ಪುಟಾಣಿ ಪ್ರತಿಭೆಗಳಿಗೆ ವೇದಿಕೆಯಾಗುತ್ತಿರುವ ರಿಯಾಲಿಟಿ ಶೋಗಳು ಯಾವುವು ಗೊತ್ತೇ?

By ಅನಿತಾ ಬನಾರಿ

ಇಂದು ಭಿನ್ನ ವಿಭಿನ್ನವಾದ ರಿಯಾಲಿಟಿ ಶೋಗಳು ಜನ ಗಮನ ಸೆಳೆಯುತ್ತಿವೆ. ಅದರಲ್ಲೂ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಹಲವಾರು ರಿಯಾಲಿಟಿ ಶೋಗಳು ಮುಂಬರುತಿದ್ದು ಒಳ್ಳೆಯ ಟಿಆರ್‌ಪಿ ಜೊತೆಗೆ ಮಕ್ಕಳ ಪ್ರತಿಭೆಗೆ ಒಂದೊಳ್ಳೆಯ ವೇದಿಕೆಯಾಗುತ್ತಿದೆ.

ಮಕ್ಕಳಿಗೆ ಆತ್ಮವಿಶ್ವಾಸವನ್ನು ಮೂಡಿಸಲು, ಹತ್ತು ಜನರ ಮುಂದೆ ನಿಂತು ಮಾತನಾಡಲು ಅಥವಾ ಯಾವುದಾದರೂ ಕಲೆಯನ್ನು ಪ್ರದರ್ಶಿಸಲು ಸರಿಯಾದ ವೇದಿಕೆಗಳನ್ನು ಈ ರಿಯಾಲಿಟಿ ಶೋಗಳು ಬಹಳ ಉತ್ತಮ ರೀತಿಯಲ್ಲಿ ನೀಡುತ್ತಿವೆ. ಇದರ ಜೊತೆಗೆ ಮಕ್ಕಳಿಗೆ ಸಿಗುವ ಐಡೆಂಟಿಟಿ ಅವರನ್ನು ಒಂದೊಳ್ಳೆ ದಾರಿಯಲ್ಲಿ ಮುನ್ನಡೆಯಲು ಅವಕಾಶ ಮಾಡಿಕೊಡುತ್ತದೆ.

Do you know which Kannada reality shows are made for kids

ಕನ್ನಡ ಕಿರುತೆರೆಯೆಲ್ಲಂತೂ ಮಕ್ಕಳಿಗಾಗಿರುವ ಹಲವಾರು ರಿಯಾಲಿಟಿ ಶೋಗಳು ಈ ಕೆಲಸವನ್ನು ಮಾಡುತ್ತಾ ಬಂದಿದೆ. 'ಕುಣಿಯೋಣು ಬಾರ' ಎಂಬ ಡ್ಯಾನ್ಸ್ ರಿಯಾಲಿಟಿ ಶೋ ದಶಕದ ಹಿಂದೆ ಹಲವು ಮಕ್ಕಳಿಗೆ ಡಾನ್ಸ್ ಮೂಲಕ ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಬಹುದೊಡ್ಡ ವೇದಿಕೆಯಾಗಿತ್ತು. ನಂತರ 'ಎದೆ ತುಂಬಿ ಹಾಡುವೆನು' ಕೂಡ ಬಹುದೊಡ್ಡ ಖ್ಯಾತಿಯನ್ನು ಪಡೆಯದಿದ್ದಷ್ಟೇ ಅಲ್ಲದೆ ಅಲ್ಲಿ ಭಾಗವಹಿಸಿದ ಮಕ್ಕಳಿಗೆ ಮುಂದೆ ಗಾಯನವನ್ನೇ ವೃತ್ತಿಯಾಗಿಸಲು ಒಳ್ಳೊಳ್ಳೆ ಅವಕಾಶಗಳನ್ನು ನೀಡಿತು.

'ಸರಿಗಮಪ' ಎಂಬ ಗಾಯನದ ರಿಯಾಲಿಟಿ ಶೋ ಅಂತೂ ಕಳೆದ ಹತ್ತು ವರ್ಷಗಳಿಂದ ಹಲವಾರು ಗಾಯಕರಿಗೆ ವೇದಿಕೆ ನೀಡಿದ್ದಷ್ಟೇ ಅಲ್ಲದೆ ಜೀವನದಲ್ಲಿ ಗಾಯನವನ್ನೇ ವೃತ್ತಿಯಾಗಿಸಿ ಮುನ್ನಡೆಯಲು ಬಹುದೊಡ್ಡ ಅವಕಾಶವನ್ನು ನೀಡುತ್ತಿದೆ.

'ಚಿಣ್ಣರ ಚಿಲಿಪಿಲಿ', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ನಂತಹ ರಿಯಾಲಿಟಿ ಶೋಗಳು ಮಕ್ಕಳ ಪ್ರತಿಭೆಗೆ ಇನ್ನಷ್ಟು ಸ್ಪೂರ್ತಿಯನ್ನು ತುಂಬುವ ಕೆಲಸ ಮಾಡುತ್ತಿವೆ. ಡ್ರಾಮಾ ಜೂನಿಯರ್ಸ್ ಎಂದು ಆರಂಭವಾದ ರಿಯಾಲಿಟಿ ಶೋ ಮಕ್ಕಳ ಅಭಿನಯ ಕಲೆ ಅಷ್ಟೇ ಅಲ್ಲದೆ, ಕನ್ನಡದ ಖ್ಯಾತ ನಟ ನಟಿಯರಿಂದ ಮಕ್ಕಳಿಗೆ ಯಾವ ರೀತಿ ಅಭಿನಯ ಮಾಡಿದರೆ ಸೊಗಸಾಗಿ ಕಾಣುತ್ತದೆ ಎಂಬುವ ವಿಚಾರವಾಗಿ ಬಹಳಷ್ಟು ತರಬೇತಿ ನೀಡಿತು.

ಈ ರಿಯಾಲಿಟಿ ಶೋಗಳಿಂದ ಮಕ್ಕಳಿಗೆ ವೇದಿಕೆ ಸಿಗುವುದು ಅಷ್ಟೇ ಅಲ್ಲದೆ, ಇನ್ನೂ ಹತ್ತಾರು ರೀತಿಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತದೆ.
ಇಂತಹ ವೇದಿಕೆಗಳಿಗೆ ಮಕ್ಕಳು ಆಯ್ಕೆಯಾಗಬೇಕೆಂದರೆ ಎರಡು ಮೂರು ಸುತ್ತಿನ ಆಡಿಶನ್ ಅನ್ನು ದಾಟಬೇಕು. ಅದಾದ ಮೇಲೆ ಕೊನೆಯದಾಗಿ ಆಯ್ಕೆಯಾದ ಮಕ್ಕಳು ತಮ್ಮಂತೆ ವೇದಿಕೆಗೆ ಬಂದ ಇತರೆ ಮಕ್ಕಳೊಂದಿಗೆ ಸ್ಪರ್ಧಿಸಬೇಕು. ಎರಡರಿಂದ ಮೂರು ತಿಂಗಳ ಕಾಲ ನಡೆಯುವ ಒಂದು ರಿಯಾಲಿಟಿ ಶೋನಲ್ಲಿ ಮಕ್ಕಳು, ಸ್ಪರ್ಧಾ ಮನೋಭಾವದ ಜೊತೆಗೆ ಉಳಿದ ಸ್ಪರ್ಧಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ.

ಶಾಲೆಯಿಂದ ಎರಡು ಮೂರು ತಿಂಗಳ ಕಾಲ ಮಕ್ಕಳು ದೂರವಿದ್ದರೂ ಸಹ ರಿಯಾಲಿಟಿ ಶೋ ಮಕ್ಕಳಿಗೆ ಹತ್ತು ಹಲವು ಪಾಠಗಳನ್ನು ಹೇಳಿಕೊಡುತ್ತಿರುತ್ತದೆ. ಬರಿ ಓದು ಬರಹ ಎಂದಿರದೆ ಈ ರೀತಿಯಾಗಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳಿಗೆ ಹೊಸ ಪ್ರಪಂಚದ ಅರಿವಾಗುತ್ತದೆ. ರಿಯಾಲಿಟಿ ಶೋ ಗಳಲ್ಲಿ ಸೋತರು ಗೆದ್ದರೂ ಮಕ್ಕಳಿಗೆ ಅವರದೇ ಆದ ಐಡೆಂಟಿಟಿ ಸೃಷ್ಟಿಯಾಗುತ್ತದೆ ಇದು ಅವರಿಗೆ ಅದೆಷ್ಟು ಆತ್ಮವಿಶ್ವಾಸವನ್ನು ನೀಡುತ್ತದೆಂದರೆ ಮುಂದೆ ಸಿಗುವ ಯಾವುದೇ ಅವಕಾಶವನ್ನೂ ಬಿಡದೆ ಇದು ತನ್ನಿಂದ ಸಾಧ್ಯ ಎಂಬ ಮನೋಭಾವವನ್ನು ನೀಡುತ್ತದೆ.

ಇನ್ನು ಇಂತಹ ರಿಯಾಲಿಟಿ ಶೋಗಳಿಗೆ ಆಯ್ಕೆಯಾಗುವ ಮಕ್ಕಳು ಕೆಲವೇ ಆದರೂ ಇಂತಹದ್ದೇ ರಿಯಾಲಿಟಿ ಶೋಗಳನ್ನು ಟಿವಿ ಮುಂದೆ ಕುಳಿತು ನೋಡುವ ಹಲವು ಮಕ್ಕಳಿಗೆ ಈ ಮಕ್ಕಳು ಖಂಡಿತ ಸ್ಫೂರ್ತಿಯಾಗುತ್ತಾರೆ. ಈ ರೀತಿಯಾಗಿ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸುವ ಮಕ್ಕಳಷ್ಟೇ ಅಲ್ಲದೆ ಈ ಶೋಗಳನ್ನು ಟಿವಿ ಮುಂದೆ ಕುಳಿತು ನೋಡುವ ಮಕ್ಕಳಲ್ಲಿ ಕೂಡ ಮುಂದೆ ನಾನು ಒಂದು ದಿನ ಇಂತಹ ಶೋಗಳಿಗೆ ಹೋಗಬೇಕೆಂಬ ಆಸೆಯನ್ನು ಬಿತ್ತುತ್ತದೆ.

More from Filmibeat

English summary
Do you know which Kannada reality shows are made for kids
Read more about: reality show anitha banari tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X