ಲವ್ ಮತ್ತು ಬ್ರೇಕಪ್ ಬಗ್ಗೆ ಮಾತನಾಡಿದ ಸಾನ್ಯಾ ಅಯ್ಯರ್ ಹೇಳಿದ್ದೇನು ಗೊತ್ತಾ?
ಪುಟ್ಟಗೌರಿ ಅಂದಾಕ್ಷಣ ಕನ್ನಡ ಕಿರುತೆರೆ ಪ್ರೇಕ್ಷಕರೆಲ್ಲರಿಗೂ ನೆನಪಾಗುವುದು ಸಾನ್ಯಾ ಅಯ್ಯರ್ ದಶಕದ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಪುಟ್ಟಗೌರಿ ಮದುವೆ" ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ಈಕೆ ಇದೀಗ ನನ್ನ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಪ್ರೀತಿ ಪ್ರೇಮ ಪ್ರಣಯದಲ್ಲಿ ತಮಗಾದ ನೋವನ್ನು ಕೂಡ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಸಾನ್ಯಾ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಸಾನ್ಯಾ ಅಯ್ಯರ್ ಬಾಲ ನಟಿಯಾಗಿ ಚಿಕ್ಕಂದಿನಿಂದಲೂ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಕಿರುತೆರೆ ಅಷ್ಟೇ ಅಲ್ಲದೆ ಸಿನಿಮಾದಲ್ಲೂ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿರುವ ಈ ನಟಿ "ಪುಟ್ಟಗೌರಿ ಮದುವೆ" ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮಗಳಾದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಧಾರಾವಾಹಿ ಸಾನ್ಯಾ ಅಯ್ಯರ್ ಗೆ ಖ್ಯಾತಿ ಕೊಟ್ಟಿದ್ದಷ್ಟೇ ಅಲ್ಲದೆ ಬಹಳಷ್ಟು ಅವಕಾಶಗಳಿಗೂ ದಾರಿ ಮಾಡಿ ಕೊಟ್ಟಿತ್ತು.

ಇತ್ತೀಚೆಗಷ್ಟೇ ಬಿಗ್ ಬಾಸ್ ಸ್ಪರ್ಧಿಯಾಗಿಯೂ ಮಿಂಚಿದ ನಟಿ ಸಾನ್ಯಾ ಅಯ್ಯರ್, ಬಿಗ್ ಮನೆ ಒಳಗೂ ಹೊರಗೂ ಬಹಳಷ್ಟು ವೈಯಕ್ತಿಕ ವಿಚಾರಗಳನ್ನು ಶೇರ್ ಮಾಡಿ ಟ್ರೋಲ್ ಗೆ ಒಳಗಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ಸಾನ್ಯಾ ಅಯ್ಯರ್ ಗೆ ಹೊಸ ಅವಕಾಶಗಳು ಕಾದಿದ್ದವು. ಬಿಗ್ ಮನೆಯಲ್ಲಿ ಜಶ್ವಂತ್ ಹಾಗೂ ರೂಪೇಶ್ ಶೆಟ್ಟಿ ಅವರೊಂದಿಗಿನ ಸಾನ್ಯಾ ಅಯ್ಯರ್ ಅವರ ರಿಲೇಶನ್ಶಿಪ್ ಸ್ಟೇಟಸ್ ಬಗ್ಗೆ ಪ್ರೇಕ್ಷಕರು ಅಭಿಮಾನಿಗಳು ಒಂದಷ್ಟು ಕುತೂಹಲ ತೋರಿಸಿದ್ದರು. ರೇಖಿ ಹೀಲಿಂಗ್ ಅಲ್ಲಿ ಗಾಢವಾದ ನಂಬಿಕೆಯನ್ನು ಇಟ್ಟುಕೊಂಡಿರುವ ನಟಿ ಸಾನ್ಯಾ ಅಯ್ಯರ್ ತಮ್ಮ ಹಲವು ಸಮಸ್ಯೆಗಳಿಗೆ ಇದರಿಂದ ಪರಿಹಾರ ಕಂಡುಕೊಂಡಿದ್ದಾರಂತೆ.
ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದ "ಗೌರಿ" ಸಿನಿಮಾದಲ್ಲಿಯೂ ನಾಯಕ ನಟಿಯಾಗಿ ಕಾಣಿಸಿಕೊಂಡ ಸಾನ್ಯಾ ಅಯ್ಯರ್ ಮೀಡಿಯಾ ಮುಂದೆ ಬಹಳಷ್ಟು ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಮುಂದುವರಿಯುವ ಆಸೆಯನ್ನು ಹೊಂದಿದ್ದಾರೆ.
ಇನ್ನು ಇತ್ತೀಚಿಗೆ ಸಂದರ್ಶನ ಒಂದರಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಶೇರ್ ಮಾಡಿರುವ ನಟಿ ಸಾನ್ಯಾ ಅಯ್ಯರ್ ಲವ್ ಬ್ರೇಕ್ ಅಪ್ ಬಗ್ಗೆಯೂ ಮಾತನಾಡಿದ್ದಾರೆ. ನಾನು ಚಿಕ್ಕಂದಿನಿಂದಲೂ ಫೇಲ್ ಆಗಿರುವ ಲವ್ ಸ್ಟೋರಿಗಳನ್ನು ನೋಡಿದ್ದೇನೆ. ನಮ್ಮ ಮನೆಯಲ್ಲಿಯೂ ನನ್ನ ತಂದೆ ತಾಯಿಯ ದಾಂಪತ್ಯ ಜೀವನ ಅಷ್ಟು ಚೆನ್ನಾಗಿ ಇಲ್ಲದಿದ್ದ ಕಾರಣ ನನಗೆ ಪ್ರೀತಿ ಎಂದರೇನು ಎಂಬುದೇ ಅರ್ಥವಾಗಿರಲಿಲ್ಲ. ಟೀನೇಜ್ ನಲ್ಲಿ ಇದ್ದ ಲವ್ ಸ್ಟೋರಿ ನನಗೆ ಬಹಳ ಟಾಕ್ಸಿಕ್ ರಿಲೇಷನ್ ಶಿಪ್ ಆಗಿತ್ತು. ಒಂದು ರಿಲೇಷನ್ ಶಿಪ್ ನಲ್ಲಿ ನಾವು ಏನನ್ನು ಬಯಸಬೇಕು ಎಂಬುದೇ ನನಗೆ ಸರಿಯಾಗಿ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇದರ ಜೊತೆಗೆ ಪ್ರೀತಿ ಸಿಗದೇ ಇದ್ದರೂ ಸಿಕ್ಕಿರುವುದನ್ನೇ ಪ್ರೀತಿ ಎಂದು ನಂಬಿ ಅಡ್ಜಸ್ಟ್ ಮಾಡಿಕೊಂಡು ಹೋಗಬೇಕು ಅನ್ನುವುದೇ ನನ್ನ ಮನಸ್ಥಿತಿಯಾಗಿತ್ತು. ಈ ಕಾರಣದಿಂದಲೇ ಹಲವು ಬ್ರೇಕ್ ಅಪ್ ಗಳು ಅದವು. ಈಗ ನನಗೆ ಇವೆಲ್ಲವುದರ ಅರಿವಿದೆ. ನನ್ನ ಕೆಲವು ಮಾನಸಿಕ ಗೊಂದಲಗಳನ್ನು ರೇಖೆ ಚಿಕಿತ್ಸೆ ಪರಿಹಾರ ಮಾಡಿದೆ. ಈಗ ನಾನು ಒಂದು ಆರೋಗ್ಯವಂತ ರಿಲೇಷನ್ ಶಿಪ್ ಅಂದರೇನು ಎಂಬುದನ್ನು ತಿಳಿದುಕೊಂಡಿದ್ದೇನೆ. ನನಗೆ ಒಂದು ಸಂತೋಷದಾಯಕ ಪ್ರಾಮಾಣಿಕ ರಿಲೇಶನ್ಶಿಪ್ ಬೇಕು ಯಾವುದೇ ರೀತಿಯ ಟಾಕ್ಸಿಕ್ ರಿಲೇಷನ್ ಶಿಪ್ ನಲ್ಲಿರಲು ನಾನು ಇಷ್ಟಪಡುವುದಿಲ್ಲ ಎಂದಿದ್ದಾರೆ ನಟಿ ಸಾನ್ಯಾ ಅಯ್ಯರ್.


Click it and Unblock the Notifications











