15 ವರ್ಷವಿರುವಾಗಲೇ ನಟಿಯಾಗ್ಬೇಕು ಅಂತ ಹಠ ಹಿಡಿದಿದ್ರಂತೆ; ತನ್ನ ಜರ್ನಿ ಬಗ್ಗೆ ರುಕ್ಮಿಣಿ ವಸಂತ್ ಹೇಳಿದ್ದೇನು?
ರಾಪಿಡ್ ರಶ್ಮಿ ಅವರು ನಡೆಸಿಕೊಂಡು ಬಂದಿರುವ ಜಸ್ಟ್ ಕ್ಯೂರಿಯಸ್ ಎಂಬ ಯೂಟ್ಯೂಬ್ ಪಾಡ್ ಕಾಸ್ಟ್ ಇದೀಗ ಬಹಳಷ್ಟು ಖ್ಯಾತಿ ಪಡೆಯುತ್ತಿದೆ. ಇದರಲ್ಲಿ ಇತ್ತೀಚೆಗಷ್ಟೇ ಬಂದು ಮಾತನಾಡಿದ ನಟಿ ರುಕ್ಮಿಣಿ ವಸಂತ್ ಅವರು ಹಲವಾರು ವಿಚಾರಗಳ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಚಿಕ್ಕಂದಿನಿಂದಲೂ ಭರತನಾಟ್ಯದ ಬಾಗ್ರೌಂಡ್ ಇರುವ ನಟಿ ರುಕ್ಮಿಣಿ ವಸಂತ್ ಅವರಿಗೆ ನಟಿಯಾಗಬೇಕೆಂಬ ಬಹುದೊಡ್ಡ ಕನಸಿತ್ತಂತೆ. 15 ವರ್ಷದವರಿದ್ದಾಗ ತಾಯಿಯೊಂದಿಗೆ ನಟಿಯಾಗಲೇಬೇಕೆಂದು ಹಠ ಹಿಡಿದು ಕೂತ ಅವರು ಪಿಯುಸಿ ನಂತರ ಲಂಡನ್‌ನ ಬ್ಲೂಸ್ ಬೆರಿಯಲ್ಲಿರುವ ನಟನ ಅಕಾಡೆಮಿಗೆ ಹೋದರಂತೆ.

ಮೂರು ವರ್ಷದ ತರಬೇತಿಯ ನಂತರ ಭಾರತಕ್ಕೆ ಹಿಂತಿರುಗಿದ ರುಕ್ಮಿಣಿ ಮೊದಲ ಬಾರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು 'ಬೀರ್ ಬಲ್ ಟ್ರಯಾಲಜಿ'ಯಲ್ಲಿ'. ಅದಾದ ನಂತರ ಲಾಕ್ ಡೌನ್ ಎಂದು ಎರಡು ವರ್ಷ ಕಳೆದ ನಂತರ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಸಿಕ್ಕಿ ಬಹಳ ಪಾಪ್ಯುಲಾರಿಟಿ ಪಡೆದರು ನಟಿ ರುಕ್ಮಿಣಿ ವಸಂತ.
ಅಂದ ಹಾಗೆ ರಕ್ಷಿತ್ ಶೆಟ್ಟಿ ಅವರೊಂದಿಗೆ ರುಕ್ಮಿಣಿ ವಸಂತ ಅವರು ಈ ಸಿನಿಮಾದಲ್ಲಿ ಬಹಳ ಮುದ್ದಾಗಿ ನಟಿಸಿದ್ದು, ಸಿನಿ ಪ್ರೇಕ್ಷಕರ ಮನ ಗೆದ್ದಿರುವುದಂತೂ ನಿಜ. ಇದೀಗ ಕನ್ನಡ ಭಾಷೆಯಲ್ಲಿ ಹಾಗೂ ತಮಿಳು ಚಿತ್ರರಂಗದಿಂದಲೂ ಹಲವು ಆಫರ್ ಈಕೆಗೆ ಬರುತ್ತಿದೆ.
ಹೀಗಿರುವಾಗ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳ ಬಾಡಿ ಫಿಟ್ನೆಸ್ ಬಗ್ಗೆ ಮಾತನಾಡಿರುವ ನಟಿ ರುಕ್ಮಿಣಿ ವಸಂತ್ "ನಾನು ತುಂಬಾ ಸ್ಟ್ರಿಕ್ಟ್ ಡಯಟ್ ಅಂತೇನೂ ಫಾಲೋ ಮಾಡೋದಿಲ್ಲ. ಆರೋಗ್ಯಕರವಾಗಿರಲು ಏನೇನು ಬೇಕು ಅಂತಹ ಬೇಸಿಕ್ ಡಯಟ್ ಅನ್ನು ಮಾತ್ರ ನಾನು ಫಾಲೋ ಮಾಡುತ್ತೇನೆ. ನನ್ನ ಫಿಸಿಕಲ್ ಆರೋಗ್ಯ ಅಂತೆಯೇ ಮಾನಸಿಕ ಆರೋಗ್ಯವು ಬಹಳ ಮುಖ್ಯ ಆಗಿರುವುದರಿಂದ ಒಂದಷ್ಟು ವ್ಯಾಯಾಮ ಒಳ್ಳೆಯ ಊಟ ತಿಂಡಿ, ಸರಿಯಾದ ನಿದ್ರೆ ಈ ರೀತಿ ಬೇಸಿಕ್ ವಿಚಾರಗಳಿಗೆ ನಾನು ಹೆಚ್ಚಿನ ಮಹತ್ವ ನೀಡುತ್ತೇನೆ. ಇದೂವರೆಗೂ ನನಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೂ ತೂಕ ಇಳಿಸಿಕೊಳ್ಳಲು ಅಥವಾ ಯಾವುದೇ ರೀತಿಯಲ್ಲಿ ನನ್ನ ದೈಹಿಕ ಚಹರೆಯನ್ನು ಬದಲಿಸಿಕೊಳ್ಳಲು ಹೇಳಿಲ್ಲ. ಪಾತ್ರಕ್ಕೆ ಸರಿಯಾಗಿ ನಾವು ಬದಲಾಗುವುದು ಸಹಜ. ಈ ನಟನೆ ಎಂಬುದು ನಾನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿರುವ ವೃತ್ತಿ ಆದ್ದರಿಂದ ನನಗೆ ಎಲ್ಲಾದರ ಬಗ್ಗೆಯೂ ಬಹಳ ಸಂತೃಪ್ತಿ ಇದೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ.

ಅಂದಹಾಗೆ ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ಅವರೊಂದಿಗೆ ಕೆಲಸ ಮಾಡಿರುವ ಅನುಭವವನ್ನು ಹೇಳಿಕೊಂಡಿರುವ ನಟಿ ವಸಂತ್ "ಅವರಿಬ್ಬರೂ ಈಗಾಗಲೇ ಜನಪ್ರಿಯರಾಗಿರುವ ನಿರ್ದೇಶಕರು ಹಾಗೂ ನಟರು. ಆದರೂ ಒಂದು ದಿನವೂ ನನ್ನನ್ನು ಹೊಸಬಳಂತೆ ನೋಡಲಿಲ್ಲ. ಪ್ರತಿ ಬಾರಿ ನಾನು ನಟಿಸಿದಾಗಲೂ ನನಗೆ ಸಹಕಾರ ನೀಡಿದ ಎನ್ಕರೇಜ್ ಮಾಡುತ್ತಾ ಬಂದಿದ್ದಾರೆ. ಇದರಿಂದ ನನಗೆ ಬಹಳಷ್ಟು ಕಾನ್ಫಿಡೆನ್ಸ್ ಬಂದಿದೆ. ಅವರಿಬ್ಬರಿಂದ ನಮ್ಮ ಇಡೀ ಸೆಟ್ ನನಗೆ ಬಹಳ ಪಾಸಿಟಿವ್ ವೈಬ್ ಅನ್ನು ನೀಡಿದೆ. ರಕ್ಷಿತ್ ಶೆಟ್ಟಿ ಅವರು ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡುವ ವಿಧಾನ ನನಗೆ ಬಹಳ ಹಿಡಿಸಿತು. ಅವರ ತಾಳ್ಮೆ ಕೂಡ ನನಗೆ ಬಹಳ ಇಷ್ಟ" ಎಂದಿದ್ದಾರೆ ನಟಿ ರುಕ್ಮಿಣಿ ವಸಂತ್.
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿರುವ ನಟಿ ರುಕ್ಮಿಣಿ ವಸಂತ್ "ನಾನು ಇಂದು ಯಾವ ರೀತಿಯಲ್ಲಿ ಇದ್ದೇನೋ ಅದಕ್ಕೆಲ್ಲ ನನ್ನ ತಾಯಿ ಹಾಗೂ ತಂಗಿಯೇ ಕಾರಣ. ನನ್ನ ತಂದೆ ತೀರಿ ಹೋದಾಗಿನಿಂದ ನನ್ನ ತಾಯಿ ಜೀವನದಲ್ಲಿ ಬಹಳ ಗಟ್ಟಿಯಾಗಿ ನಿಂತಿದ್ದಾರೆ. ಅವರೇ ನನಗೆ ಪ್ರೇರಣೆ. ಜೊತೆಗೆ ನಾವು ಜೀವನದಲ್ಲಿ ಭೇಟಿಯಾದವರೆಲ್ಲರೂ ನಮ್ಮಲ್ಲಿ ಒಂದಷ್ಟು ಒಳ್ಳೆಯ ವಿಚಾರಗಳನ್ನು ತುಂಬುತ್ತಾರೆ" ಎಂದಿದ್ದಾರೆ.


Click it and Unblock the Notifications











