ಕಿರುತೆರೆಯಲ್ಲಿ ಪ್ರಸಾರವಾದ ಈ ಸ್ತ್ರೀ ಪ್ರಧಾನ ಧಾರಾವಾಹಿಗಳನ್ನು ನೀವು ನೋಡಿದ್ದೀರಾ?

By ಅನಿತಾ ಬನಾರಿ

ಸಾಮಾನ್ಯವಾಗಿ ಕಿರುತೆರೆಯಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮಗಳಲ್ಲಾಗಲಿ ಧಾರಾವಾಹಿಗಳಲ್ಲಾಗಲಿ ಮಹಿಳೆಯರೇ ಪ್ರಮುಖ ವೀಕ್ಷಕರಾಗಿರುತ್ತಾರೆ.
ಹಾಗಾಗಿ ಎಷ್ಟೋ ಧಾರಾವಾಹಿಗಳು ಸ್ತ್ರೀ ಪ್ರಧಾನ ಕಥೆಗಳನ್ನೇ ಆಧರಿಸಿರುತ್ತವೆ. ಆದರೂ ಕಥೆ ಆರಂಭವಾದಾಗಲೇ ಒಂದು ದಿಕ್ಕಾದರೆ ಮುಂದುವರಿವಾಗ ಇನ್ಯಾವುದೋ ದಿಕ್ಕಿನಲ್ಲಿ ಸಾಗಿ ಹೇಗೆ ಹೇಗೋ ಕಥೆ ಮುಗಿಯುತ್ತದೆ.

ಮತ್ತೆ ಎಷ್ಟೋ ಧಾರಾವಾಹಿಗಳು ಬಹಳ ಅಚ್ಚುಕಟ್ಟಾಗಿ ಒಂದೇ ತತ್ವವನ್ನು ಆರಂಭದಿಂದ ಅಂತ್ಯದವರೆಗೂ ಹೇಳುವ ಮೂಲಕ ವೀಕ್ಷಕರಿಗೆ ಒಂದು ಒಳ್ಳೆ ಸ್ಪೂರ್ತಿಯನ್ನು ನೀಡುತ್ತದೆ. ಸ್ತ್ರೀಯರೇ ಪ್ರಮುಖ ವಿಕ್ಷಕರಾಗಿರುವುದರಿಂದ ಸ್ತ್ರೀ ಪ್ರಧಾನ ಧಾರಾವಾಹಿಗಳು ಅದರಲ್ಲೂ ಸ್ತ್ರೀ ಸಬಲೀಕರಣದ ಕಥೆಯುಳ್ಳ ಧಾರಾವಾಹಿಗಳು ಹೆಚ್ಚಿನ ಮನ್ನಣೆಗೆ ಪಾತ್ರವಾಗಿವೆ.

Do you know which are the female lead serials in Kannada that aired on television

ಕಾದಂಬರಿ

ಹೆಚ್ಚು ಕಮ್ಮಿ ಎರಡು ದಶಕದ ಹಿಂದೆ ಆರಂಭವಾದ ಕಾದಂಬರಿ ಧಾರಾವಾಹಿ ಕನ್ನಡ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿತ್ತು. ಆ ಕಾಲಕ್ಕೆ ಇದು ಮೊಟ್ಟಮೊದಲ ಸ್ತ್ರೀ ಪ್ರಧಾನವಾಗಿ ಎಂದರೆ ತಪ್ಪಾಗಲ್ಲ. ಹೇಗೆ ಒಬ್ಬ ಹೆಣ್ಣು ಸಂಕಷ್ಟಗಳನ್ನೆಲ್ಲ ಎದುರಿಸಿ ಸಬಲೆಯಾಗಿ ಸಮಾಜದಲ್ಲಿ ನಿಲ್ಲಬಲ್ಲಳು ಎಂಬ ಸಂದೇಶವನ್ನು ಬಹಳ ಅಚ್ಚುಕಟ್ಟಾಗಿ ಧಾರಾವಾಹಿ ಮೂಲಕ ತೋರಿಸಲಾಗಿತ್ತು. ನಟಿ ಶ್ವೇತಾ ಚಂಗಪ್ಪ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಕಲಾವಿದರಾದ ರಾಧಿಕಾ ಪಂಡಿತ್, ಸಿಂಧೂ ಕಲ್ಯಾಣ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಕನಕ

ದಶಕದ ಹಿಂದೆ ಕನಕ ಎಂಬ ಧಾರಾವಾಹಿಯು ಬಹಳಷ್ಟು ಪಾಪ್ಯುಲಾರಿಟಿ ಗಳಿಸಿತ್ತು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ 'ಕನಕ' ಎಂಬ ಹುಡುಗಿಯ ಮನೋಜ್ ಧೈರ್ಯವನ್ನು ಬಹಳ ಚೆನ್ನಾಗಿ ತೋರಿಸಿತ್ತು. ಬಸ್ ಕಂಡಕ್ಟರ್ ಆಗಿ ಕನಕ ಪಾತ್ರ ವೀಕ್ಷಕರ ಮನ ಗೆದ್ದಿತ್ತು. ಕಲಾವಿದರಾದ ಸುನಿಲ್ ಪುರಾಣಿಕ್, ಸುಷ್ಮಾ, ರಿತು, ಪ್ರಕಾಶ್ ಮುಂತಾದವರು ನಟಿಸಿದ್ದರು.

Do you know which are the female lead serials in Kannada that aired on television

ಮಗಳು ಜಾನಕಿ

ಟಿಎನ್ ಸೀತಾರಾಮ್ ಅವರೇ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಧಾರಾವಾಹಿ, ಜಾನಕಿ ಎಂಬ ಹುಡುಗಿಯ ಕಥೆಯಾಗಿತ್ತು. ಬಿ ಎ ಫೇಲ್ ಆಗುತ್ತಾ, ಜಗತ್ತಿನ ಅರಿವಿಲ್ಲದ ಹುಡುಗಿ ಜಾನಕಿ, ತನ್ನ ಮುಗ್ಧತೆಯಿಂದ ಮಲ ತಂದೆಯಿಂದ ಮೋಸ ಕೊಳಗಾಗುತ್ತಾ ಸಂಕಷ್ಟದ ಜೀವನ ಬದುಕುತ್ತಿರುವಾಗಲೇ, ಐಪಿಎಸ್ ಮಾಡುವ ಪಣತೊಟ್ಟು ಎಲ್ಲಾ ಮೋಸ ಅನಾಚಾರಗಳನ್ನು ಎದುರಿಸುವ ಗಟ್ಟಿಗಿತ್ತಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಾಳೆ. ಜಾನಕಿ ಪಾತ್ರದ ಈ ಪರಿವರ್ತನೆ ಪ್ರೇಕ್ಷಕರಿಗೆ ಬಹಳ ಹಿಡಿಸಿತ್ತು.

ಭಾಗ್ಯಲಕ್ಷ್ಮಿ

ಪ್ರಸ್ತುತ ಭಾಗ್ಯಲಕ್ಷ್ಮಿ ಧಾರವಾಹಿ ಜನಮನ ಗೆಲ್ಲುತ್ತಿದೆ. ಗಂಡನಿಂದ ಮೋಸ ಕೊಳಗದ ಭಾಗ್ಯ ಕೊನೆಗೂ ಗಂಡ ತಾಂಡವ್ಗೆ ಡಿವೋರ್ಸ್ ನೀಡಿದ್ದಾಳೆ. ತನ್ನೆರಡು ಮಕ್ಕಳನ್ನು ಅತ್ತೆ ಮಾವ ತಂದೆ ತಾಯಿ ಎಲ್ಲರನ್ನು ತಾನೇ ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದಾಳೆ. ಭಾಗ್ಯಲಕ್ಷ್ಮಿ ಧಾರವಾಹಿಯ ಕಥೆ ಮನೆಮನೆಗೂ ತಲುಪಿ, ಬಹಳಷ್ಟು ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ ಎಂದರೆ ತಪ್ಪಾಗಲ್ಲ.

ಯುಗಾಂತರ

ಸೇತುರಾಮ್ ಅವರ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಯುಗಾಂತರ ಧಾರಾವಾಹಿಯಲ್ಲಿ, ಅರುಂಧತಿ ಎಂಬ ಪಾತ್ರ ಜನಮನ ಗೆದ್ದಿತ್ತು. ಬಾಲ್ಯದಿಂದಲೂ ಬಹಳಷ್ಟು ಸಂಕಷ್ಟಗಳನ್ನು ಎದುರಿಸುವ ಅರುಂಧತಿ, ನಂತರ ಹಳ್ಳಿಯಿಂದ ದಿಲ್ಲಿಗೆ ಸೇರಿ ಐಎಎಸ್ ಮಾಡಿ ನಂತರ ತನ್ನದೇ ಊರಿಗೆ ಜಿಲ್ಲಾಧಿಕಾರಿಯಾಗಿ ಬಂದು ನಡೆಯುತ್ತಿರುವ ಅನಾಚಾರ ಭ್ರಷ್ಟಾಚಾರವನ್ನು ತಡೆಯುವ ಪಣತೊಡುತ್ತಾಳೆ. ಎಂತದ್ದೇ ಸಂದರ್ಭ ಬಂದರು ಯಾವುದನ್ನು ಗಟ್ಟಿಯಾಗಿ ಎದುರಿಸುವ ಅವಳ ಛಲ ಪ್ರೇಕ್ಷಕರಿಗೆ ಅಚ್ಚುಮೆಚ್ಚಾಗಿತ್ತು.

ಶಾಂತಿ ನಿವಾಸ

ಪ್ರಸ್ತುತ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂತಿ ನಿವಾಸ ಧಾರವಾಹಿಯ ಶಾಂತಿ ಪಾತ್ರವು ಜನ ಮೆಚ್ಚುಗೆ ಪಡೆದಿದೆ. ನಟಿ ನಿತ್ಯ ರಾಮ್ ಅವರ ನಟನೆಯಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಯಲ್ಲಿ ಶಾಂತಿಯ ದೃಢ ನಿರ್ಧಾರಗಳು, ಎಲ್ಲ ಕಷ್ಟಗಳನ್ನು ಎದುರಿಸಲು ತೊಟ್ಟಿರುವ ಸಂಕಲ್ಪ ಬಹಳಷ್ಟು ಹೆಣ್ಣು ಮಕ್ಕಳಿಗೆ ಧೈರ್ಯ ನೀಡುತ್ತಿದೆ.

More from Filmibeat

English summary
Do you know which are the female lead serials in Kannada that aired on television?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X