Amulya Gowda: 'ನನ್ನರಸಿ ರಾಧೆ'ಯ ಅಮೂಲ್ಯ ಗೌಡಗೆ ಬ್ರೇಕ್ ಕೊಡುತ್ತಾ 'ಕುರುಡು ಕಾಂಚಾಣ'?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ನನ್ನರಸಿ ರಾಧೆ'ಯು ವಿಭಿನ್ನ ಕಥಾ ಹಂದರದ ಜೊತೆಗೆ ಪಾತ್ರವರ್ಗದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಬಿಗ್ ಬಾಸ್ ಸೀಸನ್ 9 ಆರಂಭವಾಗುವ ಮೊದಲು ಮುಕ್ತಾಯಗೊಂಡಿದ್ದ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಅಶ್ವಿನಿ ಆಗಿ ನಟಿಸಿದ್ದ ಅಮೂಲ್ಯ ಗೌಡ ಶುಭಸುದ್ದಿಯನ್ನು ನೀಡಿದ್ದಾರೆ.

ಹೌದು, ಮುದ್ದಾದ ನಟನೆಯ ಮೂಲಕ ಕಿರುಪರದೆ ಮೇಲೆ ಸದ್ದು ಮಾಡಿದ ಅಮೂಲ್ಯ ಗೌಡ ಇದೀಗ ಮೊದಲ ಬಾರಿಗೆ ಓಟಿಟಿ ಅಂಗಳದಲ್ಲಿ ಮಿಂಚಲು ತಯಾರಾಗಿದ್ದಾರೆ. 'ಕುರುಡು ಕಾಂಚಾಣ' ಎಂಬ ಸಿನಿಮಾದ ಮೂಲಕ ಓಟಿಟಿಗೆ ಕಾಲಿಡಲಿದ್ದಾರೆ ಅಮೂಲ್ಯ ಗೌಡ. ಈಗಾಗಲೇ ಆ ಸಿನಿಮಾದ ಹಾಡಿನ ಚಿತ್ರೀಕರಣ ಮುಕ್ತಾಯಗೊಂಡಿದ್ದು ಅಮೂಲ್ಯ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

'ಕುರುಡು ಕಾಂಚಾಣ' ಸುಂದರ ಅನುಭವ

'ಕುರುಡು ಕಾಂಚಾಣ' ಸುಂದರ ಅನುಭವ

ಅಮೂಲ್ಯ ಗೌಡ ಈ ಮೊದಲು ಬೇರೆ ಬೇರೆ ಹಾಡುಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದರೂ, 'ಕುರುಡು ಕಾಂಚಾಣ' ಸಿನಿಮಾದ ಹಾಡಿನ ಚಿತ್ರೀಕರಣ ಅವರ ಪಾಲಿಗೆ ಕೊಂಚ ಸ್ಪೆಷಲ್ ಆಗಿತ್ತು ಎಂದೇ ಹೇಳಬಹುದು. ಕೇರಳದ ವರ್ಕಳ ಎಂಬ ಸುಂದರ ಬೀಚ್‌ನಲ್ಲಿ ಎರಡು ದಿನಗಳ ಕಾಲ ಶೂಟಿಂಗ್ ನಡೆದಿದೆ. ಈ ಬೀಚ್‌ನ ಸುತ್ತಮುತ್ತ ವಾತಾವರಣ ಸುಂದರವಾಗಿದ್ದ ಕಾರಣ ಮನಸ್ಸಿಗೂ ಖುಷಿಯಾಯಿತು ಎನ್ನುವುದು ಅಮೂಲ್ಯ ಗೌಡ ಅವರ ಅಂಬೋಣ.

ಮೊದಲ ಓಟಿಟಿ ಸಿನಿಮಾ

ಮೊದಲ ಓಟಿಟಿ ಸಿನಿಮಾ

"ಕುರುಡು ಕಾಂಚಾಣ ನನ್ನ ಮೊದಲ ಓಟಿಟಿ ಸಿನಿಮಾ" ಎಂದು ಸಂತಸದಿಂದಲೇ ಹೇಳುವ ಅಮೂಲ್ಯ ಗೌಡ 'ನನ್ನರಸಿ ರಾಧೆ' ಧಾರಾವಾಹಿ ಮುಕ್ತಾಯದ ಬಳಿಕ ಮುಂದೇನು ಮಾಡುವುದು ಎಂದು ಆಲೋಚಿಸುತ್ತಿದ್ದರು. ಅದೇ ಸಮಯದಲ್ಲಿ 'ಕುರುಡು ಕಾಂಚಾಣ'ದ ಕಥೆ ಅವರ ಕಿವಿಗೆ ಬಿತ್ತು. ಕಥೆ ಕೇಳಿ ಫಿದಾ ಆದ ಅಮೂಲ್ಯ ಹಿಂದೆ ಮುಂದೆ ನೋಡದೆ ಖುಷಿಯಿಂದ ಅಸ್ತು ಎಂದರು.

ಓಟಿಟಿ ಸಿನಿಮಾದ ಅನುಭವ ಹೇಗಿತ್ತು?

ಓಟಿಟಿ ಸಿನಿಮಾದ ಅನುಭವ ಹೇಗಿತ್ತು?

'ಕುರುಡು ಕಾಂಚಾಣ' ಸಿನಿಮಾದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಹೋಗಿತ್ತು ಚಿತ್ರತಂಡ. ಅಲ್ಲಿ ಕಳೆದ ಎರಡು ಮೂರು ದಿನ ಅಮೂಲ್ಯ ಪಾಲಿಗೆ ಅಕ್ಷರಶಃ ಅವಿಸ್ಮರಣೀಯ ಘಳಿಗೆ ಎಂದರೆ ತಪ್ಪಾಗಲಾರದು. ಸುತ್ತ ಮುತ್ತಲಿನ ನಿಸರ್ಗ ಸೌಂದರ್ಯವಂತೂ ಅದ್ಭುತವಾಗಿದ್ದು ಬಿಸಿಲಿನ ನಡುವೆ ಶೂಟಿಂಗ್ ಮಾಡಿದ್ದರು ಕಷ್ಟ ಎಂದೆನಿಸಲಿಲ್ಲ ಎಂಬುದು ಅಮೂಲ್ಯ ಅವರ ಅಭಿಪ್ರಾಯ.

ಬ್ರೇಕ್ ಕೊಡುತ್ತೆ

ಬ್ರೇಕ್ ಕೊಡುತ್ತೆ

ಸಿನಿಮಾದ ಬಗ್ಗೆ ಮಾತನಾಡಿರುವ ಅಮೂಲ್ಯ ಗೌಡ "ಇದು ನನ್ನ ಮೊದಲ ಸಿನಿಮಾ ಆಗಿರುವುದರಿಂದ ನಾನು ತುಂಬಾನೇ ಎಕ್ಸೈಟ್ಮೆಂಟ್‌ನಲ್ಲಿದ್ದೇನೆ. ಈ ಚಿತ್ರ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಬರುವುದಲ್ಲದೇ ಎರಡು ಬೇರೆ ಬೇರೆ ಭಾಷೆಗಳಲ್ಲಿ ಅಂದರೆ ಕನ್ನಡ ಹಾಗೂ ತೆಲುಗಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೂಡಾ ನನಗೆ ಖುಷಿ ಇದೆ. ನನ್ನ ಬೆಸ್ಟ್ ಅನ್ನು ಚಿತ್ರಕ್ಕೆ ನೀಡಿದ್ದೇನೆ. ಈ ಚಿತ್ರ ನನಗೆ ಒಂದು ಬಿಗ್ ಬ್ರೇಕ್ ನೀಡುವುದಂತೂ ನಿಜ. ಇದರ ಜೊತೆಗೆ ಇದರಿಂದಾಗಿ ಇನ್ನಷ್ಟು ಒಳ್ಳೊಳ್ಳೆಯ ಅವಕಾಶಗಳು ನನಗೆ ಸಿಗಲಿದೆ ಅನ್ನೋ ನಂಬಿಕೆಯಲ್ಲಿದ್ದಾರೆ.

More from Filmibeat

English summary
Do you know what TV actress Amulya Gowda said about the release of her first OTT movie?Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X