ಯುವಗೆ ಜೋಡಿಯಾಗಿ ನಟಿಸುತ್ತಿರೋ ನಟಿ ಸಂಪದ ನಟಿಸಿದ ಸೀರಿಯಲ್‌ಗಳ್ಯಾವುವು ಗೊತ್ತೇ?
ನಟ ಯುವ ರಾಜ್ ಕುಮಾರ್ ಅವರು ಈಗಾಗಲೇ 'ಯುವ' ಎಂಬ ಸಿನಿಮಾ ಮೂಲಕ ಬಹಳಷ್ಟು ಖ್ಯಾತಿ ಗಳಿಸಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಗನಾದ ಇವರು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು ಇವರ ಅಭಿಮಾನಿಗಳು ಪ್ರೇಕ್ಷಕರು ಹಾಗೂ ರಾಜಕುಮಾರ್ ಕುಟುಂಬದ ಅಭಿಮಾನಿಗಳಿಗಂತೂ ಬಹಳ ಖುಷಿಯ ವಿಚಾರ. ಯುವ ಸಿನಿಮಾ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟ ನಟ ಇದೀಗ 'ಎಕ್ಕ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ನಟ ಯುವ ಅವರ ಎಕ್ಕ ಸಿನಿಮಾಗೆ ಸಂಪದ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. "ಎಕ್ಕ" ಸಿನಿಮಾ ತಂಡ ಈ ವಿಚಾರವನ್ನು ಹೊರಬಿಡುತ್ತಿದ್ದಂತೆ ನಟಿ ಸಂಪದ ಅವರ ಬಗ್ಗೆ ಬಹಳಷ್ಟು ಕುತೂಹಲಗಳು ಎದ್ದಿದೆ. ಹಾಗಾದರೆ ಯಾರು ಈ ನಟಿ ಸಂಪದ!?

ನಟಿ ಸಂಪದ ಮೂಲತಃ ಧಾರಾವಾಹಿಗಳ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಸದ್ಯಕ್ಕೆ 'ಎಕ್ಕ' ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಅಂದ ಹಾಗೆ ಈಕೆ ಬಹುಭಾಷಾ ನಟಿ ಎಂದರೆ ತಪ್ಪಾಗಲ್ಲ. ತೆಲುಗು ಸಿನಿಮಾ ರಂಗದಲ್ಲಿ ಈಗಾಗಲೇ ಕೆಲಸ ಮಾಡಿರುವ ನಟಿ ಸಂಪದ 'ಎಕ್ಕ' ಸಿನಿಮಾದ ಕಥಾ ಹಂದರ ಬಹಳ ಹಿಡಿಸಿ ಅದರ ಪಾತ್ರವನ್ನು ಮೆಚ್ಚಿ ಈ ಪಾತ್ರಕ್ಕೆ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಯುವ ರಾಜಕುಮಾರ್ ಹಾಗೂ ಸಂಪದ ಅವರ 'ಎಕ್ಕ' ಸಿನಿಮಾಗೆ ಇದೇ ನವೆಂಬರ್ 28ರಂದು ಮುಹೂರ್ತ ನೆರವೇರಿದೆ. ಶೂಟಿಂಗ್ ಈಗಾಗಲೇ ಆರಂಭಗೊಂಡಿದ್ದು, ಈ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಆಗಲೇ ಒಂದಷ್ಟು ಕುತೂಹಲ ಮೂಡಿದೆ ಎಂದರೆ ಸುಳ್ಳಲ್ಲ.

ನಟ ಯುವ ರಾಜ್ ಕುಮಾರ್ ಅವರೊಂದಿಗೆ ಎಕ್ಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳಲು ಬಹಳ ಎಕ್ಸೈಟ್ ಆಗಿದ್ದೇನೆ. ಇದು ನನ್ನ ನಟನಾ ಕೆರಿಯರ್‌ಗೆ ಬಹಳ ದೊಡ್ಡ ಪ್ರಾಜೆಕ್ಟ್ ಆಗಿದ್ದು, ಈ ಬಗ್ಗೆ ನನಗೆ ಬಹಳಷ್ಟು ನಿರೀಕ್ಷೆಗಳಿವೆ. ಈ ಸಿನಿಮಾದಲ್ಲಿನ ನನ್ನ ಪಾತ್ರ ನನಗೆ ಇಷ್ಟವಾಗಿದ್ದು ಕಥೆ ಹಾಗೂ ಪಾತ್ರವನ್ನು ನೋಡಿ ಸಿನಿಮಾ ಒಪ್ಪಿಕೊಂಡೆ" ಎಂಬುದಾಗಿ ನಟಿ ಸಂಪದ ಎಕ್ಕ ಸಿನಿಮಾದ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅಂದಹಾಗೆ 'ಎಕ್ಕಾ' ಸಿನಿಮಾದಲ್ಲಿ ಇಬ್ಬರು ನಾಯಕ ನಟಿಯರಿರುವುದಾಗಿ ವಿಚಾರ ಕೇಳಿ ಬಂದಿದೆ. ನಟಿ ಸಂಪದ ಅವರು ತಮ್ಮ ಪಾತ್ರವನ್ನು ಮೆಚ್ಚಿ ಒಪ್ಪಿಕೊಂಡಿದ್ದಾರಂತೆ. ಮೊದಲೇ ಹೇಳಿದಂತೆ ಈಗಾಗಲೇ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಪಿಆರ್ ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್, ಹಾಗೂ ಕೆ ಆರ್ ಜಿ ಪ್ರಾಡಕ್ಟ್ಸ್ ಜಂಟಿಯಾಗಿ ಈ ಸಿನಿಮಾಗೆ ಹಣ ಹೂಡಿದೆ.
ನಟಿ ಸಂಪದಾಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈ ಮೊದಲು ಪ್ರಜ್ವಲ್ ದೇವರಾಜ್ ಅವರೊಂದಿಗೆ ಕರಾವಳಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ ನಟಿ ಸಂಪದ. ಇದರ ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರ 'ರೈಡರ್' ಸಿನಿಮಾದ ಪ್ರಮುಖ ಪಾತ್ರ ಒಂದರಲ್ಲಿ ನಟಿ ಸಂಪದ ನಟಿಸಿದ್ದಾರೆ. ಆಗಲೇ ಹೇಳಿದಂತೆ ಬಹುಭಾಷಾ ನಟಿಯಾಗಿರುವ ನಟಿ ಸಂಪದ ತೆಲುಗಿನ ವಿಶ್ವಕ್ ಸೆನ್ ಅವರಂದಿಗೂ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಕೆಲಸ ಇದೀಗ ಬಿರುಸಿನಿಂದ ಸಾಗಿದೆ.
ಒಟ್ಟಿನಲ್ಲಿ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಒಂದರಲ್ಲಿ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಸಂಪದ ಅವರ ನಟನೆ ಹಾಗೂ ಪಾತ್ರದ ಬಗ್ಗೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಅದರಲ್ಲೂ ಯುವ ಅವರ ಅಭಿಮಾನಿಗಳಿಗೆ ಕುತೂಹಲ ಮೂಡಿರುವುದಂತೂ ನಿಜ.


Click it and Unblock the Notifications











