'ಗಟ್ಟಿಮೇಳ' ಬಳಿಕ ಸಿನಿಮಾದಲ್ಲಿ ಬ್ಯುಸಿ ನಟಿ ನಿಶಾ ರವಿಕೃಷ್ಣನ್; ಪಾತ್ರದ ಬಗ್ಗೆ ಹೇಳಿದ್ದೇನು?

By ಅನಿತಾ ಬನಾರಿ

'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯಾ ಆಲಿಯಾಸ್ ರೌಡಿಬೇಬಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ನಟಿ ನಿಶಾ ರವಿಕೃಷ್ಣನ್ ಇದೀಗ ಸಿನಿಮಾ ಕಡೆಗೆ ಮುಖ ಮಾಡಿದ್ದಾರೆ. ಹೌದು, 'ಗಟ್ಟಿಮೇಳ' ಧಾರಾವಾಹಿ ಮೂಲಕ ಬಹಳಷ್ಟು ಖ್ಯಾತಿಯನ್ನು ಪಡೆದಿದ್ದ ನಟಿ ನಿಶಾ ರವಿಕೃಷ್ಣನ್ ಇತ್ತೀಚೆಗೆ ಕಿರುತೆರೆಯಿಂದ ಬೆಳ್ಳಿತೆರೆಯತ್ತ ಮುಖ ಮಾಡಿರುವುದು ವಿಶೇಷ.

ಅಮೂಲ್ಯಾ ಅಲಿಯಾಸ್ ರೌಡಿಬೇಬಿ ಪಾತ್ರದ ಮೂಲಕ ಬಹಳಷ್ಟು ಖ್ಯಾತಿ ಪಡೆದಿರುವ ಈಕೆ ಇದೀಗ ಸಿನಿಮಾಗಳತ್ತ ಮುಖ ಮಾಡಿರುವುದು ಮಾತ್ರವಲ್ಲದೇ, ಸಿನಿಮಾ ಪಾತ್ರಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

Do you know what Nisha Ravikrishnan said about the role of Anshu movie

"ಸಿನಿಮಾಗಳಲ್ಲಿ ಸ್ತ್ರೀಯರಿಗೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ. ಪುರುಷ ಪ್ರಧಾನ ಕಥೆಗಳೇ ಇರುವುದರಿಂದ ಹೆಣ್ಣು ಮಕ್ಕಳಿಗೆ ಸಿಗುವ ಪಾತ್ರ ಕಡಿಮೆ. ಹಾಗೂ ಅದರ ಕ್ವಾಲಿಟಿ ತುಂಬಾ ಕಮ್ಮಿ ಇದೆ. ಇದು ಬದಲಾಗಬೇಕು. ಸ್ತ್ರೀ ಪ್ರಧಾನ ಕಥೆಗಳು ಹೆಚ್ಚೆಚ್ಚು ಬರಬೇಕು. ಈ ರೀತಿಯ ಬದಲಾವಣೆಯನ್ನು ನೋಡಲು ಬಹಳಷ್ಟು ಜನ ಕಾಯುತ್ತಿದ್ದಾರೆ." ಎಂದು ನಟಿ ನಿಶಾ ರವಿಕೃಷ್ಣನ್ ಹೇಳಿಕೊಂಡಿದ್ದಾರೆ .

ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇರುವ ಈಕೆ ಇತ್ತೀಚೆಗಷ್ಟೇ 'ಗಟ್ಟಿಮೇಳ' ಧಾರಾವಾಹಿ ಮುಗಿದಾಗ ಕೊನೆಯ ದೃಶ್ಯಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಭಾವುಕರಾಗಿದ್ದರು. ಅದಾದ ಮೇಲೆ ಎಲ್ಲಿ ಹೋದರಪ್ಪ ನಿಶಾ ರವಿಕೃಷ್ಣನ್ ಎಂದು ಯೋಚಿಸುವವರಿಗೆ ಇಲ್ಲಿದೆ ಉತ್ತರ.

ನಟಿ ನಿಶಾ ರವಿಕೃಷ್ಣನ್ ಅವರು ಹೊಸದೊಂದು ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂಶು ಎಂಬ ಸಿನಿಮಾದಲ್ಲಿ ಪಾತ್ರವನ್ನು ಪಡೆದಿರುವ ಈಕೆ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಅಂದ ಹಾಗೆ ಈ ಸಿನಿಮಾವನ್ನು ಚೆನ್ನಕೇಶವ ಎನ್ನುವವರು ನಿರ್ದೇಶಿಸಿದ್ದಾರೆ.

Do you know what Nisha Ravikrishnan said about the role of Anshu movie

"ಅಂಶು ಸಿನಿಮಾ ಭ್ರೂಣ ಹತ್ಯೆ ಬಗ್ಗೆ ಮಾತನಾಡುತ್ತದೆ. ಭಾರತದಲ್ಲಂತೂ ಭ್ರೂಣ ಹತ್ಯೆ ಬಹಳ ಸಾಮಾನ್ಯವಾಗಿದೆ. ಈ ಬಗ್ಗೆ ಮೆಸೇಜ್ ಕೊಡುವಂತಹ ಸಿನಿಮಾ ಇದಾಗಿದ್ದು, ಬಹಳ ಇಂಟರೆಸ್ಟಿಂಗ್ ಆಗಿ ಮೂಡಿ ಬರಲಿದೆ. ಸಿನಿಮಾದ ಮುಖ್ಯ ಸೀನ್ ಒಂದನ್ನು ಕಾರಿನಲ್ಲಿ ಶೂಟ್ ಮಾಡಬೇಕಿತ್ತು. ಅದು ಬಹಳ ಚಾಲೆಂಜಿಂಗ್ ಆಗಿತ್ತು" ಎಂದು ತಮ್ಮ ಪಾತ್ರದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದಾರೆ.

"ನಾನು ಹಲವಾರು ಸಿನಿಮಾ ರೋಲ್‌ಗಳ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ ಯಾವುದೇ ರೋಲ್ ಗಳು ನನಗೆ ಅಷ್ಟು ಹಿಡಿಸಿಲ್ಲ. ಹೆಣ್ಣು ಮಕ್ಕಳಿಗೆ ಸಿನಿಮಾ ಕಥೆಗಳಲ್ಲಿ ಪ್ರಾಧಾನ್ಯತೆ ಇಲ್ಲದಿರುವುದೇ ಸಮಸ್ಯೆ. ಒಳ್ಳೆಯ ಕಥೆ ಬಂದರೆ ಖಂಡಿತ ಸಿನಿಮಾಗಳನ್ನು ಮಾಡಲು ಬಯಸುತ್ತೇನೆ " ಎಂದಿದ್ದಾರೆ ನಿಶಾ ರವಿಕೃಷ್ಣನ್.

ಸಿನಿಮಾ ಜೊತೆ ಜೊತೆಗೆ ಇದೀಗ ನಿಶಾ ರವಿಕೃಷ್ಣನ್ ಅವರು ಹೊಸದೊಂದು ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತಿದೆ. ಯಾವ ಧಾರಾವಾಹಿ ಯಾವ ರೀತಿಯ ಪಾತ್ರ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Nisha Ravikrishnan said that female lead movies should come
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X