ಹಿಂದಿಯಿಂದ ರಿಮೇಕ್ ಆದ ಕನ್ನಡ ಧಾರಾವಾಹಿಗಳು ಯಾವುವು ಗೊತ್ತಾ?

By ಅನಿತಾ ಬನಾರಿ

ಕನ್ನಡದಲ್ಲಿ ಹಲವು ಧಾರಾವಾಹಿಗಳು ಸೂಪರ್ ಹಿಟ್ ಆಗಿವೆ. ಬಹಳಷ್ಟು ಧಾರಾವಾಹಿಗಳು ಹಿಂದಿಯಿಂದ ರಿಮೇಕ್ ಆದ ದೊಡ್ಡ ಲಿಸ್ಟ್ ಇದೆ. ಈ ರಿಮೇಕ್ ಧಾರಾವಾಹಿಗಳು ಒಳ್ಳೆಯ ಕಥಾ ಹಂದರ, ಅದ್ಭುತ ನಟ ನಟಿಯರ ತಾರಾಗಣದಿಂದಲೇ ಕನ್ನಡ ಕಿರುತೆರೆ ಜನಮನ ಗೆದ್ದಿದೆ.

ಶೃತಿ ನಾಯ್ಡು ಅವರ ನಿರ್ದೇಶನದ 'ಪುನರ್ ವಿವಾಹ' ಧಾರಾವಾಹಿ ಕನ್ನಡ ಎಲ್ಲಿ ಬಹಳಷ್ಟು ಹೆಸರು ಮಾಡಿತ್ತು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಯಾವ ಸಿನಿಮಾಗೂ ಕಡಿಮೆ ಇಲ್ಲದಂತೆ ಬಹಳ ಅದ್ದೂರಿಯಾಗಿ ಹಲವು ವರ್ಷಗಳ ಕಾಲ ಜನ ಮನ ರಂಜಿಸಿತ್ತು. ಇದು ಹಿಂದಿಯ 'ಪುನರ್ವಿವಾಹ್' ಎಂಬ ಧಾರಾವಾಹಿಯ ರಿಮೇಕ್.

Do you know which Kannada serials have been remade from Hindi

ಆಕಾಶ ದೀಪ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕಾಶದ ದೀಪ' ಧಾರಾವಾಹಿ ವಿಭಿನ್ನ ಕಥಾ ಹೊಂದಿರದ ಮೂಲಕ ಜನರಾ ಮನಸೂರೆಗೊಂಡಿತ್ತು. ನಟಿ ದಿವ್ಯ ಶ್ರೀಧರ್ ಹಾಗೂ ನಟ ಪರೀಕ್ಷಿತ್ ಮುಖ್ಯ ತಾರಾಗಣದಲ್ಲಿ ಆರಂಭವಾದ ಈ ಧಾರಾವಾಹಿಯಲ್ಲಿ ಕಲಾವಿದರಾದ ನಮೃತ ಗೌಡ, ನಂದಿನಿ, ಮುಂತಾದವರು ನಟಿಸಿದ್ದರು. ಈ ಧಾರಾವಾಹಿ ಕೂಡ ಹಿಂದಿಯ ದಿ"ಯಾ ಅವ್ರ್ ಬಾತಿ ಹಂ" ಎಂಬ ಧಾರಾವಾಹಿಯ ರಿಮೇಕ್ ಆಗಿದೆ.

'ಪುಟ್ಟಗೌರಿ ಮದುವೆ'

ವಿಭಿನ್ನ ತಾರಾಗಣ ಹಾಗೂ ಪಾತ್ರಗಳ ಮೂಲಕ, ಬಹಳ ನವ್ಯವಾದ ಕಥಾಂದರ ಹೊಂದಿದ್ದ 'ಪುಟ್ಟಗೌರಿ ಮದುವೆ' ಹಲವು ವರ್ಷಗಳ ಕಾಲ ಕಿರುತೆರೆಯ ಹಿಟ್ ಧಾರಾವಾಹಿಗಳಲ್ಲೊಂದಾಗಿತ್ತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಅಸಲಿಗೆ ಹಿಂದಿಯ 'ಬಾಲಿಕ ವಧು' ಧಾರಾವಾಹಿಯ ರಿಮೇಕ್. ಕನ್ನಡದ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟರಾದ ಸಾನಿಯಾ ಅಯ್ಯರ್, ರಂಜಿನಿ ರಾಘವನ್, ರಕ್ಷ ಗೌಡ, ನಮೃತ ಗೌಡ ಮುಂತಾದವರು ನಟಿಸಿದ್ದಾರೆ.

ಸೀತಾ ರಾಮ

ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿ, ಜನರ ಫೆವರೇಟ್ ಧಾರಾವಾಹಿಗಳಲ್ಲೊಂದಾಗಿದೆ. ಈ ಧಾರಾವಾಹಿ ಕೂಡ ಮರಾಠಿ ಭಾಷೆಯ 'ಮಜಿ ತುಜಿ ರೇಷನ್ ಕಾರ್ಡ್' ಎಂಬ ಧಾರಾವಾಹಿಯ ರಿಮೇಕ್ ಆಗಿದೆ. ಈ ಧಾರಾವಾಹಿ ತೆಲುಗು ಮಲಯಾಳಂ ಭಾಷೆಗಳಲ್ಲೂ ರಿಮೇಕ್ ಆಗಿದೆ. ಕನ್ನಡದಲ್ಲಿ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್ ಚಿನ್ನಪ್ಪ, ರಿತು ಸಿಂಗ್ ಮುಖ್ಯ ತಾರಾಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಮೃತವರ್ಷಿಣಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಮೃತವರ್ಷಿಣಿ' ಧಾರಾವಾಹಿ ಹಲವು ವರ್ಷಗಳ ಕಾಲ ಪ್ರೇಕ್ಷಕರನ್ನು ತನ್ನಡೆಗೆ ಸೆಳೆದಿಟ್ಟಿತ್ತು. ಅಸಲಿಗೆ ಈ ಧಾರಾವಾಹಿ ಕೂಡ ಹಿಂದಿಯ 'ಸಾತ್ ನಿಧಾನ ಸಾಧ್ಯ' ಎಂಬ ಧಾರವಾಹಿಯ ರಿಮೇಕ್. ಕನ್ನಡದ ಅಮೃತವರ್ಷಿಣಿ ಧಾರಾವಾಹಿಯಲ್ಲಿ ಕಲಾವಿದರಾದ ಹೇಮಾ ಚೌಧರಿ, ರಜನಿ, ಸೂರ್ಯ ತೇಜಾ, ರಕ್ಷಿತ್ ಗೌಡ, ಮುಂತಾದವರು ಅಭಿನಯಿಸಿದ್ದರು. 2012ರಲ್ಲಿ ಆರಂಭವಾದ ಈ ಧಾರಾವಾಹಿ 5 ವರ್ಷಕ್ಕೂ ಹೆಚ್ಚಿನ ಕಾಲ ಜನಮನ ರಂಜಿಸಿತ್ತು.

ಅಮೃತಧಾರೆ

ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿ ಬಹಳ ಅದ್ದೂರಿಯಾದ ಸೀರಿಯಲ್ ಸೆಟ್, ಹಾಗೂ ವಿಭಿನ್ನ ಕಥಾಂದರದೊಂದಿಗೆ ಜನಮನ ಗೆಲ್ಲುತ್ತಿದೆ. ಕಲಾವಿದರಾದ ರಾಜೇಶ್ ನಟರಂಗ, ವನಿತಾ ವಾಸು, ಛಾಯಾಸಿಂಗ್, ಮುಂತಾದವರು ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಧಾರಾವಾಹಿ ಕೂಡ ಹಿಂದಿಯ 'ಬಡೇ ಅಚ್ಛೇ ಲಗ್ತೇ ಹೈ' ಎಂಬ ಧಾರಾವಾಹಿಯ ರೀಮೇಕ್ ಆಗಿದೆ.

More from Filmibeat

English summary
These serials, which have caught the attention of Kannada TV viewers, have been remade from Hindi,
Read more about: serials anitha banari hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X