ಲವ್ ಸ್ಟೋರಿ ಬಗ್ಗೆ ಮಾತನಾಡಿದ ರಂಜಿತ್, ಭಾವಿಪತ್ನಿ ಮಾನಸ ಹೇಳಿದ್ದೇನು ಗೊತ್ತಾ?

By ಅನಿತಾ ಬನಾರಿ

ಬಿಗ್ ಬಾಸ್ ಸೀಸನ್ 11 ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಸದ್ದು ಮಾಡಿತ್ತು. ಅದರಲ್ಲಿ ರಂಜಿತ್ ಕೂಡ ಒಬ್ಬ ಸ್ಪರ್ಧಿಯಾಗಿದ್ದರು. ಆರಂಭದಲ್ಲಿ ಬಹಳ ಪ್ರಾಮಿಸಿಂಗ್ ಸ್ಪರ್ಧಿಯಾಗಿ ಕಂಡರೂ ಸಹ ರಂಜಿತ್ ಕೆಲವೇ ವಾರಗಳಲ್ಲಿ ಮನೆಯಿಂದ ಹೊರ ಬರಬೇಕಾಯಿತು. ಸಾಮಾನ್ಯವಾಗಿ ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿ ಹೊರ ಬರುತ್ತಾರೆ. ಆದರೆ ರಂಜಿತ್ ಬೇರೆ ಕಾರಣಕ್ಕೆ ಮನೆಯಿಂದ ಹೊರ ಬರಬೇಕಾಯಿತು. ರಂಜಿತ್ ಬಿಗ್ ಮನೆಯಿಂದ ಹೊರ ಬರಬೇಕಾದಾಗ ಮನೆಯ ಎಲ್ಲ ಸ್ಪರ್ಧಿಗಳು ಕಣ್ಣೀರಿಟ್ಟಿದ್ದರು.

ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನಗಳ ಕಾಲ ಇರದಿದ್ದರೂ ಹೊರ ಬರುತ್ತಿದ್ದಂತೆ ರಂಜಿತ್ ನಸೀಬೇ ಬದಲಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ರಂಜಿತ್ ಅವರಿಗೆ ಎಲ್ಲಿಲ್ಲದ ಅವಕಾಶಗಳ ಮಹಾಪೂರವೇ ಸುರಿಯಿತು. ಸಿನಿಮಾ ಆಫರ್ ಗಳು, ಧಾರಾವಾಹಿ ಆಫರ್ ಗಳು ಮಾಡಲಿಂಗ್ ಹೀಗೆ ಬೇರೆ ಬೇರೆ ಆಫರ್ ಗಳು ಅವರನ್ನು ಬಹಳ ಬ್ಯುಸಿ ಇಟ್ಟಿತ್ತು. ಬಹುದೊಡ್ಡ ಅಭಿಮಾನಿ ವೃಂದವು ಬೆಳೆಯಿತು.

do-you-know-what-ranjiths-fianc-e-manasa-said-when-she-talked-about-the-love-story

ಈ ಎಲ್ಲ ಕಾರಣಗಳಿಂದ ಬ್ಯುಸಿಯಾಗಿದ್ದ ರಂಜಿತ್ ಅವರು ಇದೀಗ ಇದ್ದಕ್ಕಿದ್ದಂತೆ ಎಂಗೇಜ್ ಆಗಿದ್ದಾರೆ. ತಾವು ಬಹಳ ದಿನಗಳಿಂದಲೂ ಪ್ರೀತಿಸುತ್ತಿದ್ದ ಮಾನಸ ಗೌಡ ಎಂಬುವವರೊಂದಿಗೆ ರಂಜಿತ್ ಮದುವೆಯಾಗಲಿದ್ದಾರೆ. ಸದ್ಯಕ್ಕೆ ಅವರ ಎಂಗೇಜ್ಮೆಂಟ್ ವಿಚಾರ ಬಹಳ ಸರ್ಪ್ರೈಸಿಂಗ್ ಆಗಿದ್ದು ಪ್ರೇಕ್ಷಕರು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಂದ ಹಾಗೇ ರಂಜಿತ್ ಅವರು ತಮ್ಮ ಲವ್ ಸ್ಟೋರಿಯನ್ನು ಕೂಡ ರಿವಿಲ್ ಮಾಡಿದ್ದಾರೆ. ನಟ ರಂಜಿತ್ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಮಾನಸ ಗೌಡ. ರಂಜಿತ್ ಹಾಗೂ ಮಾನಸ ಗೌಡ ಕೆಲವು ವರ್ಷಗಳಿಂದಲೂ ಸ್ನೇಹಿತರಾಗಿದ್ದರು. ರಂಜಿತ್ ಗೆ ಮಾನಸ ಅವರು ನಿಧಾನಕ್ಕೆ ಇಷ್ಟವಾದರು. ನಿಧಾನಕ್ಕೆ ತನ್ನ ಗೆಳತಿಗೆ ಪ್ರಪೋಸ್ ಮಾಡಿದರು. ಆದರೆ ಮಾನಸ ಗೌಡ ಮಾತ್ರ ಪ್ರೊಪೋಸಲ್ ಅನ್ನು ಒಪ್ಪಿಕೊಳ್ಳಲು ಒಂದು ವಾರ ತೆಗೆದುಕೊಂಡರಂತೆ.

ಈ ಬಗ್ಗೆ ರಂಜಿತ್ ಅವರ ಭಾವಿಪತಿ ಮಾನಸ ಗೌಡ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾನು ರಂಜಿತ್ ಒಳ್ಳೆಯ ಸ್ನೇಹಿತರಾಗಿದ್ದೆವು. ಅವರು ಆಗಾಗ ನನ್ನ ಅಂಗಡಿಗೆ ಬರುತ್ತಿದ್ದರು. ಹಾಗೆ ಒಂದಷ್ಟು ಹೊತ್ತು ಹರಟುತ್ತಿದ್ದೆವು. ಹಾಗೆಲ್ಲ ಅವರ ಕನಸಿನ ಪಾರ್ಟ್ನರ್ ಬಗ್ಗೆ ಮಾತನಾಡುವಾಗ, ಹಲವು ಬಾರಿ ಅವರು ಹೇಳುವ ಎಲ್ಲಾ ಗುಣಲಕ್ಷಣಗಳು ನನ್ನನ್ನೇ ಹೋಲುವಂತಿರುತ್ತಿತ್ತು. ಒಂದೊಮ್ಮೆ ಅವರು ನನ್ನ ಜೊತೆ ಕುಳಿತಾಗಲೇ ಗೋಧೂಳಿ ಲಗ್ನಕ್ಕೆ ಕಾಯುತ್ತಿದ್ದರು. ಯಾಕೆ ಎಂದು ಕೇಳಿದಾಗ ಗೋಧೂಳಿ ಲಗ್ನದಲ್ಲಿ ಏನು ಮುಖ್ಯವಾದ ಕೆಲಸ ಮಾಡುವುದಿದೆ ಎಂದಷ್ಟೇ ಹೇಳಿದ್ದರು. ಸರಿಯಾದ ಸಮಯ ನೋಡಿ ಗೋಧೂಳಿ ಲಗ್ನದಲ್ಲಿ ನನಗೆ ಪ್ರಪೋಸ್ ಮಾಡಿದರು. ನನಗಂತೂ ಬಹಳ ಶಾಕ್ ಆಗಿತ್ತು. ನಾನು ಆಗಲೇ ಉತ್ತರಿಸಲಿಲ್ಲ. ಬದಲಿಗೆ ಒಂದು ವಾರದ ನಂತರ ಮತ್ತೆ ಅವರು ಆ ಪ್ರಶ್ನೆ ನನ್ನ ಮುಂದೆ ಇಟ್ಟಾಗ ನನಗೂ ಇಷ್ಟವಿದೆ ಎಂದು ಹೇಳಿದ್ದೆ ಎಂದಿದ್ದಾರೆ ಮಾನಸ ಗೌಡ.

ರಂಜಿತ್ ಹಾಗು ಮಾನಸ ಗೌಡ ಅವರ ಪ್ರೇಮವನ್ನು ಮನೆಯವರೆಲ್ಲರೂ ಒಪ್ಪಿತು. ಇದೀಗ ಅವರು ಎಂಗೇಜ್ ಆಗಿದ್ದಾರೆ. ಇವರ ಲವ್ ಸ್ಟೋರಿ ಈಗ ಕೆಲವು ದಿನಗಳಿಂದ ಇದ್ದರೂ ಸಹ ಇವರು ಎಂಗೇಜ್ಮೆಂಟ್ ದಿನವೇ ಮಾನಸ ಆವರ ಹಣೆಗೆ ಮುತ್ತಿಟ್ಟಿದ್ದು ಎಂದು ಮಾನಸ ಶೇರ್ ಮಾಡಿಕೊಂಡಿದ್ದಾರೆ. ಅಲ್ಲಿಯವರೆಗೂ ಇಬ್ಬರೂ ಒಟ್ಟಿಗೆ ಓಡಾಡುತ್ತಿದ್ದರೆ ವಿನಹ ಕೈ ಕೈ ಹಿಡಿದುಕೊಳ್ಳಲೂ ಇಲ್ಲವಂತೆ.

ಇದೀಗ ಈ ಜೋಡಿಯ ಒಂದಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದ್ದು, ರಂಜಿತ್ ಅಭಿಮಾನಿಗಳು ಹಾಗೂ ಫಾಲೋವರ್ಸ್ ಗಳು ಅವರ ಮದುವೆ ಹಾಗೂ ಮಾನಸ ಗೌಡ ಅವರ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಕುತೂಹಲ ತೋರಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X