತ್ತಾ?

By ಅನಿತಾ ಬನಾರಿ

ಇಂದು ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳದ್ದೇ ದರ್ಬಾರು. ಹಾಡು, ನೃತ್ಯ, ನಾಟಕ ಹೀಗೆ ನಾನಾ ರೀತಿಯ ರಿಯಾಲಿಟಿ ಶೋಗಳು ತಮ್ಮದೇ ಆದ ಸ್ವಂತಿಕೆ ಹಾಗೂ ಕ್ರಿಯಾತ್ಮಕ ಐಡಿಯಾಗಳೊಂದಿಗೆ ತಾ ಮುಂದು ಎಂದು ಕಾಂಪೀಟ್ ಮಾಡುತ್ತಾ ಜನಮನ ಗೆಲ್ಲುತ್ತಿವೆ.ಇಂಥಾ ರಿಯಾಲಿಟಿ ಶೋಗಳ ಪೈಕಿ ಸರಿಗಮಪವೂ ಒಂದು. ಈ ಶೋ ಕನ್ನಡ ಕಿರುತೆರೆ ಪ್ರೇಕ್ಷಕರ ಮೋಸ್ಟ್ ಫೇವರೆಟ್ ರಿಯಾಲಿಟಿ ಶೋಗಳಲ್ಲೊಂದು.

ಜೀ ಕನ್ನಡ ವಾಹಿನಿಯಲ್ಲಿ ವರ್ಷಾನುಗಟ್ಟಲೆಯಿಂದ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋ ಇಂದು ಹಾಡಿಗಷ್ಟೇ ಅಲ್ಲದೆ ತನ್ನದೇ ಆದ ಒಂದಷ್ಟು ಆಚರಣೆಯಿಂದ ಜನಮನ ಗೆದ್ದಿದೆ. ಅಂದಹಾಗೆ ಸರಿಗಮಪ ರಿಯಾಲಿಟಿ ಶೋ ಕಲಾವಿದರಿಗೆ ಅವಕಾಶ ಕೊಡುವುದು ಅಷ್ಟೇ ಅಲ್ಲದೆ, ನಾನಾ ರೀತಿಯ ವೇದಿಕೆ ಕಲ್ಪಿಸಿಕೊಟ್ಟು ಹಾಡುವ ಕಲಾವಿದರನ್ನು ಎಲ್ಲಾ ರೀತಿಯಲ್ಲೂ ತಯಾರಿಸುತ್ತದೆ.

do-you-know-what-monisha-ponnu-said-when-she-appeared-on-television-as-chamundeshwari

ಇತ್ತೀಚಿಗೆ ಒಂದು ವಾರದಿಂದ ಹಿಂದಷ್ಟೇ ಸರಿಗಮಪ ರಿಯಾಲಿಟಿ ಶೋ ಬಹಳ ಚರ್ಚೆಗೆ ಒಳಗಾಯಿತು. ಅದಕ್ಕೆ ಕಾರಣ ತಾಯಿ ಚಾಮುಂಡೇಶ್ವರಿಯ ಅವತಾರದ ಒಂದು ಪರ್ಫಾರ್ಮೆನ್ಸ್. ಕಳೆದ ವಾರ ಸರಿಗಮಪ ರಿಯಾಲಿಟಿ ಶೋನಲ್ಲಿ ಚಂಡಿ ಚಾಮುಂಡಿ ಎಂಬ ಹಾಡನ್ನು ಸ್ಪರ್ಧಿಯೊಬ್ಬಳು ಹಾಡಿದ್ದಳು. ಆಗ ತಾಯಿ ಚಾಮುಂಡೇಶ್ವರಿಯ ಅವತಾರ ತೊಟ್ಟ ಕಲಾವಿದೆ ಒಬ್ಬರು ಆ ಹಾಡಿಗೆ ಸರಿಯಾಗಿ ನೃತ್ಯ ಮಾಡಿದರು. ಇದು ಇಡೀ ಕಾರ್ಯಕ್ರಮಕ್ಕೆ ಅದೆಷ್ಟು ಮೆರುಗು ತಂದುಕೊಟ್ಟಿದೆಂದರೆ ಪ್ರೇಕ್ಷಕರಿಗಂತೂ ಅವಿಸ್ಮರಣೀಯ ಅನುಭವ ನೀಡಿತು ಎಂದರೆ ತಪ್ಪಲ್ಲ.

ಅಂದ ಹಾಗೆ ತಾಯಿ ಚಾಮುಂಡೇಶ್ವರಿಯ ಅವತಾರವನ್ನು ತೊಟ್ಟವರು ನಟಿ ಮೋನಿಷ ಪೊನ್ನು. ಈ ಮೋನಿಷಾ ಪೊನ್ನು ನಟಿ ಅಷ್ಟೇ ಅಲ್ಲ ಡ್ಯಾನ್ಸ್ ಕೊರಿಯೋಗ್ರಾಫರ್ ಕೂಡ ಹೌದು. ಈ ಹಿಂದೆ ಕೆಲ ಧಾರವಾಹಿಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ನಟಿ ಮೋನಿಷಾ ಪೊನ್ನು ನಟಿಸಿದ್ದರೂ ಆಕೆ ಕೊರಿಯೋಗ್ರಾಫರ್ ಆಗಿಯೇ ಹೆಚ್ಚು ಮಿಂಚಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ರಿಯಾಲಿಟಿ ಶೋನಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿರುವ ಇವರು ಸರಿಗಮಪ ರಿಯಾಲಿಟಿ ಶೋ ನಲ್ಲಿ ಪ್ರೇಕ್ಷಕರ ಕಣ್ಮನ ಸೆಳೆದರು.

ರಿಯಾಲಿಟಿ ಶೋನಲ್ಲಿ ಭಕ್ತಿಗೀತೆಗಳ ಒಂದು ಸಂಚಿಕೆಯನ್ನು ನಡೆಸಿದರು. ಅದರಲ್ಲಿ ಗಾಯಕಿ ರಶ್ಮಿ ಎನ್ನುವವರು ಚಂಡಿ ಚಾಮುಂಡಿ ಎಂಬ ಹಾಡನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಹಾಡಿಗೆ ಚಾಮುಂಡಿಯ ಅವತಾರದಲ್ಲಿ ಕಾಣಿಸಿಕೊಂಡವರು ಮೋನಿಷಾ ಪೊನ್ನು. ಈ ಬಗ್ಗೆ ತಮ್ಮ ಅನುಭವವನ್ನು ಸ್ವತಃ ಮೋನಿಷ ಪೊನ್ನು ಅವರೇ ಹಂಚಿಕೊಂಡಿದ್ದಾರೆ.

ನನಗೆ ಜೀ ಕನ್ನಡ ವಾಹಿನಿಯಿಂದ ಈ ರೀತಿ ಒಂದು ಡ್ಯಾನ್ಸ್ ಪರ್ಫಾರ್ಮೆನ್ಸ್ ಮಾಡಬೇಕು ಎಂಬ ಆಫರ್ ಬಂತು. ಮೊದಲಿಗೆ ತಾಯಿ ಚಾಮುಂಡೇಶ್ವರಿಯ ಗೆಟಪ್ ನಲ್ಲಿ ಕಾಣಿಸಿಕೊಳ್ಳಬೇಕು ಎಂದರು. ನಾನು ಖುಷಿಯಿಂದ ಒಪ್ಪಿಕೊಂಡೆ. ನಂತರ ಈ ರೀತಿ ಒಬ್ಬ ಗಾಯಕಿ ಹಾಡುತ್ತಿರುವಾಗಲೇ ನಾನು ಆ ಹಾಡಿಗೆ ಸರಿಯಾಗಿ ಭರತನಾಟ್ಯ ಡ್ಯಾನ್ಸ್ ಮಾಡಬೇಕು ಎಂದರು.

ಒಬ್ಬ ಡ್ಯಾನ್ಸರ್ ಗೆ ಇದಕ್ಕಿಂತ ಒಳ್ಳೆಯ ಅವಕಾಶ ಇದೆಯಾ!? ಬಹಳ ಖುಷಿಯಿಂದಲೇ ನಾನು ಈ ಆಫರ್ ಅನ್ನು ಒಪ್ಪಿಕೊಂಡೆ. ಚಂಡಿ ಚಾಮುಂಡಿ ಹಾಡು ಆರಂಭವಾಗುತ್ತಿದ್ದಂತೆಯೇ ನಾನು ಸ್ಟೇಜ್ ಮೇಲೆ ದೇವಿಯಂತೆ ಕೂತಿದ್ದೆ. ಕ್ರಮೇಣ ಹಾಡಿನ ಮಧ್ಯದಿಂದ ಡ್ಯಾನ್ಸ್ ಮಾಡಲು ಆರಂಭಿಸಿದೆ. ಅಲ್ಲಿನ ಯಾವ ಪ್ರೇಕ್ಷಕರು ನಾನು ಡಾನ್ಸ್ ಮಾಡುತ್ತೇನೆ ಎಂದು ಊಹಿಸಿರಲಿಲ್ಲ. ಅವರೆಲ್ಲರಿಗೂ ಒಮ್ಮೆ ಶಾಕ್ ಆಗಿರಬಹುದು. ಅದೆಷ್ಟೋ ಜನ ಎದ್ದು ನಿಂತು ಕೈ ಮುಗಿದರು. ನನಗೆ ಬಹಳ ರೋಮಾಂಚನ ವಾಗುವಂತಹ ಅನುಭವವದು. ಒಬ್ಬ ಡ್ಯಾನ್ಸರ್ ಆಗಿ ಇಂತಹ ಒಳ್ಳೆಯ ಅವಕಾಶ ನನಗೆ ಬಂದಿದ್ದು ಪುಣ್ಯವೇ ಸರಿ. ಅದರಲ್ಲೂ ತಾಯಿಯ ಅವತಾರವನ್ನು ಶುಕ್ರವಾರದಂದು ಧರಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ಮತ್ತು ಖುಷಿ. ನನಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ ಎಂಬ ಸಮಾಧಾನ ಹಾಗೂ ಸಂತೋಷ ನನಗಿದೆ ಎಂದಿದ್ದಾರೆ ಮೋನಿಷಾ ಪೊನ್ನು.

ಅಂದ ಹಾಗೆ ನಟಿ ಚಾಮುಂಡೇಶ್ವರಿಯ ಅವತಾರದಲ್ಲಿ ಡ್ಯಾನ್ಸ್ ಮಾಡಲು ಆರಂಭಿಸುತ್ತಿದ್ದಂತೆ ಅಲ್ಲಿದ್ದ ಪ್ರೇಕ್ಷಕರೆಲ್ಲ ಒಮ್ಮೆ ರೋಮಾಂಚನಗೊಂಡರು. ಭಕ್ತಿಯಿಂದ ಕೈ ಮುಗಿದರು. ಹಾಡು ನೃತ್ಯ ಈ ರೀತಿ ಕಲೆಯೇ ವೇದಿಕೆ ಮೇಲೆ ವಿಜ್ರಂಭಿಸುತ್ತಿದ್ದಾಗ, ಇದನ್ನು ಕಣ್ತುಂಬಿಸಿಕೊಂಡ ಪ್ರೇಕ್ಷಕರ ಕಣ್ಣುಗಳಲ್ಲಿ ಭಕ್ತಿಯೇ ತುಂಬಿತ್ತು. ಕಿರುತೆರೆ ಪ್ರೇಕ್ಷಕರಿಗೂ ಇದು ಬಹಳ ಇಷ್ಟವಾದ ಎಪಿಸೋಡ್ ಆಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X