ಹಿರಿಯ ನಟಿ ವಿನಯ್ ಪ್ರಸಾದ್ ಪುತ್ರಿ ಪ್ರಥಮಾ ಪ್ರಸಾದ್ ಪತಿ ಯಾರು ಗೊತ್ತೇ?
ಖ್ಯಾತ ಬಹುಭಾಷಾ ನಟಿ ವಿನಯಾ ಪ್ರಸಾದ್ ಅವರ ಮಗಳು ಪ್ರಥಮಾ ಇಂದು ಕಿರುತೆರೆಯಲ್ಲಿ ನಟಿಯಾಗಿ, ಡ್ಯಾನ್ಸರ್ ಆಗಿ ತನ್ನದೇ ಅಸ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕರಿಮಣಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಂದ ಹಾಗೆ ನಿಮಗೆ ಪ್ರಥಮಾ ಪ್ರಸಾದ್ ಅವರ ಪತಿ ಯಾರು ಎಂಬುದು ಗೊತ್ತೇ?
ನಟಿ ಹಾಗೂ ಡ್ಯಾನ್ಸರ್ ಪ್ರಥಮಾ ಪ್ರಸಾದ್ ಅವರ ಪತಿ ಸೂರ್ಯ ರಾವ್ ಕೂಡ ಒಬ್ಬ ಅಪ್ಪಟ ನೃತ್ಯ ಕಲಾವಿದ. ಮಾಯಾ ರಾವ್ ಅವರ ಶಿಷ್ಯಂದಿರಾದ ಇವರಿಬ್ಬರು ಒಟ್ಟಿಗೆ ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ಹದಿನಾಲ್ಕು ವರ್ಷಗಳ ಹಿಂದೆಯೇ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಸೂರ್ಯ ರಾವ್ ಅವರು ಗುರು ಚಂದ್ರಶೇಖರ ನಾವಡ ಅವರಿಂದ ಭರತನಾಟ್ಯ ತರಬೇತಿ ಪಡೆದು ನೃತ್ಯ ಕ್ಷೇತ್ರಕ್ಕೆ ಕಾಲಿಟ್ಟ ಇವರು ನಂತರ ತಿರುಗಿ ನೋಡಿದ್ದೇ ಇಲ್ಲ. ಶ್ರೀಮತಿ ಅವರಿಂದ ಕೂಚಿಪುಡಿ, ಡಾ. ಮಾಯಾ ರಾವ್ ಅವರಿಂದ ಕಥಕ್, ಮಧು ನಟರಾಜ್ ಅವರಿಂದ ಭಾರತೀಯ ಸಮಕಾಲೀನ ನೃತ್ಯ ಹೀಗೇ ಹಲವಾರು ಶೈಲಿಯ ನೃತ್ಯದಲ್ಲಿ ಪರಿಣತರಾಗಿದ್ದಾರೆ.
ಅಲ್ಲದೇ ಭಾರತೀಯ ಸಮರ ಕಲೆಗಳಾದ ಕಲರಿಪಯಟ್ಟು ಮತ್ತು ತಂಗ್-ಥಾ, ಕನ್ನಡದ ಕಲೆಯಾದ ಯಕ್ಷಗಾನವನ್ನೂ ಕರಗತ ಮಾಡಿಕೊಂಡಿದ್ದಾರೆ. ಇವರ ಸಾಧನೆಗೆ ರಾಷ್ಟ್ರೀಯ- ಅಂತರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದಿವೆ. ವಿದೇಶದಲ್ಲಿಯೂ ಹಲವು ಪ್ರದರ್ಶನಗಳನ್ನು ನೀಡುವ ಇವರ ಪ್ರತಿಭೆಗೆ ವ್ಯಾಪಕವಾದ ಮೆಚ್ಚುಗೆಯಿದೆ.
ಜೊತೆಗೆ ತಮ್ಮ ಪತ್ನಿ ಪ್ರಥಮ ಪ್ರಸಾದ್ ರಾವ್ ಅವರೊಂದಿಗೆ ಬೆಂಗಳೂರಿನಲ್ಲಿ ಮಹಾಮಾಯ ಆರ್ಟ್ಸ್ ಫೌಂಡೇಶನ್ ನಡೆಸುತ್ತಿರುವ ಸೂರ್ಯರಾವ್ 'ಆಪ್ತರಕ್ಷಕ' ಚಲನಚಿತ್ರದಲ್ಲಿಯೂ ನಟಿಸಿದ್ದಾರೆ. 'ನಾಗವಲ್ಲಿ' ತೆಲುಗು ಚಲನಚಿತ್ರ ಮತ್ತು ಇತ್ತೀಚೆಗಿನ ಸೂಪರ್ ಹಿಟ್ ತುಳು ಸಿನಿಮಾ 'ಪತ್ತನಾಜೆ' ಯಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.


Click it and Unblock the Notifications











