'ಬಿಗ್‌ ಬ್ರದರ್'-'ಬಿಗ್ ಬಾಸ್' ಅಂತಹ ರಿಯಾಲಿಟಿ ಶೋ ಉಗಮಕ್ಕೆ ಕಾರಣ '1984'; ಏನಿದೆ?

By ಅನಿತಾ ಬನಾರಿ

ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಬಂದಿದ್ದು ಎಲ್ಲಿಂದ? ಎಂಬ ಕುತೂಹಲ ಹಲವಷ್ಟು ಜನರಿಗೆ ಇರಬಹುದು. ಈ ರಿಯಾಲಿಟಿ ಶೋ ಹಿಂದೆ ಬಹಳ ರೋಚಕವಾದ ಕಥೆಯೊಂದು ಇದೆ.

ನೆದರ್‌ಲ್ಯಾಂಡ್‌ನಲ್ಲಿ 'ಬಿಗ್ ಬ್ರದರ್' ಎಂಬ ರಿಯಾಲಿಟಿ ಶೋ ನಡೆಯುತ್ತಿತ್ತು. ಒಂದಷ್ಟು ಜನರನ್ನು ಒಂದು ಮನೆಯೊಳಗಿಟ್ಟು ಅವರ ಚಟುವಟಿಕೆ ಮಾತುಗಳನ್ನು ನಿಯಂತ್ರಿಸುವ ಕಾರ್ಯಕ್ರಮ ಅದಾಗಿತ್ತು.

Do you know where did the idea of Bigg Boss come from

ಈ ಕಾರ್ಯಕ್ರಮ ಬಹಳಷ್ಟು ಪಾಪ್ಯುಲಾರಿಟಿ ಪಡೆಯಿತು. ಜನರ ಹಾವ,ಭಾವ, ಮಾತು, ಯೋಚನೆಗಳೆಲ್ಲವನ್ನು, ನೋಡುವುದು ವೀಕ್ಷರಿಗೆ ಬಹಳ ಮನೋರಂಜನೆ ನೀಡಿತ್ತು. 'ಬಿಗ್ ಬ್ರದರ್' ಎಂಬ ಅಶರೀರವಾಣಿ, ಮನೆಯ ವಾಸಿಗಳನ್ನು ನಾನಾ ವಿಚಾರಗಳಲ್ಲಿ ನಿಯಂತ್ರಿಸುವ ಈ ಕಾರ್ಯಕ್ರಮ ಜಗತ್ತಿನಾದ್ಯಂತ ಅದೆಷ್ಟು ಪಾಪ್ಯುಲಾರಿಟಿ ಪಡೆಯಿತೆಂದರೆ, ಇಂದು ಹಲವಾರು ದೇಶಗಳಲ್ಲಿ 'ಬಿಗ್ ಬ್ರದರ್' ನಂತಹ ನಾನಾ ರೀತಿಯ ಕಾರ್ಯಕ್ರಮಗಳನ್ನು ನಾವು ನೋಡಬಹುದಾಗಿದೆ.

ಭಾರತದಲ್ಲಿ ಮೊದಲು ಹಿಂದಿಯಲ್ಲಿ ಬಿಗ್ ಬಾಸ್ ಎಂಬ ಕಾರ್ಯಕ್ರಮ ಆರಂಭವಾಯಿತು. 2006ರಲ್ಲಿ ಸೋನಿ ಟಿವಿಯಲ್ಲಿ ಪ್ರಸಾರವಾದ ಮೊದಲ ಬಿಗ್ ಬಾಸ್ ಸೀಸನ್ ಸುಮಾರು 86 ದಿನಗಳ ಕಾಲ ನಡೆಯಿತು. ಪ್ರಸ್ತುತ ಹಿಂದಿ ಬಿಗ್ ಬಾಸ್ 18ನೇ ಸೀಸನ್‌ನಲ್ಲಿ ಮುಂದುವರೆಯುತ್ತಿದೆ. ನಟ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ಬಂದಿದ್ದಾರೆ.

ಕನ್ನಡ ಕಿರುತೆರಯಲ್ಲಿ 2013 ರಿಂದ ಬಿಗ್ ಬಾಸ್ ಸೀಸನ್‌ಗಳು ಆರಂಭವಾಗಿವೆ. ಪ್ರತಿ ವರ್ಷ ಸುಮಾರು ಮೂರು ತಿಂಗಳ ಕಾಲ ಅಥವಾ 100 ದಿನಗಳ ಕಾಲ ಈ ಕಾರ್ಯಕ್ರಮ ಮುಂದುವರೆಯಲಿದ್ದು, ಈವರೆಗೂ ಅತಿ ಹೆಚ್ಚು ಟಿಆರ್‌ಪಿಗಳಿಸುತ್ತಾ ಬಂದಿರುವ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ. ಸದ್ಯಕ್ಕೆ 11ನೇ ಸೀಸನ್‌ನಲ್ಲಿದೆ ಕನ್ನಡದ ಬಿಗ್ ಬಾಸ್. ನಟ ಕಿಚ್ಚ ಸುದೀಪ್ ಅವರು ಕಳೆದ 11 ವರ್ಷಗಳಿಂದಲೂ ಈ ಸೀಸನ್‌ಗಳನ್ನು ನಡೆಸಿಕೊಡುತ್ತಾ ಬಂದಿದ್ದಾರೆ.

Do you know where did the idea of Bigg Boss come from

ಬಿಗ್ ಬ್ರದರ್ ಎಂಬ ಈ ಕಲ್ಪನೆಯ ಹಿಂದೂ ಒಂದು ಆಸಕ್ತಿದಾಯಕ ವಿಚಾರವಿದೆ. 1948ರಲ್ಲಿ ಜಾರ್ಜ್ ಆರ್ವೆಲ್ ಎಂಬ ಇಂಗ್ಲಿಷ್ ಕಾದಂಬರಿಗಾರ "ಸಾವಿರದ ಒಂಬೈನೂರ ಎಂಬತ್ನಾಲ್ಕು(1984)" ಎಂಬ ಕಾದಂಬರಿಯನ್ನು ಬರೆದರು. ಒಂದು ಪ್ರದೇಶದ ಜನರನ್ನು, ಸದಾ ಕಣ್ಗಾವಿಲಿನಲ್ಲಿಡುವ ಒಂದು ರಾಜಕೀಯ ಕಾದಂಬರಿ ಅದಾಗಿತ್ತು. ಆ ಕಾದಂಬರಿಯುದ್ದಕ್ಕೂ "ಬಿಗ್ ಬ್ರದರ್ ಈಸ್ ವಾಚಿಂಗ್ ಯು!" ( ಬಿಗ್ ಬ್ರದರ್ ನಿನ್ನನ್ನು ನೋಡುತ್ತಿದ್ದಾನೆ) ಎಂಬ ವಾಕ್ಯ ಜನರಲ್ಲಿ ಹೆದರಿಕೆಯನ್ನು ಹುಟ್ಟಿಸುತ್ತದೆ. ಹೀಗಿರುವಾಗ ಜನರು ಸಹಜವಾಗಿ ಜೀವನವನ್ನು ನಡೆಸಲು ಸಾಧ್ಯವೇ ಆಗುವುದಿಲ್ಲ. ಸದಾ ಇನ್ನೊಬ್ಬರ ಕಣ್ಗಾವಲಿನಡಿ ನಡೆಸುವ ಜೀವನ ಬಹಳ ಚಾಲೆಂಜಿಂಗ್ ಆಗಿರುತ್ತದೆ. ಈ ಕಾದಂಬರಿಯ ಇಂಥದ್ದೇ ಒಂದು ಕಲ್ಪನೆಯಲ್ಲಿ 'ಬಿಗ್ ಬ್ರದರ್' ಎಂಬ ರಿಯಾಲಿಟಿ ಶೋ ಆರಂಭವಾಗಿದೆ ಎನ್ನಲಾಗಿದೆ.

ಇಂದು ಬಿಗ್ ಬಾಸ್ ಅಥವಾ ಬಿಗ್ ಬ್ರದರ್ ನಂತಹ ರಿಯಾಲಿಟಿ ಶೋಗಳು ನಾನಾ ರೂಪಗಳನ್ನು ಪಡೆದು ಜಗತ್ತಿನಾದ್ಯಂತ ನಡೆಯುತ್ತಾ ಬಂದಿದೆ. ಪ್ರಸ್ತುತ ಭಾರತದಲ್ಲಿ ಹಿಂದಿ ಬಿಗ್ ಬಾಸ್ ಬಿಟ್ಟರೆ ಕನ್ನಡ ಬಿಗ್ ಬಾಸ್, ತೆಲುಗು, ತಮಿಳು, ಮಲಯಾಳಂ ಹೀಗೆ ನಾನಾ ಭಾಷೆಗಳಲ್ಲಿ ನಾನಾ ರಾಜ್ಯಗಳಲ್ಲಿ ಬಿಗ್ ಬಾಸ್ ಬೇರೆ ಬೇರೆ ಸೀಸನ್ ಗಳು ಚಾಲ್ತಿಯಲ್ಲಿದೆ.

ಕಿರುತೆರೆ ಅಂದಾಕ್ಷಣ ಧಾರಾವಾಹಿಗಳೇ ವೀಕ್ಷಕರನ್ನು ಮೊದಲು ಸೆಳೆಯುವುದು. ಆದರೆ ಬಿಗ್ ಬಾಸ್ ನಂತಹ ರಿಯಾಲಿಟಿ ಶೋ ಎಂತಹ ವೀಕ್ಷಕರನ್ನೂ ತನ್ನಡೆಗೆ ಸೆಳೆದು ಬರೋಬ್ಬರಿ ಮೂರು ತಿಂಗಳ ಕಾಲ ತನ್ನಡೆಗೆ ಗಮನವಿರುವಂತೆ ಮಾಡುವುದು ವಿಶೇಷ. ಆ ರೀತಿಯಾಗಿ ಇಡೀ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ನಾನಾ ಕ್ಷೇತ್ರಗಳಿಂದ ಸೆಲೆಬ್ರಿಟಿಗಳನ್ನು, ನಾನಾ ರೀತಿಯ ವ್ಯಕ್ತಿತ್ವವಿರುವ ಜನರನ್ನು ಒಂದೇ ಮನೆಯಲ್ಲಿ ನೂರು ದಿನಗಳ ಕಾಲ ಒಟ್ಟು ಹಾಕಿ ಅವರ ನಡೆ ನುಡಿ ಹೊಂದಾಣಿಕೆಯನ್ನು ಬಿಗ್ ಬಾಸ್ ಎಂಬ ಅಶರೀರವಾಣಿ ಹಾಗೂ ಆ ಕಾರ್ಯಕ್ರಮದ ನಿರೂಪಕರು ಕಂಟ್ರೋಲ್ ಮಾಡುತ್ತಿರುತ್ತಾರೆ.

ಅರಮನೆಯಂತಹ ಮನೆ, ಮನೆ ತುಂಬಾ ಕ್ಯಾಮೆರಾಗಳು, ಎಲ್ಲ ರೀತಿಯ ಐಷಾರಾಮಿ ಸೌಕರ್ಯಗಳಿದ್ದರೂ ಸಹ ಮನೆಯಲ್ಲಿನ ಸ್ಪರ್ಧಿಗಳು ಮಾತ್ರ ಪ್ರತೀ ಸೌಲಭ್ಯವನ್ನು ಬಿಗ್ ಬಾಸ್ ಕೊಡುವ ಬೇರೆ ಬೇರೆ ಆಟಗಳನ್ನು ಆಡಿಯೇ ಸಂಪಾದಿಸಬೇಕು. ಅದೇ ಈ ಇಡೀ ರಿಯಾಲಿಟಿ ಶೋ ಹಿಂದಿನ ವಿಶೇಷ.

More from Filmibeat

English summary
Do you know where did the idea of ​​Bigg Boss come from?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X