'ಬ್ರಹ್ಮಗಂಟು' ಖ್ಯಾತಿಯ ಕಿರುತೆರೆ ಗುಂಡಮ್ಮ ತೂಕ ಇಳಿಸಿಕೊಳ್ಳಲೇ ಬೇಕು ಎಂದು ನಿರ್ಧರಿಸಿದ್ದೇಕೆ?
ಗೀತಾ ಭಾರತಿ ಭಟ್ 'ಬ್ರಹ್ಮಗಂಟು' ಧಾರಾವಾಹಿ ಮುಖಾಂತರ ಕನ್ನಡಿಗರಿಗೆ ಪರಿಚಯವಾದವರು. ಗುಂಡಮ್ಮ ಎಂದೇ ಎಲ್ಲೆಡೆ ಮನೆ ಮಾತಾಗಿದ್ದ ಇವರನ್ನು ಪ್ರೇಕ್ಷಕರು ಹಾಗೆಯೇ ಇಷ್ಟಪಟ್ಟರು. ಹಾಗಾಗಿಯೂ ತೀರಾ ದಪ್ಪಗಿರುವುದರಿಂದ ಸಣ್ಣಗಾಗಲೇಬೇಕಾದ ಪರಿಸ್ಥಿತಿ ಎದುರಾದಾಗ ಇವರು ಕೂಡ ಪ್ರಯತ್ನ ಪಡಲೇಬೇಕಾಯಿತು. ಪ್ಲಸ್ ಸೈಜ್‌ನಿಂದ ಉತ್ತಮ ಆರೋಗ್ಯದತ್ತ ಇವರ ಪ್ರಯಾಣ ನಿಜಕ್ಕೂ ಪ್ರಯಾಸಕರವಾದದ್ದೇ ಹೌದು.
ಅವರೇ ಹೇಳುವ ಪ್ರಕಾರ, ಸಂಪೂರ್ಣವಾಗಿ ಫಿಟ್‌ನೆಸ್‌ನಿಂದ ದೂರವಿದ್ದರು. ಆದ್ರೀಗ ಈಗ ಈ ನಟಿ ತನ್ನನ್ನು ತಾನು ಪ್ರೀತಿಸಲು ಕಲಿತಿದ್ದಾರೆ. ಅಲ್ಲದೆ ಸುಂದರವಾಗಿರಲು ಪ್ರಯತ್ನಿಸುತ್ತಿದ್ದಾರೆ. ಈ ಮೊದಲು ಅವರನ್ನು ಅವರೇ ತುಂಬಾ ದ್ವೇಷ ಮಾಡುತ್ತಿದ್ದರು. ಈಗ ಅವರ ಬದುಕಿನಲ್ಲಿ ದೊಡ್ಡ ಬದಲಾವಣೆಯೇ ಆಗಿದೆ.

ತೂಕ ಹೆಚ್ಚಿದ ವಿಷಯಕ್ಕೆ ನಾಚಿಕೆಗೆ ಒಳಗಾಗಿದ್ದೆ
ಸಂಬಂಧಿಕರಿಂದ ಹೆಚ್ಚಿನ ತೂಕದ ವಿಷಯಕ್ಕೆ ನಾಚಿಕೆಗೊಳಗಾದದ್ದನ್ನು, ಶಾಲೆಯಲ್ಲಿ ಹೆದರಿಸಿದ್ದನ್ನು ಇತ್ಯಾದಿ ನೆನಪುಗಳನ್ನು ನಟಿ ನೆನಪಿಸಿಕೊಂಡರು. ಅಷ್ಟು ತಿನ್ನಬೇಡಿ, ನೀವು ಇನ್ನಷ್ಟು ತೂಕವನ್ನು ಹೆಚ್ಚಿಸಿಕೊಳ್ಳುತ್ತೀರಿ ಅಥವಾ ನಿಮಗೆ ವರ ಸಿಗುವುದಿಲ್ಲ ಎಂದೆಲ್ಲಾ ಅವರಿಗೆ ಗೇಲಿ ಮಾಡುತ್ತಿದ್ದರು. ಹೇಳಿದ್ದು ಕೇಳದಿದ್ದರೆ ನಿನಗೆ ಇಷ್ಟವಾದ ಅಕ್ಕಿ ರೊಟ್ಟಿ ಸಿಗುವುದಿಲ್ಲ ಎಂದು ಅವರ ಅಮ್ಮನೂ ಹೇಳುತ್ತಿದ್ದರಂತೆ. ಇವೆಲ್ಲಾ ನಟಿಯ ಮನಸ್ಸಿನಲ್ಲಿ ಬಲವಾಗಿ ಅಚ್ಚೊತ್ತಿ ಕೂತಿತ್ತು.
ತನ್ನನ್ನು ತಾನೇ ದ್ವೇಷಿಸಲು ಪ್ರಾರಂಭಿಸಿದೆ
ಗೀತಾ ಭಾರತಿ ಭಟ್ ದಪ್ಪಗಿರುವ ಬಗ್ಗೆ ಯೋಚಿಸಲು ಆರಂಭಿಸಿದ್ದರು. ದಿನ ಹೋದಂತೆಲ್ಲಾ ತನ್ನನ್ನು ತಾನೇ ದ್ವೇಷಿಸಲು ಪ್ರಾರಂಭಿಸಿದ್ದರು. ಎಲ್ಲರೂ ಹೇಳುವಂತೆಯೇ ತಾನು ಅರ್ಹನಾಗಿದ್ದೇನೆ. ಅಂದುಕೊಂಡಿದ್ದಕ್ಕಿಂತ ದಪ್ಪಗಿದ್ದೇನೆ ಎನಿಸಿತ್ತು. ಹಾಗಾಗಿ ಜನರು ಏನೇ ಹೇಳಿದರೂ ಅದೇ ನಿಜವಾಗಿರಬೇಕು ಎಂದುಕೊಂಡಿದ್ದರು.

ನಟನೆ ತನ್ನ ಪ್ರಪಂಚವನ್ನೇ ಬದಲಾಯಿಸಿತು
ನಟನೆಗೆ ಪ್ರವೇಶ ಮಾಡಿದ ನಂತರದ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ನಟನೆಗೆ ಬಂದದ್ದು ಅವರ ಪ್ರಪಂಚವನ್ನೇ ತಿರುಗಿಸಿತ್ತು. 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದಾಗ ತನ್ನ ಜೀವನವೇ ಬದಲಾಯಿತು. ನಟನೆ ಎಂದರೆ ಗ್ಲಾಮರ್, ಪರಿಪೂರ್ಣ ದೇಹವೇ ಹೊರತು ತನ್ನಂತವರನ್ನು ಒಪ್ಪಿಕೊಳ್ಳುವ ಕ್ಷೇತ್ರವಲ್ಲ ಎಂದುಕೊಂಡಿದ್ದರು. ಆದರೂ, ಅಭಿಮಾನಿಗಳಿಂದ ಪ್ರತಿಕ್ರಿಯೆ ದೊರೆತ ದಿನ ತನ್ನ ಭಯವೆಲ್ಲಾ ಹೊರಟು ಹೋಯಿತು ಎಂದುಕೊಂಡಿದ್ದಾರೆ. ಅಪರಿಚಿತರು ತುಂಬಾ ಪ್ರೀತಿಯನ್ನು ತೋರಿಸಿದಂತೆ ಇವರ ಆಲೋಚನೆಗಳು ಬದಲಾಗಿದ್ದವು ಎಂದು ಹೇಳಿಕೊಂಡಿದ್ದಾರೆ.
"ಫಿಟ್ನೆಸ್‌ನತ್ತ ತನ್ನ ಹೋರಾಟವಿತ್ತು" - ಗೀತಾ ಭಾರತಿ ಭಟ್
'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಿದ ಬಳಿಕ ಗೀತಾ ಭಾರತಿ ಭಟ್ ತನ್ನ ತೂಕವನ್ನು ಇಳಿಸಿಕೊಳ್ಳಲು ತುಂಬಾ ಪ್ರಯತ್ನ ಪಟ್ಟರು. ದೇಹವನ್ನು ಆರೋಗ್ಯವಾಗಿಡುವ ದೃಷ್ಟಿಯಿಂದ ತೂಕವನ್ನು ಇಳಿಸುವ ಅಗತ್ಯವಿತ್ತು. ಅಧಿಕ ತೂಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ಸಣ್ಣಗಾಗಲೇ ಬೇಕು ಅಂತ ತೀರ್ಮಾನಿಸಿದ್ದರು.


Click it and Unblock the Notifications











