"ನನ್ನ ಮೂಗನ್ನು ಪದೇ ಪದೆ ಮುಟ್ಟಿಕೊಳ್ಳುತ್ತೇನೆ"; ತನ್ನ ವಿಚಿತ್ರ ಅಭ್ಯಾಸದ ನಮೃತಾ ಗೌಡ ಹೇಳಿದ್ದೇನು?
ಕನ್ನಡ ಕಿರುತೆರೆಯ 'ಪುಟ್ಟಗೌರಿ' ಧಾರಾವಾಹಿಯ ಹಿಮ, 'ನಾಗಿಣಿ' ಧಾರಾವಾಹಿಯ ಶಿವಾನಿ ಸೇರಿದಂತೆ ಇತ್ತೀಚೆಗಷ್ಟೇ ನಡೆದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ನಮೃತಾ ಗೌಡ ತಮ್ಮ ಅಭ್ಯಾಸವೊಂದರ ಬಗ್ಗೆ ಮಾತನಾಡಿದ್ದಾರೆ.
ಈ ವರ್ಷ ನಡೆದ ಬಿಗ್ ಬಾಸ್ ಸೀಸನ್ 10ರಲ್ಲಿ ನಟ ಕಾರ್ತಿಕ್ ಅವರು ವಿನ್ನರ್ ಆಗಿ ಪ್ರತಾಪ್ ಅವರು ರನ್ನರ್ ಅಪ್ ಆದರು. ಇತರ ಸ್ಪರ್ಧಿಗಳಂತೆ ನಮೃತಾ ಗೌಡ ಅವರು ಸ್ಪರ್ಧಿಸಿರುವ ಈ ಸೀಸನ್‌ನಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ನಮೃತಾ ಅವರು ಎನಿಸಿಕೊಂಡಿದ್ದರು. ಹೆಚ್ಚು ಕಮ್ಮಿ ಕೊನೆಯ ವಾರದವರೆಗೂ ನಮೃತಾ ಅವರು ಬಿಗ್ ಮನೆಯಲ್ಲೇ ಇದ್ದು ಹೊಸ ಅಭಿಮಾನಿಗಳ ಬಳಗವನ್ನು ಪಡೆದಿದ್ದಾರೆ.

ಬಿಗ್ ಬಾಸ್‌ನಿಂದ ನಮೃತಾ ಅವರನ್ನು ಬಹಳ ಸೂಕ್ಷ್ಮವಾಗಿ ನೋಡುವ ಅವಕಾಶ ಪಡೆದ ಪ್ರೇಕ್ಷಕರು ಅವರ ಅಭ್ಯಾಸ ಒಂದನ್ನು ಗಮನಿಸಿದ್ದಾರೆ. ಅದೇನೆಂದರೆ, ನಟಿ ನಮೃತಾ ಗೌಡ ಅವರು ಮಾತನಾಡುವಾಗ ಅಥವಾ ಯಾವುದೇ ರೀತಿಯ ಚಟುವಟಿಕೆಯಲ್ಲಿರುವಾಗಲು ಪದೇ ಪದೆ ಆಗಾಗ ತಮ್ಮ ಮೂಗು ಮುಟ್ಟಿಕೊಳ್ಳುತ್ತಿರುತ್ತಾರೆ. ಈ ವಿಚಾರವನ್ನು ಅವರ ಅಭಿಮಾನಿಗಳು ಪ್ರೇಕ್ಷಕರು ಗಮನಿಸಿದ್ದಾರೆ. ಈ ಬಗ್ಗೆ ನಮೃತಾ ಗೌಡ ಅವರು ಮಾತನಾಡಿದ್ದಾರೆ.
"ನಾನು ಯಾರ ಬಳಿಯಾದರೂ ಮೊದಲ ಬಾರಿ ಮಾತನಾಡುವಾಗ ಅಥವಾ ನರ್ವಸ್ ಆದಾಗ, ಒಮ್ಮೊಮ್ಮೆ ಬೇಜಾರಲ್ಲಿ ಅಥವಾ ಕೋಪದಲ್ಲಿ ಹೀಗೆ ಬೇರೆ ಬೇರೆ ಭಾವನೆಗಳು ನನ್ನಲ್ಲಿ ಮೂಡಿದಾಗ ನಾನು ನನಗೆ ಗೊತ್ತಿಲ್ಲದಂತೆ ಮೂಗು ಮುಟ್ಟಿಕೊಳ್ಳುತ್ತೇನೆ. ಬಹಳ ವರ್ಷದಿಂದ ನನಗೆ ಈ ಅಭ್ಯಾಸವಾಗಿದೆ. ಅದು ನನ್ನೊಳಗಿನ ಟೆನ್ಶನ್‌ನೊಂದಿಗೆ ನಾನು ಪ್ರತಿಕ್ರಿಸುವ ರೀತಿ ಇರಬಹುದು. ನಾನೇ ಗಮನಿಸಿದಂತೆ ನಾನು ತುಂಬಾ ಕಾನ್ಶಿಯಸ್ ಆದಾಗ ನನ್ನ ಮೂಗನ್ನು ಪದೇ ಪದೇ ಮುಟ್ಟಿಕೊಳ್ಳುತ್ತೇನೆ. ಇದರ ಹಿಂದಿನ ಎಕ್ಸಾಟ್ಟ್ ಕಾರಣ ನನಗೆ ಗೊತ್ತಿಲ್ಲ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಟಿ ನಮೃತಾ ಗೌಡ.

"ಮನುಷ್ಯರೆಂದ ಮೇಲೆ ಪ್ರತಿಯೊಬ್ಬರು ಭಿನ್ನ ವಿಭಿನ್ನ. ಹಾಗಾಗಿ ಪ್ರತಿಯೊಬ್ಬರಿಗೂ ಅವರದೇ ಆದ ಆಲೋಚನಾ ಕ್ರಮದಿಂದ ಹಿಡಿದು ಹಾವ ಭಾವಗಳಿರುತ್ತವೆ. ಅಂತೆಯೇ ನನಗೂ ಈ ರೀತಿಯ ಒಂದು ಅಭ್ಯಾಸವಿದೆ. ಮೊದಮೊದಲು ನನಗೂ ಈ ರೀತಿ ಅಭ್ಯಾಸವಿರುವುದು ತಿಳಿದಿರಲಿಲ್ಲ. ಕ್ರಮೇಣ ನನ್ನ ಸುತ್ತಮುತ್ತಲಿನವರು ಅದನ್ನು ನನಗೆ ಹೇಳಿದಾಗ ಅರ್ಥವಾಯಿತು. ಆಗಿಂದ ಮಾತ್ರಕ್ಕೆ ನನಗೆ ಅದನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಎಲ್ಲರಿಗೂ ಅವರದೇ ಆದ ಹಾವಭಾವವಿದ್ದಂತೆ ನನ್ನದು ಇದು ಎಂದು ಸುಮ್ಮನಾಗಿದ್ದೀನಿ" ಎಂದು ನಟಿ ನಮೃತಾ ಗೌಡ ಅವರು ಮಾತಿನ ಮಧ್ಯೆ ಆಗಾಗ ಮೂಗು ಮುಟ್ಟಿಕೊಳ್ಳುವ ತಮ್ಮ ಅಭ್ಯಾಸದ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅಂದ ಹಾಗೆ ನಟಿ ನಮೃತಾ ಗೌಡ ಅವರು ಬಿಗ್ ಬಾಸ್ ನಲ್ಲಿ ಬಹಳಷ್ಟು ಹೆಸರು ಮಾಡಿದ್ದಲ್ಲದೆ, ಬಿಗ್ ಮನೆಯಿಂದ ಹೊರ ಬಂದ ಮೇಲೂ ಹಲವಾರು ಇಂಟರ್ವ್ಯೂಗಳಲ್ಲಿ ಕಾಣಿಸಿಕೊಂಡು ತಮ್ಮ ಜೀವನದ ಬಗ್ಗೆ ಮುಂದಿನ ಗುರಿಯ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಅವರ ಮುಂದಿನ ಪ್ರಾಜೆಕ್ಟ್ ಗಳೇನು ಯಾವ ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ. ಅಥವಾ ಸಿನಿಮಾಗೆ ಹೋಗುವ ಯೋಚನೆಗಳು ಏನಾದರೂ ಇದೆಯಾ ಎಂಬಿತ್ಯಾದಿ ಪ್ರಶ್ನೆಗಳು ಅವರ ಅಭಿಮಾನಿಗಳಲ್ಲಿ ಆಗಾಗ ಮೂಡುತ್ತಲೇ ಇರುತ್ತದೆ. ಅದೆಲ್ಲದಕ್ಕೂ ಉತ್ತರ ಬೇಕೆಂದರೆ ಕಾದು ನೋಡಬೇಕು. ಸದ್ಯಕ್ಕಂತೂ ಯಾವುದೇ ಪ್ರಾಜೆಕ್ಟ್‌ಗಳು ಕೈಯಲ್ಲಿಲ್ಲ ಎಂದು ಇತ್ತೀಚಿಗಷ್ಟೇ ಒಂದು ಇಂಟರ್‌ವ್ಯೂನಲ್ಲಿ ನಮೃತಾ ಹೇಳಿಕೊಂಡಿದ್ದಾರೆ.


Click it and Unblock the Notifications











