'ಬ್ರಹ್ಮಗಂಟು' ಖ್ಯಾತಿಯ ನಟ ಭುವನ್ ಸತ್ಯ ಮೊದಲ ಧಾರಾವಾಹಿ ಯಾವುದು?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಬ್ರಹ್ಮಗಂಟು' ಕೂಡಾ ಒಂದು. ರೂಪಾ, ದೀಪಾ ರನ್ಜುಚ ಇಬ್ಬರೂ ಹುಡುಗಿಯರ ಜೀವನದ ಮಧ್ಯೆ ನಡೆಯುವ ಕತೆಯೇ ಧಾರಾವಾಹಿಯ ಕಥಾಹಂದರ. ನಾಯಕ ಚಿರಾಗ್‌ನನ್ನು ಮದುವೆಯಾಗಬೇಕಿದ್ದ ರೂಪಾಗೆ ಮೊದಲಿನಿಂದಲೂ ಸಿನಿಮಾ ನಟಿಯಾಗಬೇಕೆಂಬ ಹುಚ್ಚು ಆಸೆ. ಆಕೆಯ ಪ್ರಿಯಕರ ಅರವಿಂದ್ ಬಣ್ಣ ಬಣ್ಣದ ಮಾತುಗಳಿಂದ ಆಕೆಗೆ ಮರಳು ಮಾಡುತ್ತಿರುತ್ತಾನೆ. ಮಾತ್ರವಲ್ಲ ನಟಿಯಾಗಬೇಕು ಎಂಬ ಕಾರಣದಿಂದ ಮದುವೆ ಮಂಟಪದಿಂದ ಆಕೆ ಓಡಿ ಹೋಗುತ್ತಾಳೆ.

ಆ ಸಮಯದಲ್ಲಿ ನಿಗದಿಯಾದ ಮದುವೆ ನಿಲ್ಲಬಾರದೆಂದು ರೂಪಾಳ ತಂಗಿ ದೀಪಾ ನಾಯಕ ಚಿರಾಗ್‌ನ ಕೈ ಹಿಡಿಯುತ್ತಾಳೆ. ನೋಡಲು ಕಪ್ಪಾಗಿರುವ ಆಕೆಯನ್ನು ನಾಯಕ ಹಾಗೂ ಅವನ ಅತ್ತಿಗೆ ಸೊಸೆಯೆಂದು ಒಪ್ಪಿಕೊಳ್ಳುವುದಿಲ್ಲ. ಗಂಡನನ್ನನ್ನು ಒಪ್ಪುವಂತೆ ಮಾಡಿಯೇ ಮಾಡುತ್ತೇನೆ ಎಂಬುದು ದೀಪಾಳ ಚಾಲೆಂಜ್. ಆ ಚಾಲೆಂಜ್ ಅನ್ನು ಪೂರೈಸುವುದೇ ಅವಳ ಮುಖ್ಯ ಗುರಿ.

Do you know which is the first serial Brahmagantu fame of Bhuvan Sathya

ಇನ್ನು ನಾಯಕ ಚಿರಾಗ್ ಆಗಿ ನಟಿಸುತ್ತಿರುವ ಭುವನ್ ಸತ್ಯ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ. ಅಂದ ಹಾಗೇ ಭುವನ್ ಸತ್ಯ ಅವರಿಗೆ 'ಬ್ರಹ್ಮಗಂಟು' ಎರಡನೇ ಧಾರಾವಾಹಿ. ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಣ್ಯವತಿ' ಧಾರಾವಾಹಿಯಲ್ಲಿಯೂ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು ಭುವನ್ ಸತ್ಯ.

ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿ, ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭುವನ್ ಸತ್ಯ 'ಪುಣ್ಯವತಿ' ಧಾರಾವಾಹಿ ಮುಗಿದ ಒಂದೇ ವರ್ಷಕ್ಕೆ ಕಿರುತೆರೆಯಿಂದ ದೂರವಿರಬೇಕಾಯಿತು. ಹೌದು, 'ಪುಣ್ಯವತಿ' ಧಾರಾವಾಹಿಯು ಶುರುವಾದ ಒಂದೇ ವರ್ಷಕ್ಕೆ ತನ್ನ ಪ್ರಸಾರ ನಿಲ್ಲಿಸಿತ್ತು. ಟಿಆರ್‌ಪಿ ಕಡಿಮೆ ಇದ್ದ ಕಾರಣದಿಂದಲೋ ಏನೋ, ಸುಖಾಂತ್ಯ ಕಾಣುವ ಮೂಲಕ 'ಪುಣ್ಯವತಿ' ಧಾರಾವಾಹಿ ಕೊನೆಗೊಂಡಿತ್ತು.

ಧಾರಾವಾಹಿ ಇದ್ದಕ್ಕಿದ್ದಂತೆ ಮುಕ್ತಾಯಗೊಂಡಿದ್ದರೂ, ಭುವನ್ ಸತ್ಯ ಅವರ ನಟನೆಗೆ ಇದ್ದ ಫಾಲೋವರ್ಸ್ ಕಡಿಮೆಯಾಗಲಿಲ್ಲ. ಬದಲಿಗೆ ಭುವನ್ ಅವರನ್ನು ಮತ್ತೆ ಕಿರುತೆರೆಯಲ್ಲಿ ನೋಡುವ, ನಟನೆಯನ್ನು ನೋಡಿ ಕಣ್ತುಂಬಿಸಿಕೊಳ್ಳುವ ಇರಾದೆಯನ್ನು ಜನ ಹೊರಹಾಕಿದ್ದರು. ಅದೇ ಕಾರಣವಿರಬೇಕು, 'ಪುಣ್ಯವತಿ' ಧಾರಾವಾಹಿ ಮುಗಿದು ವರ್ಷ ಕಳೆಯುವಷ್ಟರಲ್ಲಿ ಚಿರಾಗ್ ಆಗಿ ಕಿರುತೆರೆಗೆ ಮರಳಿದರು ಭುವನ್ ಸತ್ಯ.

Do you know which is the first serial Brahmagantu fame of Bhuvan Sathya

ಇದೀಗ ಚಿರಾಗ್ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸುತ್ತಿರುವ ಭುವನ್ ಸತ್ಯ ನಟನೆಯ ಹೊರತಾಗಿ ನೃತ್ಯ ಕ್ಷೇತ್ರದಲ್ಲಿಯೂ ಕೊಂಚ ಮಟ್ಟಿಗೆ ಗುರುತಿಸಿಕೊಂಡವರು. ಇನ್ನು ನಟನೆಯ ಹೊರತಾಗಿ ಇನ್‌ಸ್ಟಾಗ್ರಾಂನಲ್ಲೂ ಇವರು ಸಕತ್ ಆ್ಯಕ್ಟೀವ್. ಬಿಡುವು ಸಿಕ್ಕಾಗಲೆಲ್ಲಾ ಫೋಸ್ಟ್ ಗಳನ್ನು ಹಾಕುವ ಮೂಲಕ ಫಾಲೋವರ್ಸ್ ಎಂಗೇಜ್ ಆಗಿಡುತ್ತಾರೆ. ಇನ್ನು 'ಬ್ರಹ್ಮಗಂಟು' ಧಾರಾವಾಹಿಗೆ ಸಂಬಂಧಿಸಿದ ರೀಲ್ಸ್ ಅನ್ನು ಶೇರ್ ಮಾಡಿದ್ದು ಅವೆಲ್ಲವೂ ಮಿಲಿಯನ್ ಗಟ್ಟಲೇ ವೀವ್ಸ್ ಪಡೆದಿದೆ.

ಒಟ್ಟಿನಲ್ಲಿ ಅತ್ಯದ್ಭುತ ನಟನಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಭುವನ್ ಸತ್ಯ ಮುಂದೊಂದು ದಿನ ಸಿನಿಮಾಎಲ್ಲಿ ನಟಿಸಿದರೆ ಅಶ್ಚರ್ಯವೇನಿಲ್ಲ. ಬದಲಿಗೆ ಸಿನಿಪ್ರಿಯರ ಪಾಲಿಗೆ ಒರ್ವ ಅದ್ಭುತ ನಟ ಸಿಕ್ಕ ಎಂದು ಖುಷಿಪಡಬೇಕಷ್ಟೆ.

More from Filmibeat

English summary
Do you know which is the first serial Brahmagantu fame of Bhuvan Sathya?
Read more about: actor serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X